ಕೇರಳದಲ್ಲಿ ಕೈ ಮೇಲುಗೈ, ಆಡಳಿತಾರೂಢ ಎಲ್​ಡಿಎಫ್’ಗೆ ಸೋಲು; ಅಂತಿಮ ಬಲಾಬಲ ಹೀಗಿದೆ

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಗೆಲುವು ಸಾಧಿಸಿದ್ದು, ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್)ಗೆ ಭಾರೀ ಹಿನ್ನಡೆ ಎದುರಾಗಿದೆ. ಎಲ್‌ಡಿಎಫ್ ಸರ್ಕಾರದ 21 ಸಚಿವರು ಸೋಲುಂಡಿರುವುದು ಈ ಫಲಿತಾಂಶದ ಪ್ರಮುಖ ಅಂಶವಾಗಿದೆ. ಕಳೆದ ಎರಡು ದಶಕಗಳಲ್ಲಿನ ಅತ್ಯುತ್ತಮ ಪ್ರದರ್ಶನ ನೀಡಿರುವ ಯುಡಿಎಫ್, 10 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಮರಳುವ ದಿಸೆಯಲ್ಲಿ ಮುನ್ನಡೆ ಸಾಧಿಸಿದೆ. ಈ ಫಲಿತಾಂಶದೊಂದಿಗೆ ದೇಶದಲ್ಲಿ ಅಧಿಕಾರದಲ್ಲಿದ್ದ ಏಕೈಕ ಕಮ್ಯುನಿಷ್ಟ್ ಸರ್ಕಾರ ಪತನದ ಅಂಚಿಗೆ ತಲುಪಿದೆ. 2001ರ ಚುನಾವಣೆಯ ನಂತರ ಯುಡಿಎಫ್‌ಗೆ ಇದು ಅತ್ಯುತ್ತಮ ಫಲಿತಾಂಶವಾಗಿದ್ದು, ಆ ಸಂದರ್ಭದಲ್ಲಿ 99 ಸ್ಥಾನಗಳನ್ನು ಗೆದ್ದಿದ್ದ ಮೈತ್ರಿ ಈ ಬಾರಿ ಅದನ್ನು ಮೀರಿ ದಾಖಲೆ ನಿರ್ಮಿಸಿದೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ನೇತೃತ್ವದಲ್ಲಿ ನಡೆದ ಪ್ರಚಾರ ಫಲ ನೀಡಿದ್ದು, ರಾಜ್ಯದಾದ್ಯಂತ ಯುಡಿಎಫ್ ಅಲೆ ಸ್ಪಷ್ಟವಾಗಿ ಗೋಚರಿಸಿದೆ. ಕಾಂಗ್ರೆಸ್ ನೇತೃತ್ವದ…

ಬಂಗಾಳದಲ್ಲಿ ಮೋದಿ-ಶಾ ಮೋಡಿ; ಮಮತಾ ಬ್ಯಾನರ್ಜಿ ಹೀನಾಯ ಸೋಲು, ಅಂತಿಮ ಫಲಿತಾಂಶ ಹೀಗಿದೆ

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ–ಅಮಿತ್ ಶಾ ಜೋಡಿಯ ತಂತ್ರಗಾರಿಕೆಗೆ ಭಾರೀ ಫಲ ದೊರಕಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತದೊಂದಿಗೆ ಅಧಿಕಾರದತ್ತ ದಾಪುಗಾಲಿಟ್ಟಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಈ ಬಾರಿ ನಿರಾಶಾದಾಯಕ ಫಲಿತಾಂಶ ಎದುರಾಗಿದೆ. ಒಟ್ಟು 293 ಸ್ಥಾನಗಳಲ್ಲಿ ಬಿಜೆಪಿ 206 ಕ್ಷೇತ್ರಗಳನ್ನು ಗೆದ್ದು ದ್ವಿಶತಕ ಬಾರಿಸಿದ್ದು, ಭಾರೀ ಮೇಲುಗೈ ಸಾಧಿಸಿದೆ. ಇತ್ತ ಟಿಎಂಸಿ ಕೇವಲ 81 ಸ್ಥಾನಗಳಿಗೆ ಸೀಮಿತವಾಗಿ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ 2 ಸ್ಥಾನಗಳಲ್ಲಿ ಜಯಗಳಿಸಿದ್ದು, ಇತರೆ ಪಕ್ಷಗಳು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ನಾಲ್ಕನೇ ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಲು ಉತ್ಸಾಹದಲ್ಲಿದ್ದ ಮಮತಾ ಬ್ಯಾನರ್ಜಿ ಅವರಿಗೆ ಈ ಚುನಾವಣೆಯಲ್ಲಿ ಭಾರೀ ಹಿನ್ನಡೆ ಎದುರಾಗಿದೆ. ತಮ್ಮ ತವರು ಕ್ಷೇತ್ರ ಭವಾನಿಪುರದಲ್ಲಿಯೇ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಎದುರು ಸೋಲು ಕಂಡಿರುವುದು ಟಿಎಂಸಿ ಶಿಬಿರಕ್ಕೆ ಮತ್ತಷ್ಟು ಆಘಾತ ತಂದಿದೆ. ರಾಜಕೀಯ…

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಹೀಗಿದೆ

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಅಸ್ಸಾಮ್ ಪುದುಚೆರಿಯಲ್ಲಿ ಬಿಜೆಪಿ ನೇತೃತ್ವದ NDA ಮಿತ್ರಕೂಟ ಅಧಿಕಾರವನ್ನು ಉಳಿಸಿಕೊಂಡಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ UDF ಜಯಭೇರಿ ಭಾರಿಸಿದ್ದು, ತಮಿಳುನಾಡಿನಲ್ಲಿ ನೇತೃತ್ವದ ಹೊಸ ಪಕ್ಷ TVK ವಿಜಯ ಪತಾಕೆ ಹಾರಿಸಿದೆ. ಆದರೆ, ತಮಿಳುನಾಡಿನಲ್ಲಿ ಸರ್ಕಾರ ರಚಿಸಲು TVK ಯು ಇತರ ಪಕ್ಷಗಳ ಬೆಂಬಲ ಪಡೆಯುವ ಅನಿವಾರ್ಯತೆ ನಿರ್ಮಾಣವಾಗಿದೆ. ಪಶ್ಚಿಮ ಬಂಗಾಳ: ಬಂಗಾಳದ ರಣಕಣದಲ್ಲಿ ಮೋದಿ-ಶಾ ಜೋಡಿಯ ತಂತ್ರಗಾರಿಕೆಗೆ ಮಮತಾ ಬ್ಯಾನರ್ಜಿ ಸೋತು ಸುಣ್ಣವಾಗಿದ್ದಾರೆ. ಒಟ್ಟು 293 ಸ್ಥಾನಗಳಲ್ಲಿ ಬಿಜೆಪಿ 206 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದ್ವಿಶತಕ ಬಾರಿಸಿದೆ. ಆಡಳಿತಾರೂಢ ಟಿಎಂಸಿ ಕೇವಲ 81 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ಮೂಲಕ ಅಧಿಕಾರ ಕಳೆದುಕೊಂಡಿದೆ. ಒಟ್ಟು ಸ್ಥಾನಗಳು: 293 ಬಿಜೆಪಿ: 206 ಸ್ಥಾನಗಳು (ಸ್ಪಷ್ಟ ಬಹುಮತ) ಟಿಎಂಸಿ: 81 ಸ್ಥಾನಗಳು ಕಾಂಗ್ರೆಸ್:…

ಬಾಗಲಕೋಟೆ, ದಾವಣಗೆರೆಯಲ್ಲಿ ಕಾಂಗ್ರೆಸ್‌ ಗೆಲುವು ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ: ಸುರ್ಜೇವಾಲ

ಬೆಂಗಳೂರು: ಕರ್ನಾಟಕದ ಹೈವೋಲ್ಟೇಜ್ ಕದನ ಎಂದೇ ಬಿಂಬಿತವಾಗಿದ್ದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ತನ್ನ ಪಾರುಪತ್ಯವನ್ನು ಮೆರೆದಿದೆ. ಈ ಗೆಲುವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು “ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ” ಎಂದು ಬಣ್ಣಿಸಿದ್ದಾರೆ. ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಹಾಗೂ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಶಾಮನೂರು ಅವರು ಬಿಜೆಪಿಯನ್ನು ಮಣಿಸಿ ವಿಜಯಮಾಲೆ ಧರಿಸಿದ್ದಾರೆ. ಈ ಫಲಿತಾಂಶವು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನತೆ ನೀಡಿದ ಸಮ್ಮತಿಯಾಗಿದೆ. ಹೀಗಾಗಿ ಇದು ಕಾಂಗ್ರೆಸ್ ಗ್ಯಾರಂಟಿಗಳ ಜಯ, ಪ್ರತಿಯೊಬ್ಬ ಕನ್ನಡಿಗನ ಜಯ, ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ, ಕಾಂಗ್ರೆಸ್ ಕಾರ್ಯಕರ್ತರ ಜಯ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು…

ಕೆಕೆಆರ್ ಗೆಲುವಿನ ನಗೆ; ತವರು ನೆಲದಲ್ಲೇ ಸನ್‌ರೈಸರ್ಸ್‌ಗೆ ಸೋಲು

ಹೈದರಾಬಾದ್: ಐಪಿಎಲ್ 2026ರ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ತವರು ಮೈದಾನದಲ್ಲಿ ಆಡಿದರೂ ಸನ್‌ರೈಸರ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ 165 ರನ್‌ಗಳಿಗೆ ಸೀಮಿತವಾಯಿತು. ಈ ಗುರಿಯನ್ನು ಕೆಕೆಆರ್ ತಂಡ ಸುಲಭವಾಗಿ ಬೆನ್ನಟ್ಟಿದ್ದು, ಕೇವಲ 3 ವಿಕೆಟ್ ಕಳೆದುಕೊಂಡು 18.2 ಓವರ್‌ಗಳಲ್ಲಿ ಜಯದ ನಗೆ ಬೀರಿತು. ಇದರೊಂದಿಗೆ ಕೆಕೆಆರ್ ಮೂರನೇ ಗೆಲುವು ದಾಖಲಿಸಿದರೆ, ಸನ್‌ರೈಸರ್ಸ್ ನಾಲ್ಕನೇ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್‌ಗೆ ಆರಂಭಿಕವಾಗಿ ಅಭಿಷೇಕ್ ಮತ್ತು ಹೆಡ್ ಉತ್ತಮ ಬೆಂಬಲ ನೀಡಿದರು. ಮೊದಲ ವಿಕೆಟ್‌ಗೆ 44 ರನ್‌ಗಳ ಜೊತೆಯಾಟದ ನಂತರ ಟ್ರಾವಿಸ್ ಹೆಡ್ (Travis Head) ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ 28 ಎಸೆತಗಳಲ್ಲಿ 61 ರನ್ ಗಳಿಸಿ ತಂಡವನ್ನು ಶತಕದ ಗಡಿಗೆ ಕೊಂಡೊಯ್ದರು. ಆದರೆ ನಂತರದ ಹಂತದಲ್ಲಿ…

ಮುಂಚಿತ ಮುಂಗಾರು ಮಳೆ ಸುಳಿವು; ಈ ತಿಂಗಳಲ್ಲೇ ಕರಾವಳಿ ಪ್ರವೇಶಿಸಲಿರುವ ವರುಣ

ನವದೆಹಲಿ: ಬಿರುಬೇಸಿಗೆಯಿಂದ ಕಂಗೆಟ್ಟ ಜನತೆಗೆ ಮಳೆಯ ಸಿಹಿಸುದ್ದಿ ಸಿಕ್ಕಿದ್ದು, ಈ ವರ್ಷ ನೈಋತ್ಯ ಮುಂಗಾರು ಸಾಮಾನ್ಯಕ್ಕಿಂತ ಮುಂಚಿತವಾಗಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮೇ 14ರಿಂದ 16ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂಗಾರು ಮಾರುತಗಳು ಪ್ರವೇಶಿಸಬಹುದು ಎಂದು ತಿಳಿಸಿದ್ದು, ಕೇರಳ ಕರಾವಳಿಗೆ ಮೇ ಕೊನೆಯ ವಾರದಲ್ಲೇ ಮಳೆ ಅಪ್ಪಳಿಸುವ ನಿರೀಕ್ಷೆ ವ್ಯಕ್ತವಾಗಿದೆ. ಅಂತರರಾಷ್ಟ್ರೀಯ ಮಾದರಿಗಳ ಪ್ರಕಾರ, ವಿಶೇಷವಾಗಿ ECMWF ಅಂದಾಜಿನಂತೆ, ಕೇರಳಕ್ಕೆ ಮುಂಗಾರು ಮೇ 25ರ ಸುಮಾರಿಗೆ ತಲುಪಬಹುದು ಎಂದು ಹೇಳಲಾಗಿದೆ. ಆದರೆ IMD ಅಧಿಕೃತ ಅಂದಾಜು ಜೂನ್ 1ರ ಸುತ್ತಮುತ್ತ ಅಥವಾ ಅದಕ್ಕಿಂತ ಮೊದಲೇ ಮಳೆ ಆರಂಭವಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಇದರಿಂದ ಈ ಬಾರಿ ಮುಂಗಾರು ಸಮಯಕ್ಕಿಂತ ಬೇಗನೆ ಚುರುಕುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಮೇ ತಿಂಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ…

ಸಮುದ್ರದಾಳದಲ್ಲಿ ತ್ರಿವರ್ಣ ಧ್ವಜ ಅನಾವರಣ: ಗಿನ್ನೆಸ್ ದಾಖಲೆ ಬರೆದ ಐತಿಹಾಸಿಕ ಸಾಹಸದಲ್ಲಿ ಶರತ್ ಆರ್. ಅಶೋಕ್ ಭಾಗಿ

ಬೆಂಗಳೂರು: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಸ್ವರಾಜ್ ದ್ವೀಪದಲ್ಲಿ ಭಾರತದ ಸಾಹಸ ಯಾನದ ಸುವರ್ಣ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ಸಮುದ್ರದ ಆಳದಲ್ಲಿ ಭಾರತದ ಅತಿ ದೊಡ್ಡ ತ್ರಿವರ್ಣ ಧ್ವಜವನ್ನು ಯಶಸ್ವಿಯಾಗಿ ಅನಾವರಣಗೊಳಿಸುವ ಮೂಲಕ ‘ಗಿನ್ನೆಸ್ ವರ್ಲ್ಡ್ ರೆಕಾರ್ಡ್’ ನಿರ್ಮಿಸಲಾಗಿದೆ. ಈ ಐತಿಹಾಸಿಕ ಸಾಹಸದಲ್ಲಿ ಬೆಂಗಳೂರಿನ ಪ್ರತಿಭಾವಂತ ಸಾಹಸ ಕ್ರೀಡಾ ತಜ್ಞ ಶರತ್ ಆರ್. ಅಶೋಕ್ ಅವರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ. India doesn’t follow records. It defines them. 🇮🇳 At Swaraj Dweep, Andaman & Nicobar Islands, the world’s largest underwater Tricolour (60×40 metres) was unfurled by 200 divers, earning a Guinness World Record. From the skies to the ocean depths, India’s spirit stands…

ದೋಹಾದಲ್ಲಿ ಕರ್ನಾಟಕ ಸಂಘದಿಂದ ಕಾರ್ಮಿಕ ದಿನಾಚರಣೆ; ‘ಕಾಯಕವೇ ಕೈಲಾಸ’ ಸಂದೇಶ

ದೋಹಾ (ಕತಾರ್): ಕರ್ನಾಟಕ ಸಂಘ ಕತಾರ್ ವತಿಯಿಂದ “ಕಾರ್ಮಿಕ ದಿನಾಚರಣೆ 2026”ನ್ನು ದೋಹಾದ ಪರ್ಲಿಂಗ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಭರ್ಜರಿಯಾಗಿ ಆಚರಿಸಲಾಯಿತು. Indian Cultural Centre ಹಾಗೂ Embassy of India, Doha ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮ “ಕಾಯಕವೇ ಕೈಲಾಸ” ಎಂಬ ಘೋಷವಾಕ್ಯದೊಂದಿಗೆ ಕಾರ್ಮಿಕರ ಮಹತ್ವವನ್ನು ಎತ್ತಿಹಿಡಿದಿತು. ಇದು ಸಂಘದ ನೂತನ ಆಡಳಿತ ಸಮಿತಿಯ ಮೊದಲ ಕಾರ್ಯಕ್ರಮವಾಗಿದ್ದು, ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಧ್ಯಕ್ಷ ಸುಬ್ರಮಣ್ಯ ಹೆಬ್ಬಗಿಲು ತಮ್ಮ ಭಾಷಣದಲ್ಲಿ “ಕಾರ್ಮಿಕರಿಗೆ ಕರ್ನಾಟಕ ಸಂಘವು ಸ್ವಗೃಹದಂತಿದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಡಾ. ವೈಭವ್ ತಾಂಡಲೆ, ಖಾಲಿದ್ ಅಬ್ದುಲ್ ರಹ್ಮಾನ್ ಫಖ್ರೂ, ಮಣಿಕಂಟನ್ ಎ.ಪಿ., ಪಿ.ಎನ್. ಬಾಬುರಾಜನ್ ಹಾಗೂ ಫೈಸಲ್ ಅಲ್ ಹುಡಾವಿ ಉಪಸ್ಥಿತರಿದ್ದು, ಕಾರ್ಮಿಕರ ಕೊಡುಗೆ, ಸುರಕ್ಷತೆ ಹಾಗೂ ಕಲ್ಯಾಣದ ಮಹತ್ವವನ್ನು ಒತ್ತಿಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಲಹಾ ಸಮಿತಿ ಸದಸ್ಯರು ಹಾಗೂ ಕನ್ನಡಿಗರ…

‘ಆರೋಗ್ಯ ತುರ್ತುಸ್ಥಿತಿ’ ಹಿನ್ನೆಲೆ; ಸಂಸತ್ ವಿಶೇಷ ಅಧಿವೇಶ ಕರೆಯಲು ಸುಪ್ರೀಂ ಕೋರ್ಟ್ ವಕೀಲ ಧನಂಜಯ ಆಗ್ರಹ

ನವದೆಹಲಿ: ದೇಶಾದ್ಯಂತ ತೀವ್ರ ಉಷ್ಣತೆಯ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ‘ಆರೋಗ್ಯ ತುರ್ತುಸ್ಥಿತಿ’ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣಾ ಕ್ರಮಕ್ಕಾಗಿ ತಕ್ಷಣ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವಂತೆ ಸುಪ್ರೀಂ ಕೋರ್ಟ್ ವಕೀಲ ಕೆ.ವಿ. ಧನಂಜಯ ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಂಸತ್ತಿನ ಉಭಯ ಸದನಗಳ ಅಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಪತ್ರದಲ್ಲಿ, ಭಾರತ ಎದುರಿಸುತ್ತಿರುವ ಶಾಖ ಪರಿಸ್ಥಿತಿ ಸಾಮಾನ್ಯ ಬೇಸಿಗೆಯಲ್ಲ, ಬದಲಾಗಿ “ಸಂಯುಕ್ತ ಸಾರ್ವಜನಿಕ-ಆರೋಗ್ಯ ತುರ್ತುಸ್ಥಿತಿ” ಎಂದು ಅವರು ವಿವರಿಸಿದ್ದಾರೆ. ಏಪ್ರಿಲ್ ಅಂತ್ಯದ ವೇಳೆಗೆ ವಿಶ್ವದ ಅತ್ಯಂತ ಬಿಸಿ ನಗರಗಳ ಪಟ್ಟಿಯಲ್ಲಿ ಬಹುತೇಕ ನಗರಗಳು ಭಾರತದಲ್ಲೇ ಕಂಡುಬಂದಿರುವುದನ್ನು ಉಲ್ಲೇಖಿಸಿ, ಇದು ಗಂಭೀರ ಎಚ್ಚರಿಕೆಯ ಸೂಚನೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಬಂದಾದಲ್ಲಿ 47.4°C ತಾಪಮಾನ ದಾಖಲಾಗಿರುವುದನ್ನು ಹಾಗೂ ದೇಶದ ಹಲವು ಭಾಗಗಳಲ್ಲಿ 40–44°C ನಡುವೆ ತಾಪಮಾನ…

ರಾಮ್ ಚರಣ್ ನಟನೆಯ ‘ಪೆಡ್ಡಿ’ ಜೂನ್ 4ರಂದು ತೆರೆಗೆ

ಹೈದರಾಬಾದ್: ತೆಲುಗು ನಟ ರಾಮ್ ಚರಣ್ ನಾಯಕನಾಗಿ ಅಭಿನಯಿಸಿರುವ ನಿರ್ದೇಶಕ ಬುಚಿ ಬಾಬು ಸನಾ ಅವರ ಗ್ರಾಮೀಣ ಆಕ್ಷನ್-ಡ್ರಾಮಾ ‘ಪೆಡ್ಡಿ’ (Peddi) ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ‘ಪೆಡ್ಡಿ’ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಹಿರಿಯ ನಟ ಶಿವ ರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೆಂದು ಹಾಗೂ ಬೋಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಇದೇ ವರ್ಷ ಜೂನ್ 4 ರಂದು ತೆರೆಗೆ ಬರಲಿದ್ದು, ಚಿತ್ರದ ಚಿತ್ರೀಕರಣವೂ ಈಗ ಪೂರ್ಣಗೊಂಡಿದೆ. ಸ್ವತಃ ರಾಮ್ ಚರಣ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ “ಜೂನ್ 4 ರಂದು #PEDDI ಅನ್ನು ಭೇಟಿ ಮಾಡಿ. ಸಿನಿಮಾಗಳಲ್ಲಿ ಭೇಟಿಯಾಗೋಣ” ಎಂದು ಪೋಸ್ಟ್ ಮಾಡಿದ್ದು, ಅಭಿಮಾನಿಗಳಲ್ಲಿ ಹರ್ಷವನ್ನುಂಟುಮಾಡಿದೆ. ಈ ಚಿತ್ರದಲ್ಲಿ ವಿಶೇಷ ಹಾಡು ಕೂಡ ಗಮನ ಸೆಳೆಯುತ್ತಿದೆ. ಎ ಆರ್ ರೆಹಮಾನ್ ಸಂಗೀತ ನೀಡಿರುವ ಈ ಹಾಡು ಭವ್ಯ ಸೆಟ್‌ಗಳು ಮತ್ತು…