ಕೈಯಲ್ಲಿ ಲಾಠಿಯಲ್ಲ, ಖಡ್ಗ.. ಮಹಾರಾಣಿ ‘ರೂಪ’ದಲ್ಲಿ ಐಪಿಎಸ್ ಅಧಿಕಾರಿ..!

ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಈ ಅವತಾರವನ್ನು ನವರಾತ್ರಿ ಸಿಂಗಾರ ಎಂದಾದರೂ ಅನ್ನಿ, ಅಥವಾ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಅವರ ಅವತಾರ ರೂಪಿಣಿ ಎಂದೂ ಅನ್ನಿ. ಆದರೆ ಈಕೆಯ ಈ ಸೊಗಸು-ಸೊಬಗಿನ ಅವತಾರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ನವರಾತ್ರಿ ಸಡಗರ ಎಲ್ಲೆಲ್ಲೂ ಆವರಿಸಿದೆ. ದಸರಾ ಸಂಭ್ರಮ ಇನ್ನೂ ಮನೆಮಾಡಿದೆ.. ಈ ಹಬ್ಬ ಸಂಭ್ರಮದ ಸಂದರ್ಭದಲ್ಲಿ ಹೊಸ ಸಿನಿಮಾಗಳ ಬಿಡುಗಡೆಗೆ ಸಜ್ಜಾಗುವ ರೀತಿಯಲ್ಲೇ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಈ ಸೊಬಗು-ಸೊಗಸಿನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರುತಾಗಿರುವ ಡಿ.ರೂಪಾ, ಪೊಲೀಸ್ ಇಲಾಖೆಯ ಕಾಯಕಕ್ಕಷ್ಟೇ ಸೀಮಿತಗೊಳಿಸಿಲ್ಲ. ಬಣ್ಣದ ಲೋಕಕ್ಕೂ ಸೈ ಎಣಿಸಕೊಳ್ಳುವ ರೀತಿಯ ಪ್ರತಿಭೆ ಅವರದ್ದು. ಕಾಲೇಜು ಜೀವನದಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಅವರದ್ದು. ಕಲಾವಿದೆಯಾಗಿಯೂ ಗಮನಸೆಳೆಯುತ್ತಿರುವ ಡಿ.ರೂಪಾ, ಆಗಾಗ್ಗೆ ಉಪನ್ಯಾಸ ನೀಡುತ್ತಾ ಯುವಜನರ ಪಾಲಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.…

ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆ

ಮೈಸೂರು: ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಮನೆಮಾಡಿದೆ. ನವರಾತ್ರಿಯ 9ನೇ ದಿನವಾದ ಇಂದು ಎಲ್ಲೆಲ್ಲೂ ಆಯುಧ ಪೂಜೆಯ ಸಡಗರ ಗರಿಗೆದರಿದೆ. ಶಸ್ತ್ರಗಳಿಗೆ ಪೂಜೆಯಷ್ಟೇ ಅಲ್ಲ, ಯಂತ್ರಗಳಿಗೆ, ವಾಹನಗಳಿಗೂ ಪೂಜೆ ಸಲ್ಲಿಸಲಾಗುತ್ತಿದೆ. ದಸರಾ ಖ್ಯಾತಿಯ ಮೈಸೂರಿನಲ್ಲೂ ಆಯುಧ ಪೂಜೆ ಕೈಂಕರ್ಯ ಗಮನಸೆಳೆದಿದೆ. ಮೈಸೂರು ಅರಮನೆಯಲ್ಲಿ ಅರಸರ ಕಾಲದ ಆಯುಧಗಳಿಗೆ ಪೂಜೆ ನೆರವೇರುವುವುದು ಇಲ್ಲಿಯದೇ ಆದ ವಿಶೇಷ. ಯಧುವಂಶದ ಕುವರ ಯಧುವೀರ್ ಒಡೆಯರ್ ಉಪಸ್ಥಿತಿ ಕೂಡಾ ಗಮನಾರ್ಹ. ಇದೇ ವೇಳೆ ಮೈಸೂರು ದಸರಾದಲ್ಲಿ ಜಗತ್ತಿನ ಗಮನ ಕೇಂದ್ರೀಕರಿಸುವ ಜಂಬೂಸವಾರಿ ಮೆರವಣಿಗೆಗೂ ಸಕಲ ತಯಾರಿ ನಡೆದಿದೆ. ವಿಜಯದಶಮಿ ಮೆರವಣಿಗೆಯು ಮಂಗಳವಾರ (ಅಕ್ಟೊಬರ್ 24) ನಡೆಯಲಿದ್ದು, ಅಂತಿಮ ಹಂತದ ತಯಾರಿ ನಡೆದಿವೆ.. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಪ್ರದರ್ಶಿಸುವ ಸ್ತಬ್ಧಚಿತ್ರಗಳು ಜೊತೆಯಲ್ಲೇ ಗಜಪಡೆಗಳು ನಾಡಿನ ಅಧಿದೇವತೆ ಚಾಮುಂಡಿಯ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ‘ರಾಜಪಥ’ದಲ್ಲಿ ಸಾಗಲಿವೆ. ಜಂಬೂಸವಾರಿ ಮೆರವಣಿಗೆ ತಯಾರಿ ಹೀಗಿದೆ: ಮೈಸೂರು ಅರಮನೆಯ…

ಅಸಹಾಯಕರ ಪಾಲಿಗೆ ‘ವೀರಕೇಸರಿ’ ಯುವಕರೇ ಶಕ್ತಿ

ಬೆಳ್ತಂಗಡಿ ‘ವೀರಕೇಸರಿ’ ಯುವಕರ ಸಾಧನೆ.. 175ನೇ ಯೋಜನೆಯ 7ನೇ ಆಸರೆ ಮನೆ ನಿರ್ಮಾಣ.. ಅಸಹಾಯಕರ ಪಾಲಿಗೆ ಈ ಯುವಕರೇ ಶಕ್ತಿ.. ಮಂಗಳೂರು: ಸಾಮಾಜಿಕ ಕಳಕಳಿ ಮೂಲಕ ಸೇವಾ ಕೈಂಕರ್ಯ ನಡೆಸುತ್ತಿರುವ ಬೆಳ್ತಂಗಡಿಯ ‘ವೀರಕೇಸರಿ’ ತಂಡ ಇದೀಗ ಮತ್ತೊಂದು ಕೆಲಸದ ಮೂಲಕ ನಾಡಿನ ಗಮನಸೆಳೆದಿದೆ. ಬೆಳ್ತಂಗಡಿ ಸಮೀಪದ ಶಿರ್ತಾಡಿ ವಿದ್ಯಾನಗರ ಮಕ್ಕಿಯಲ್ಲಿ ಅಸಹಾಯಕ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಮುನ್ನುಡಿ ಬರೆದಿದೆ. ತಾಯಿ ಮಗ. ಇಬ್ಬರೇ ಇರುವ ಹರೀಶ್ ಎಂಬವರ ಕುಟುಂಬಕ್ಕೆ 15.10.2023 ಭಾನುವಾರ ಈ ಮನೆ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿರುವ ವೀರ ಕೇಸರಿ ಹುಡುಗರು, ತಮ್ಮ ಸಂಘಟನೆಯ 175ನೇ ಯೋಜನೆಯ 7ನೇ ಆಸರೆ ಮನೆ ನಿರ್ಮಿಸಿಕೊಡುವ ಸಾಧನೆಯ ಹುಮ್ಮಸ್ಸಿನಲ್ಲಿದ್ದಾರೆ. ಭಾನುವಾರ ಬೆಳಿಗ್ಗೆ ನೆರವೇರಿದ ಈ ಸಮಾರಂಭದಲ್ಲಿ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಭಾರತೀಯ ಜನತಾ ಪಕ್ಷ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮಾಜಿ ಸೈನಿಕರಾದ…

ಪ್ರಯಾಣಿಕರನ್ನು ಹೊತ್ತು ಸಾಗಲಿದೆ KARTC ‘ಪಲ್ಲಕ್ಕಿ’: ಇನ್ನು ಮುಂದೆ ನಿತ್ಯವೂ ‘ಪಲ್ಲಕ್ಕಿ ಉತ್ಸವ’

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ರಾಜ್ಯದ ಜನರನ್ನು ಇನ್ನು ಮುಂದೆ ಪಲ್ಲಕಿಯಲ್ಲಿ ಹೊತ್ತು ಸಾಗಲಿದೆ. ಐರಾವತ, ಅಂಬಾರಿ ಇತ್ಯಾದ ಪೌರಾಣಿಕ ಹೆಸರುಗಳ ಸ್ಪರ್ಶದೊಂದಿಗೆ ಇಡೀ ದೇಶದ ಗಮನ ಕೇಂದ್ರೀಕರಿರುವ KSRTC ಇದೀಗ ಪ್ರಯಾಣಿಕರಿಗೆ ದೇವರ ಸ್ಥಾನ ನೀಡಿದೆಯೇ? ಎಂದು ಪ್ರಶ್ನಿಸಬಹುದು. ಒಂಥರಾ ಅದೇ ರೀತಿಯ ನಡೆ ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆಯದ್ದು. ‘ಪಲ್ಲಕಿ’ ಎಂದರೆ ದೇವರನ್ನು ಹೊತ್ತು ಸಾಗುವಂಥದ್ದು. ರಾಜ್ಯದ ಸಾರಿಗೆ ಇತಿಹಾಸದಲ್ಲಿ ಕೆಎಸ್ಸಾರ್ಟಿಸಿ ತನ್ನ ಪ್ರಯಾಣಿಕರಿಗೆ ಹೆಚ್ಚಿನ ಗೌರವ ನೀಡುವ ವ್ಯವಸ್ಥೆ ರೂಪಿಸಿದೆ. ಹೊಸದಾಗಿ ಐಷಾರಾಮಿ ಬಸ್ ಸೇವೆ ಆರಂಭಿಸಿರುವ ನಿಗಮವು ಇದೀಗ ‘ಪಲ್ಲಕಿ’ ಎಂಬ ಹೊಸ ಬ್ರಾಂಡ್ ಮೂಲಕ ಸೇವೆಯನ್ನು ಹೊಸ ಮಜಲಿಗೆ ಕೊಂಡೊಯ್ಯಲು ಸಜ್ಜಾಗಿದೆ. ಏನಿದು ‘ಪಲ್ಲಕ್ಕಿ’? ಈವರೆಗೂ ರಾಜಹಂಸ. ಐರಾವತ, ಅಂಬಾರಿ, ಅಂಬಾರಿ ಉತ್ಸವ, ಇತ್ಯಾದಿ ಪುರಾಣ ಕಥೆಗಳಲ್ಲಿ ಕಂಡುಬರುವ ಹೆಸರುಗಳಲ್ಲಿ ಸಾರಿಗೆ ಸೇವೆ ನೀಡಲಾಗುತ್ತಿತ್ತು. ಈ ನಡುವೆ…

ನ.25,26ರಂದು ಬೆಂಗಳೂರಿನಲ್ಲಿ ‘ಕಂಬಳೋತ್ಸವ’ ತಯಾರಿ ಹೇಗಿದೆ ಗೊತ್ತಾ?

ಮಂಗಳೂರು: ಕರಾವಳಿಯ ಸಾಂಪ್ರದಾಯಿಕ ಕಂಬಳೋತ್ಸವದ ರಂಗು ರಾಜಧಾನಿ ಬೆಂಗಳೂರಿಗೂ ಪಸರಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು “ಬೆಂಗಳೂರು ಕಂಬಳ-ನಮ್ಮ ಕಂಬಳ’ ಹೆಸರಲ್ಲಿ ಹೊಸ ಕಂಬಳ ಜಗತ್ತು ಅನಾವರಣಗೊಳ್ಳಲಿದೆ. ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್‌ ಕುಮಾರ್‌ ರೈ ನೇತೃತ್ವದಲ್ಲಿ ‘ಬೆಂಗಳೂರು ಕಂಬಳ-ನಮ್ಮ ಕಂಬಳ’ಕ್ಕೆ ಭರ್ಜರಿ ತಯಾರಿ ಸಾಗಿದ್ದು, ಈ ಸಂಬಂಧ ತುಳುನಾಡಿನಲ್ಲೂ ಕಾರ್ಯತಂತ್ರ ನಡೆಯುತ್ತಿದೆ. ಈ ಸಂಬಂಧ ಮಂಗಳೂರಿನಲ್ಲಿ ಬಾನುವಾರ ನಡೆದ ಸಭೆ ಕಂಬಳ ಕಸರತ್ತಿನ ಕೇಂದ್ರಬಿಂದುವಾಯಿತು. ಶಾಸಕ ಅಶೋಕ ರೈ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ , ಕಂಬಳ ಸಮಿತಿಯ ಪ್ರಮುಖರಾದ ಪಿ.ಆರ್‌. ಶೆಟ್ಟಿ, ಎರ್ಮಾಳ್‌ ರೋಹಿತ್‌ ಹೆಗ್ಡೆ, ಲೋಕೇಶ್‌, ವಿಜಯ ಕುಮಾರ್‌ ಕಂಗಿನಮನೆ, ಚಂದ್ರಹಾಸ್‌ ಸನಿಲ್‌, ಮುರಳೀಧರ್‌ ಸಹಿತ ಅನೇಕರು ಭಾಗವಹಿಸಿದ್ದರು. ಸಭೆಯ ಬಳಿಕ ಸುದ್ದಿಗಾರರಿಗೆ…

ಮುಖದ ಸೌಂದರ್ಯಕ್ಕೆ ಮೊಡವೆಗಳು ಅಡ್ಡಿಯೇ? ಪರಿಹಾರಕ್ಕಾಗಿ ಈ ಉಪಕ್ರಮ ಅನುಸರಿಸಿ

ಮುಖದ ಸೌಂದರ್ಯಕ್ಕೆ ಮೊಡವೆಗಳು ಅಡ್ಡಿಯಾಗುವುದು ಸಹಜ. ಮೊಡವೆಗಳಿಂದ ಮುಕ್ತರಾಗಿ ಆರೋಗ್ಯ ತ್ವಚೆ ಪಡೆಯಲು ಕೆಲವೊಂದು ಉಪಾಯಗಳನ್ನು ಅನುಸರಿಸಬಹುದು. ಪ್ರಮುಖವಾಗಿ ಜೀವನಶೈಲಿ ಬದಲಾಗಬೇಕು. ನಿಯಮಿತ ಶ್ರಮದೀಪ್ತ ಜೀವನಶೈಲಿ, ಸರಿಯಾದ ಮತ್ತು ಸಾಕಾಗುವಷ್ಟು ನಿದ್ದೆ ಮಾಡಬೇಕು. ಜಂಕ್ ಫುಡ್ ನಂತಹ ತಿಂಡಿಗಳ ಕಡಿವಾಣ ಕೂಡಾ ಮೊಡವೆಗಳ ಸ್ವಸ್ಥತೆಗೆ ಸಹಕಾರಿ ಸೂತ್ರ. ಪ್ರೊಟೀನ್-ಸಮೃದ್ಧ ಆಹಾರ, ಹಾಲಿನ ಉಪಯೋಗವನ್ನು ಹಾಗೂ ತಿಂಡಿಗಳನ್ನು ನಿಯಮಿತವಾಗಿ ಸೇವಿಸುವುದು ಮೊಡವೆಗಳ ಸ್ವಸ್ಥತೆಗೆ ಸಹಾಯ ಮಾಡಬಹುದು. ಮಾಲಿನ್ಯ ನಿವಾರಣೆಗಾಗಿ ಅತಿಯಾದ ರಾಸಾಯನಿಕ ಪದಾರ್ಥಗಳ ಬಳಕೆಯನ್ನು ಹಿಡಿದುಕೊಳ್ಳಬೇಕು. ಇದರಿಂದ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಉಲ್ಬಣಗೊಳ್ಳುತ್ತವೆ. ಈಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಸೂಕ್ತ ವಿಧಾನ. ಜೀರ್ಣ ಶಕ್ತಿ ಸ್ವಸ್ಥವಾಗಿದ್ದಲ್ಲಿ, ಮೊಡವೆಗಳ ಸಮಸ್ಯೆ ಕಡಿಮೆಯಾಗಬಹುದು. ಫೈಬರ್-ಸಮೃದ್ಧ ಆಹಾರವನ್ನು ಸೇವಿಸುವುದು ಪಚನಕ್ರಿಯೆಯನ್ನು ಸುಧಾರಿಸಬಹುದು. ಇದರಿಂದ ಮಲಬದ್ಧತೆ ಸಮಸ್ಯೆಗಳು ಕಡಿಮೆಯಾಗಬಹುದು.

ಸ್ಟಾರ್ ಫ್ರೂಟ್: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಅತ್ಯುತ್ತಮ ಆಹಾರ

ಸ್ಟಾರ್ ಫ್ರೂಟ್ ಹಣ್ಣುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಇವುಗಳಲ್ಲಿ ವಿಟಮಿನ್ ಸಿ, ಬಿ2, ಬಿ6, ಬಿ9 ವಿಟಮಿನ್‌ಗಳು, ಫೈಬರ್, ಪೊಟ್ಯಾಸಿಯಮ್, ಸತು, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ, ಫೋಲೇಟ್, ತಾಮ್ರ, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಸ್ಟಾರ್ ಫ್ರೂಟ್ ಕೊಲೆಸ್ಟ್ರಾಲ್ ನನ್ನೆಯ ಕ್ರಿಯೆಯನ್ನು ತಡೆದು ರಕ್ತದಿಂದ ಕೊಬ್ಬಿನ ಅಣುಗಳನ್ನು ತೆಗೆದುಹಾಕುತ್ತದೆ. ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಲು ಇದು ಉಪಯುಕ್ತವಾಗಿದೆ. ಅಲ್ಲದೇ, ತೂಕ ಇಳಿಕೆಗೂ ಸಹಾಯಕಾರಿಯಾಗಿರುವ ಈ ಹಣ್ಣಿನಲ್ಲಿರುವ ನಾರಿನಂಶವು ಚಯಾಪಚಯವನ್ನು ಸರಳಗೊಳಿಸುತ್ತದೆ.

“ವಯಸ್ಸಾಗುವಿಕೆ ತಡೆಯಲು ಕ್ಯಾರೆಟ್: ಮುಖದ ಆರೋಗ್ಯಕ್ಕೆ ಹೊತ್ತ ಉತ್ತಮ ಆಹಾರ”

ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮುಖದ ಸುಕ್ಕುಗಳು ಉಂಟಾಗುತ್ತವೆ ಮತ್ತು ಇದಕ್ಕೆ ಕಾರಣ ಪೌಷ್ಟಿಕಾಂಶದ ಕೊರತೆಯೇ. ಕ್ಯಾರೆಟ್ ನಲ್ಲಿ ವಿಟಮಿನ್ ಸಿ ಅಧಿಕವಾಗಿದೆ ಮತ್ತು ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಚಿಕ್ಕ ವಯಸ್ಸಿನಲ್ಲೇ ಮುಖದಲ್ಲಿ ಕಾಣಿಸಿಕೊಳ್ಳುವ ಸುಕ್ಕುಗಳು ಮತ್ತು ವಯಸ್ಸಾದ ಸಮಸ್ಯೆಗಳನ್ನು ತೊಡೆದುಹಾಕಲು ಕ್ಯಾರೆಟ್ ಸಹಾಯ ಮಾಡುತ್ತದೆ. ಕ್ಯಾರೆಟ್‌ನಲ್ಲಿರುವ ಬೀಟಾ-ಕ್ಯಾರೋಟಿನ್ ಆಂಟಿಆಕ್ಸಿಡೆಂಟ್‌ಗಳು ಚರ್ಮದ ಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತವೆ. ಇದರಿಂದ ಚರ್ಮದ ಸಮಸ್ಯೆ ದೂರವಾಗುತ್ತದೆ. ಇದರೊಂದಿಗೆ ಸೌಂದರ್ಯವೂ ಹೆಚ್ಚುತ್ತದೆ.

“ಕ್ಯಾರೆಟ್”: ಅಂಗೈಯಲ್ಲೇ ಅಡಗಿದೆ ಆರೋಗ್ಯದ ಗುಟ್ಟು

ಕ್ಯಾರೆಟ್ ತಿನ್ನುವುದು ಕಣ್ಣಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ಕಣ್ಣಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಇವುಗಳ ಅನುಕೂಲವೆಂದರೆ ಅಡುಗೆ ಮಾಡದೆ ನೇರವಾಗಿ ತಿನ್ನಬಹುದು. ಕ್ಯಾರೆಟ್ ಅನ್ನು ಹೀಗೆ ತಿಂದರೆ ತುಂಬಾ ರುಚಿಯಾಗಿರುತ್ತದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕ್ಯಾರೆಟ್ ನಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಎ ಅಂಶ ಹೆಚ್ಚಾಗಿರುತ್ತದೆ. ಇದಲ್ಲದೆ ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಬಿ 8, ವಿಟಮಿನ್ ಕೆ, ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್ ಅಂಶವೂ ಅಧಿಕವಾಗಿದೆ. ಕ್ಯಾರೆಟ್ ನಲ್ಲಿ ವಿಟಮಿನ್ ಎ ಅಧಿಕವಾಗಿದೆ. ಈ ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್, ಶಕ್ತಿಯುತವಾದ ಉತ್ಕರ್ಷಣ ನಿರೋಧಕವೂ ಹೇರಳವಾಗಿದೆ. ಹಾಗಾಗಿ ದೈನಂದಿನ ಆಹಾರದಲ್ಲಿ ಕ್ಯಾರೆಟ್ ಸೇರಿಸುವುದು ತುಂಬಾ ಒಳ್ಳೆಯದು. ಇದರ ಜ್ಯೂಸ್ ಕುಡಿಯುವುದರಿಂದ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವುದಲ್ಲದೆ ಕಣ್ಣಿನ ಆರೋಗ್ಯವೂ ಸುಧಾರಿಸುತ್ತದೆ. ಮುಖ್ಯವಾಗಿ ಕಣ್ಣಿನ ಪೊರೆ ಮತ್ತು ರಿಕೆಟ್‌ಗಳಂತಹ ಸಮಸ್ಯೆಗಳು…

ಕಿಡ್ನಿ ಆರೋಗ್ಯಕ್ಕೆ ಯಾವ ಎಣ್ಣೆ ಸೂಕ್ತ? ಇಲ್ಲಿದೆ ಉತ್ತರ

ಕಿಡ್ನಿ ಮನುಷ್ಯನ ಪ್ರಮುಖ ಅಂಗ. ಕಡ್ನಿ ಆರೋಗ್ಯ ಕಾಪಾಡಿದಲ್ಲಿ ಆಯುಷ್ಯ ಹೆಚ್ಚಿದಂತೆ ಎಂಬ‌ನಂಬಿಕೆ ಇದೆ‌. ಕಿಡ್ನಿ ಆರೋಗ್ಯ ಕಾಪಾಡಲು ಉತ್ತಮ ಆಹಾರ ಪದ್ದತಿಯೂ ಮುಖ್ಯ. ಎಣ್ಣೆಯ ಬಳಕೆಗೂ ಪ್ರಮುಖ್ಯತೆ ನೀಡಬೇಕು. ಹಾಗಾದರೆ ಒಳ್ಳೆಯ ಎಣ್ಣೆ ಯಾವುದು ಎಂದರೆ ಹೇಗೆ ನಿರ್ಧರಿಸಲಿ? ಈ ಪ್ರಶ್ನೆಗೆ ಸಮಾಧಾನದ ಉತ್ತರ – ಆಲಿವ್ ಎಣ್ಣೆ ಒಳ್ಳೆಯ ಆಯ್ಕೆ. ಅದರಿಂದ ಹೃದಯ ಆರೋಗ್ಯವನ್ನು ಉತ್ತಮಗೊಳಿಸಬಹುದು. ಇದಲ್ಲದೆ, ಅದರಲ್ಲಿ ಅಪರ್ಯಾಪ್ತ ಕೊಬ್ಬುಗಳು ಮತ್ತು ವಿಟಮಿನ್-ಇ ಹಾಗೂ ಒಲೀಕ್ ಆಮ್ಲದ ಹೇರಳವಿದ್ದರಿಂದ ಅದು ನಮ್ಮ ಕಿಡ್ನಿಯ ಸಂರಕ್ಷಣೆಗೆ ಸಹಾಯಕವಾಗಿದೆ. ಆದ್ದರಿಂದ ಆಲಿವ್ ಎಣ್ಣೆಯನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಉಪಯುಕ್ತವಾಗಿದೆ