ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ; ಹೊಸ ನಿರ್ಬಂಧಿತ ವಲಯ ಘೋಷಿಸಿದ ಇರಾನ್

ಟೆಹ್ರಾನ್: ಜಾಗತಿಕ ತೈಲ ಸಾಗಣೆಯ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಅಮೆರಿಕ ತನ್ನ ಸೇನಾ ದಾಳಿ ಮತ್ತು ಬೆದರಿಕೆಗಳನ್ನು ನಿಲ್ಲಿಸದಿದ್ದರೆ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ಹಾಗೂ ಪರ್ಷಿಯನ್ ಕೊಲ್ಲಿಯ ಕೆಲವು ಭಾಗಗಳನ್ನು ಒಳಗೊಂಡಂತೆ ಹೊಸ ‘ನಿರ್ಬಂಧಿತ ಕಡಲ ವಲಯ’ ಸ್ಥಾಪಿಸಲು ಇರಾನ್ ನಿರ್ಧರಿಸಿದೆ. ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ಈ ಕುರಿತು ಎಚ್ಚರಿಕೆ ನೀಡಿದ್ದು, ಟೆಹ್ರಾನ್‌ನೊಂದಿಗೆ ಸಮನ್ವಯ ಮಾಡಿಕೊಳ್ಳದೆ ಈ ವಲಯ ಪ್ರವೇಶಿಸುವ ಹಡಗುಗಳ ವಿರುದ್ಧ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿದ್ದಾರೆ. ಭಾನುವಾರ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್‌ಐಬಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಮೆರಿಕ ಇರಾನ್ ವಿರುದ್ಧ ಬೆದರಿಕೆ ಅಥವಾ ದಾಳಿ ನಡೆಸದಿದ್ದರೆ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಇರಾನ್ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಜೂನ್‌ನಲ್ಲಿ ಇರಾನ್-ಅಮೆರಿಕ…

ವಿಭಜಿಸುವುದಕ್ಕಿಂತ ಒಗ್ಗೂಡಿಸುವ ಮೌಲ್ಯಗಳಿಗೆ ಒತ್ತು ನೀಡಿ: ಮೋಹನ್ ಭಾಗವತ್

ಲಂಡನ್: ಜನರನ್ನು ವಿಭಜಿಸುವ ಭಿನ್ನಾಭಿಪ್ರಾಯಗಳಿಗಿಂತ ಎಲ್ಲರನ್ನು ಒಗ್ಗೂಡಿಸುವ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಲಂಡನ್‌ನಲ್ಲಿ ನಡೆದ ‘ಏಕತೆಯ ಆಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣಕ್ಕೆ ಆಧಾರವಾಗಿರುವ ಪ್ರಮುಖ ಮೌಲ್ಯ ‘ಅಪ್ನಾಪನ್’ ಎಂದು ಹೇಳಿದರು. ವ್ಯಕ್ತಿಗಳು, ಸಮಾಜ ಮತ್ತು ಮಾನವೀಯತೆಯ ಬಗ್ಗೆ ಶುದ್ಧ ಹಾಗೂ ನಿಸ್ವಾರ್ಥ ಪ್ರೀತಿಯೇ ಇದರ ಅರ್ಥ ಎಂದರು. ವೈವಿಧ್ಯತೆಯಲ್ಲೇ ಏಕತೆ ಹಿಂದೂ ಚಿಂತನೆಯು ವೈವಿಧ್ಯತೆಯನ್ನು ಒಪ್ಪಿಕೊಂಡು ಗೌರವಿಸುವುದನ್ನು ಪ್ರತಿಪಾದಿಸುತ್ತದೆ ಎಂದು ಭಾಗವತ್ ಹೇಳಿದರು. ಏಕತೆ ಎಂದರೆ ವೈವಿಧ್ಯತೆಯ ಅನುಪಸ್ಥಿತಿ ಅಲ್ಲ. ವಿಭಿನ್ನ ಸಂಪ್ರದಾಯಗಳು, ಜೀವನಶೈಲಿ ಮತ್ತು ನಂಬಿಕೆಗಳನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸಬಹುದು ಎಂದರು. ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯವನ್ನು ಮತ್ತೊಂದು ಶತಮಾನಕ್ಕೆ ವಿಸ್ತರಿಸದೆ ಪೂರ್ಣಗೊಳಿಸುವ ಅಗತ್ಯವಿದೆ ಎಂದು ಹೇಳಿದ ಅವರು, ಹಲವು ತಲೆಮಾರುಗಳು ಒಟ್ಟಾಗಿ ಈ ಕಾರ್ಯದಲ್ಲಿ…

ಇರಾನ್‌ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ದಾಳಿ; ಪ್ರತಿ ದಾಳಿ ನಡೆಸುವುದಾಗಿ ಟೆಹ್ರಾನ್ ಎಚ್ಚರಿಕೆ

ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಅಮೆರಿಕ ತಿರುಗೇಟು ನೀಡಿದ್ದು, ಇರಾನ್‌ಗೆ ಸೇರಿದ ಮೂರು ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ಪೈಕಿ ಎರಡು ಹಡಗುಗಳನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಲಾಗಿದ್ದು, ಮತ್ತೊಂದು ಹಡಗು ಕೂಡ ಕಾರ್ಯನಿರ್ವಹಿಸದಂತೆ ಮಾಡಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ದಾಳಿಗೊಳಗಾದ ಹಡಗುಗಳನ್ನು M/T Downy, M/T Stark 1 ಮತ್ತು M/T Kylo ಎಂದು ಗುರುತಿಸಲಾಗಿದೆ. ಇವು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ (IRGC) ಹಾಗೂ ಅದರ ಬೆಂಬಲಿಗರಿಗೆ ಹಣಕಾಸು ಒದಗಿಸುವ ‘ನೆರಳು ಜಾಲ’ದ ಭಾಗವಾಗಿದ್ದವು ಎಂದು CENTCOM ಆರೋಪಿಸಿದೆ. ಇರಾನ್‌ನ ದಾಳಿಯ ಬಳಿಕ ಖಾರ್ಗ್ ದ್ವೀಪದ ಕರಾವಳಿ ಮತ್ತು ಜಾಸ್ಕ್ ಸಮೀಪ ಎರಡು ಕಚ್ಚಾ ತೈಲ ಸಾಗಣೆ ಹಡಗುಗಳ ಮೇಲೆ ದಾಳಿ ನಡೆಸಲಾಗಿದೆ. ಗಲ್ಫ್ ಆಫ್ ಓಮನ್‌ನಲ್ಲಿದ್ದ ಖಾಲಿ ಹಡಗೊಂದರ ಮೇಲೂ ದಾಳಿ ನಡೆದಿದೆ.…

ಪಿಕ್ಯಾಕ್ಸ್ ಮೌಂಟನ್ ಮೇಲೆ ಅಮೆರಿಕ ದಾಳಿ? ಟ್ರಂಪ್‌ನಿಂದ ಇರಾನ್‌ಗೆ ಕಠಿಣ ಎಚ್ಚರಿಕೆ

ವಾಷಿಂಗ್ಟನ್: ಇರಾನ್‌ನ ರಹಸ್ಯ ಭೂಗತ ಪರಮಾಣು ನೆಲೆ ‘ಪಿಕ್ಯಾಕ್ಸ್ ಮೌಂಟನ್’ ಮೇಲೆ ಅಮೆರಿಕ ಶೀಘ್ರದಲ್ಲೇ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸಲು ಮುಂದಾದರೆ ಅಮೆರಿಕ ಸುಮ್ಮನಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪಿಕ್ಯಾಕ್ಸ್ ಮೌಂಟನ್‌ನಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ಪತ್ತೆಯಾದರೂ ಅಮೆರಿಕ ಅದನ್ನು ಗುರಿಯಾಗಿಸಲಿದೆ ಎಂದರು. ಅಮೆರಿಕದ ಗುಪ್ತಚರ ಸಂಸ್ಥೆಗಳು ಇರಾನ್‌ನಲ್ಲಿನ ಬೆಳವಣಿಗೆಗಳ ಮೇಲೆ ನಿಗಾ ಇರಿಸಿವೆ ಎಂದು ಹೇಳಿದರು. “ಇರಾನ್ ಪರಮಾಣು ಬಾಂಬ್ ತಯಾರಿಸದಂತೆ ತಡೆಯುವುದೇ ನಮ್ಮ ಪ್ರಮುಖ ಉದ್ದೇಶ. ಏನಾದರೂ ತಪ್ಪಾದರೆ ನಾವು ದಾಳಿ ಮಾಡುತ್ತೇವೆ, ಕಠಿಣವಾಗಿ ಹೊಡೆಯುತ್ತೇವೆ,” ಎಂದು ಟ್ರಂಪ್ ಎಚ್ಚರಿಸಿದರು. ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ ಅವರು, ಕಳೆದ ಐದು ತಿಂಗಳಲ್ಲಿ ಅಮೆರಿಕದ ಪ್ರಮುಖ ಗುರಿ ಇರಾನ್…

ಸೆ.24ಕ್ಕೆ ಷಿ ಜಿನ್‌ಪಿಂಗ್‌ಗೆ ಟ್ರಂಪ್ ಔತಣಕೂಟ

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರಿಗೆ ಸೆಪ್ಟೆಂಬರ್ 24ರಂದು ವೈಟ್‌ಹೌಸ್‌ನಲ್ಲಿ ರಾಜ್ಯ ಔತಣಕೂಟ ಆಯೋಜಿಸುವುದಾಗಿ ತಿಳಿಸಿದ್ದಾರೆ. 2016ರ ಬಳಿಕ ಇದೇ ಮೊದಲ ಬಾರಿಗೆ ಷಿ ಜಿನ್‌ಪಿಂಗ್ ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧ, ವ್ಯಾಪಾರ ಹಾಗೂ ಹಲವು ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ. ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಷಿ ಜಿನ್‌ಪಿಂಗ್ ಅವರನ್ನು ‘ಉತ್ತಮ ವ್ಯಕ್ತಿ’ ಎಂದು ಬಣ್ಣಿಸಿದರು. ಅಮೆರಿಕಾ ಮತ್ತು ಚೀನಾ ಪರಸ್ಪರ ಸ್ಪರ್ಧಿಗಳಾಗಿದ್ದರೂ ಎರಡೂ ದೇಶಗಳ ನಡುವೆ ಉತ್ತಮ ವ್ಯಾಪಾರ ಸಂಬಂಧವಿದೆ ಎಂದರು. “ಅವರ ಭೇಟಿಯನ್ನು ಎದುರು ನೋಡುತ್ತಿದ್ದೇವೆ. ಅಧ್ಯಕ್ಷ ಷಿ ಅವರೊಂದಿಗೆ ನಮಗೆ ಉತ್ತಮ ಸಂಬಂಧವಿದೆ. ಚೀನಾದೊಂದಿಗೆ ಉತ್ತಮ ಕೆಲಸಗಳನ್ನು ಮಾಡಲು ಬಯಸುತ್ತೇವೆ” ಎಂದು ಟ್ರಂಪ್ ಹೇಳಿದರು. ಇದೇ ವೇಳೆ ಇರಾನ್‌ನಲ್ಲಿನ ಸಂಘರ್ಷದ…

ಲಂಡನ್‌ನಲ್ಲಿ ಮೋಹನ್ ಭಾಗವತ್‌ಗೆ ಸಾಂಪ್ರದಾಯಿಕ ಸ್ವಾಗತ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಶುಕ್ರವಾರ ಲಂಡನ್‌ನ ಹೀಥ್ರೋ ವಿಮಾನ ನಿಲ್ದಾಣ ತಲುಪಿದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಯುನೈಟೆಡ್ ಕಿಂಗ್‌ಡಮ್ ಪ್ರವಾಸದಲ್ಲಿರುವ ಭಾಗವತ್ ಅವರನ್ನು ವಿಮಾನ ನಿಲ್ದಾಣದಲ್ಲಿ ಭಾರತೀಯ ಸಮುದಾಯದ ಪ್ರತಿನಿಧಿಗಳು ಹಾಗೂ ಸಂಘದ ಕಾರ್ಯಕರ್ತರು ಸಾಂಪ್ರದಾಯಿಕ ರೀತಿಯಲ್ಲಿ ಬರಮಾಡಿಕೊಂಡರು.

ನೇಪಾಳ ಪ್ರವಾಹದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆ, 9 ದಿನಗಳ ಬಳಿಕ ಸುರಂಗದಿಂದ ಹೊರಬಂದ ಇಬ್ಬರು ಕಾರ್ಮಿಕರು

ಕಠ್ಮಂಡು: ನೇಪಾಳ–ಚೀನಾ ಗಡಿ ಭಾಗದಲ್ಲಿ ಸಂಭವಿಸಿದ ಹಿಮನದಿ ಕುಸಿತ ಹಾಗೂ ಭೀಕರ ಜಲಪ್ರಳಯಕ್ಕೆ ಮೃತಪಟ್ಟವರ ಸಂಖ್ಯೆ 1,250 ದಾಟಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, 5,083ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಮಣ್ಣಿನ ರಾಶಿ ಹಾಗೂ ಪ್ರವಾಹದ ನೀರು ನುಗ್ಗಿರುವ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ನೂರಾರು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳ ಸೇನಾ ಸಿಬ್ಬಂದಿ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಮಹಾ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹೊಸ ಭರವಸೆ ಮೂಡಿಸುವ ಘಟನೆ ನಡೆದಿದೆ. ಆಗಸ್ಟ್ 26ರಂದು ಸಂಭವಿಸಿದ ಪ್ರವಾಹದ ಬಳಿಕ ಅವಶೇಷಗಳಿಂದ ಮುಚ್ಚಿಹೋಗಿದ್ದ ತ್ರಿಶೂಲಿ–3ಎ ಜಲವಿದ್ಯುತ್ ಯೋಜನೆಯ ಸುರಂಗದಿಂದ ಒಂಬತ್ತು ದಿನಗಳ ಬಳಿಕ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸಲಾಗಿದೆ. ರಕ್ಷಿಸಲಾದವರನ್ನು ಮೆಕ್ಯಾನಿಕಲ್ ಫೋರ್‌ಮನ್ ಮತ್ತು ಮೆಕ್ಯಾನಿಕಲ್ ಸೂಪರ್‌ವೈಸರ್ ಎಂದು ಗುರುತಿಸಲಾಗಿದೆ.…

ಸಮಸ್ಯೆ ಬಗೆಹರಿಸಲಾಗದಿದ್ದರೆ ಹೆಸರು ಬದಲಿಸೋಣ’: ಹಾರ್ಮುಜ್ ಜಲಸಂಧಿಗೆ ಟ್ರಂಪ್‌ ಹೆಸರು!

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತೊಮ್ಮೆ ತಮ್ಮ ವಿಚಿತ್ರ ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ. ಅಮೆರಿಕ-ಇರಾನ್ ಸಂಘರ್ಷದ ನಡುವೆಯೇ ಇದೀಗ ವಿಶ್ವದ ಪ್ರಮುಖ ಜಲಮಾರ್ಗಗಳಲ್ಲಿ ಒಂದಾದ Strait of Hormuzಗೆ ತಮ್ಮ ಹೆಸರಿಡುವ ಪ್ರಸ್ತಾಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಟ್ರಂಪ್‌, ಹಾರ್ಮುಜ್ ಜಲಸಂಧಿಯನ್ನು ‘Trump Strait’ ಎಂದು ಮರುನಾಮಕರಣ ಮಾಡಬಹುದೇ ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅದರ ಹೆಸರನ್ನಾದರೂ ಬದಲಿಸಬಹುದು ಎಂಬುದು ಟ್ರಂಪ್‌ ಅವರ ತರ್ಕವಾಗಿದೆ. ಟ್ರಂಪ್‌ ಅವರ ‘ಹೆಸರು ಬದಲಾವಣೆ’ ಆಸಕ್ತಿ ಇದೇ ಮೊದಲೇನಲ್ಲ. 2025ರ ಜನವರಿಯಲ್ಲಿ ಅವರು Gulf of Mexico ಅನ್ನು ‘Gulf of America’ ಎಂದು ಮರುನಾಮಕರಣ ಮಾಡುವ ಆದೇಶ ಹೊರಡಿಸಿದ್ದರು. ಇದಾದ ಬಳಿಕ ಕೆನಡಾ ವಿಚಾರದಲ್ಲೂ ಹೆಸರು ಬದಲಾವಣೆಯ ಪ್ರಯತ್ನ ನಡೆದಿತ್ತು. ಅಮೆರಿಕದೊಂದಿಗೆ ಕೆನಡಾ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಟ್ರಂಪ್‌,…

ಭಾರತ–ಅಫ್ಘಾನಿಸ್ತಾನ ದ್ವಿಪಕ್ಷೀಯ ವ್ಯಾಪಾರ ಬಲವರ್ಧನೆಗೆ ಚರ್ಚೆ

ನವದೆಹಲಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ದ್ವಿಪಕ್ಷೀಯ ವ್ಯಾಪಾರ ಹಾಗೂ ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಹಲವು ಕ್ರಮಗಳ ಕುರಿತು ಚರ್ಚಿಸಿವೆ. ಸೆಪ್ಟೆಂಬರ್ 1ರಂದು ನಡೆದ ವ್ಯಾಪಾರ, ವಾಣಿಜ್ಯ ಮತ್ತು ಹೂಡಿಕೆ ಕುರಿತ ಜಂಟಿ ಕಾರ್ಯಕಾರಿ ಸಮಿತಿ (JWG)ಯ ವರ್ಚುವಲ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಎರಡೂ ದೇಶಗಳ ವಾಣಿಜ್ಯ, ಕೈಗಾರಿಕೆ, ಕಸ್ಟಮ್ಸ್, ನಿಯಂತ್ರಣ ಸಂಸ್ಥೆಗಳು ಹಾಗೂ ರಾಜತಾಂತ್ರಿಕ ನಿಯೋಗಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ವ್ಯಾಪಾರ ಸರಳೀಕರಣ, ಕಸ್ಟಮ್ಸ್ ಸಹಕಾರ, ಅಫ್ಘಾನ್ ವ್ಯಾಪಾರಿಗಳಿಗೆ ವೀಸಾ ಸೌಲಭ್ಯ, ಬ್ಯಾಂಕಿಂಗ್ ಮತ್ತು ಹಣಕಾಸು ಸಹಕಾರ, ಔಷಧ ಹಾಗೂ ಕೃಷಿ ಉತ್ಪನ್ನಗಳ ವ್ಯಾಪಾರ ಪ್ರಮುಖ ಚರ್ಚಾ ವಿಷಯಗಳಾಗಿದ್ದವು. ಇದರ ಜತೆಗೆ ಇಂಧನ ಸಹಕಾರ, ಹೂಡಿಕೆ ಉತ್ತೇಜನ, ಸುಂಕ ರಿಯಾಯಿತಿ, ಸರಕು ಸಾಗಣೆ ಸಂಪರ್ಕ ಹಾಗೂ ಬಂದರು ಸಂಬಂಧಿತ ವಿಚಾರಗಳ ಬಗ್ಗೆಯೂ ಉಭಯ ದೇಶಗಳು ಚರ್ಚಿಸಿದವು. ಕಸ್ಟಮ್ಸ್…

ನೇಪಾಳ ಪ್ರವಾಹ: 1,125ಕ್ಕೂ ಹೆಚ್ಚು ಮಂದಿ ಬಲಿ, 4,858 ಜನರು ಇನ್ನೂ ನಾಪತ್ತೆ

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹ ಮುಂದುವರಿದಿದ್ದು, ಸಾವಿನ ಸಂಖ್ಯೆ 1,127ಕ್ಕೆ ಏರಿಕೆಯಾಗಿದೆ. ಇನ್ನೂ 4,858 ಮಂದಿ ನಾಪತ್ತೆಯಾಗಿದ್ದು, ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳ ಪೊಲೀಸರ ಪ್ರಕಾರ, ಚಿತ್ವಾನ್‌ನಲ್ಲಿ 348, ನವಲಪರಾಸಿ ಪೂರ್ವದಲ್ಲಿ 217, ನವಲಪರಾಸಿ ಪಶ್ಚಿಮದಲ್ಲಿ 190, ನುವಾಕೋಟ್‌ನಲ್ಲಿ 155, ಗೋರಖಾದಲ್ಲಿ 66, ಧಾದಿಂಗ್‌ನಲ್ಲಿ 59, ರಸುವಾದಲ್ಲಿ 45 ಹಾಗೂ ತನಹುನ್‌ನಲ್ಲಿ 38 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿಯೂ ಒಂಬತ್ತು ಮೃತದೇಹಗಳು ಪತ್ತೆಯಾಗಿವೆ. ಪತ್ತೆಯಾದ ಮೃತದೇಹಗಳ ಪೈಕಿ 95 ಮಂದಿಯನ್ನು ಮಾತ್ರ ಗುರುತಿಸಲಾಗಿದ್ದು, ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಗುರುತು ಪತ್ತೆಯಾಗದ ಮೃತದೇಹಗಳ ಡಿಎನ್‌ಎ ಮಾದರಿ ಸೇರಿದಂತೆ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂರಕ್ಷಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗುರುತು ಪತ್ತೆ ಮಾಡಲು ಇವು ನೆರವಾಗಲಿವೆ ಎಂದು ಪ್ರಧಾನಿ ಬಾಲೇಂದ್ರ ಶಾ ತಿಳಿಸಿದ್ದಾರೆ. ರಕ್ಷಣಾ, ಪರಿಹಾರ ಹಾಗೂ ಪುನರ್‌ಸ್ಥಾಪನಾ ಕಾರ್ಯಾಚರಣೆಗಾಗಿ ಸುಮಾರು 7,912 ಪೊಲೀಸ್ ಸಿಬ್ಬಂದಿಯನ್ನು…