ಇನ್ನು ಕಾರುಗಳು ರಸ್ತೆಗಳಲ್ಲಿ ಮಾತ್ರವಲ್ಲ, ಆಕಾಶದಲ್ಲೂ ಹಾರಾಡಲಿವೆ !

ಆಲ್ಮೋರಾದ ಯುವ ಆವಿಷ್ಕಾರಿ ರವಿ ಟಮ್ಟಾ ಅವರು ತಮ್ಮ ಸ್ಟಾರ್ಟ್ಅಪ್ HAPIDA SKYNEX ಅಡಿಯಲ್ಲಿ ಸಿಂಗಲ್-ಸೀಟರ್ ಫ್ಲೈಯಿಂಗ್ ಕಾರ್ ಪ್ರೊಟೋಟೈಪ್‌ನ ಯಶಸ್ವಿ ಪರೀಕ್ಷೆ ನಡೆಸಿ ಭಾರತದ ಭವಿಷ್ಯದ ಚಲನಶೀಲತೆಗೆ ಹೊಸ ಆಯಾಮ ನೀಡಿದ್ದಾರೆ. ಈ ವಿಶತೇ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಜೆಪಿ ಪಕ್ಷ, ಈ ಸಾಧನೆಯು ನವ ಭಾರತದ ಯುವಕರ ಪ್ರತಿಭೆ, ತಾಂತ್ರಿಕ ಚಿಂತನೆ ಮತ್ತು ನಾವೀನ್ಯತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದೆ. ಕೌಶಲ್ಯ ಸ್ವದೇಶಿಯಾಗಿರಲಿ, ಚಿಂತನೆಗಳು ದೊಡ್ಡದಾಗಿರಲಿ ಮತ್ತು ಧೈರ್ಯ ಆಕಾಶದೆತ್ತರದಲ್ಲಿರಲಿ… ಏಕೆಂದರೆ ಹಾರಾಟಕ್ಕೆ ಯಾವುದೇ ಮಿತಿ ಇಲ್ಲ ! ಎಂದು ಕೇಂದ್ರ ಸರ್ಕಾರದ ಬೆಂಬಲದತ್ತ ಬೊಟ್ಟು ಮಾಡಿದೆ. ಇನ್ನು ಕಾರುಗಳು ರಸ್ತೆಗಳಲ್ಲಿ ಮಾತ್ರವಲ್ಲ, ಆಕಾಶದಲ್ಲೂ ಹಾರಾಡಲಿವೆ ! 🚗🇮🇳 ಆಲ್ಮೋರಾದ ಯುವ ಆವಿಷ್ಕಾರಿ ರವಿ ಟಮ್ಟಾ ಅವರು ತಮ್ಮ ಸ್ಟಾರ್ಟ್ಅಪ್ HAPIDA SKYNEX ಅಡಿಯಲ್ಲಿ ಸಿಂಗಲ್-ಸೀಟರ್ ಫ್ಲೈಯಿಂಗ್ ಕಾರ್ ಪ್ರೊಟೋಟೈಪ್‌ನ ಯಶಸ್ವಿ ಪರೀಕ್ಷೆ…

ಹಾರ್ಮುಜ್ ಜಲಸಂಧಿ ಭದ್ರತೆಗೆ ಇರಾನ್ ಕಾರ್ಯತಂತ್ರ; ಅಮೆರಿಕದೊಂದಿಗೆ ಮಾತುಕತೆ ಇಲ್ಲ

ಟೆಹ್ರಾನ್: ಹಾರ್ಮುಜ್ ಜಲಸಂಧಿ ಮತ್ತು ಪರ್ಷಿಯನ್ ಕೊಲ್ಲಿಯ ಭದ್ರತೆ ಹಾಗೂ ಸುಸ್ಥಿರ ಪ್ರಗತಿಗಾಗಿ ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿ ಕಾರ್ಯತಂತ್ರದ ಕ್ರಿಯಾ ಯೋಜನೆಯ ಸಾಮಾನ್ಯ ರೂಪುರೇಷೆಗಳಿಗೆ ಅನುಮೋದನೆ ನೀಡಿದೆ. ಸಮಿತಿ ಸಭೆಯಲ್ಲಿ ಯೋಜನೆಯನ್ನು ಯಾವುದೇ ವಿರೋಧವಿಲ್ಲದೆ ಅಂಗೀಕರಿಸಲಾಗಿದೆ ಎಂದು ವಕ್ತಾರ ಹಸನ್ ಕಶ್ಕವಿ ತಿಳಿಸಿದ್ದಾರೆ. ಸಂಬಂಧಿತ ಇರಾನ್ ಸಂಸ್ಥೆಗಳ ಪ್ರಸ್ತಾವನೆಗಳನ್ನು ಪರಿಶೀಲಿಸಿದ ಬಳಿಕ ಅನುಮೋದನೆ ನೀಡಲಾಗಿದೆ. ಜುಲೈ 13ರಂದು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಮುದ್ರ ಸಂಚಾರಕ್ಕಾಗಿ ತಾತ್ಕಾಲಿಕ ಮಾರ್ಗ ಗುರುತಿಸುವ ಕುರಿತು ಇರಾನ್ ಮತ್ತು ಒಮಾನ್ ಮಾತುಕತೆ ನಡೆಸುತ್ತಿದ್ದು, ಒಪ್ಪಂದಕ್ಕೆ ಎರಡೂ ದೇಶಗಳು ಹತ್ತಿರ ಬಂದಿವೆ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಆದರೆ ಅಮೆರಿಕದೊಂದಿಗೆ ಸದ್ಯ ಯಾವುದೇ ನೇರ ಮಾತುಕತೆ ನಡೆಯುತ್ತಿಲ್ಲ ಎಂದು ಅರಾಘ್ಚಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಹಿಂದಿನ ತಿಳುವಳಿಕೆ ಒಪ್ಪಂದದ…

ಜಾರಿ ನಿರ್ದೇಶನಾಲಯ ನಿರ್ದೇಶಕ ರಾಹುಲ್ ನವೀನ್ ಸೇವಾವಧಿ ಮತ್ತೆ ವಿಸ್ತರಣೆ

ನವದೆಹಲಿ: ಜಾರಿ ನಿರ್ದೇಶನಾಲಯ (ED) ನಿರ್ದೇಶಕ ರಾಹುಲ್ ನವೀನ್ ಅವರ ಸೇವಾವಧಿಯನ್ನು ಕೇಂದ್ರ ಸರ್ಕಾರ ಮತ್ತೊಂದು ವರ್ಷ ವಿಸ್ತರಿಸಿದೆ. ಆಗಸ್ಟ್ 13ರಿಂದ ಒಂದು ವರ್ಷದ ಅವಧಿಗೆ, ಅಂದರೆ 2027ರ ಆಗಸ್ಟ್ 13ರವರೆಗೆ ಸೇವೆ ಮುಂದುವರಿಸಲು ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ರಾಹುಲ್ ನವೀನ್ ಅವರು ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯಾಗಿದ್ದು, ಅವರ ನಿವೃತ್ತಿ ದಿನಾಂಕದಿಂದ 2027ರ ಜುಲೈ 31ರವರೆಗೆ ಅಥವಾ ಮುಂದಿನ ಆದೇಶದವರೆಗೆ ಸೇವಾ ವಿಸ್ತರಣೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

‘ವಿಭಿನ್ನ ನಂಬಿಕೆಗಳು, ಒಂದು ತಾಯ್ನಾಡು, ಒಂದು ಭಾರತೀಯ ಗುರುತು’; ಸಹೋದರತ್ವ, ಸಾಮರಸ್ಯಕ್ಕೆ RSS ಮುಸ್ಲಿಂ ರಾಷ್ಟ್ರೀಯ ಮಂಚ್ ಕರೆ

ನವದೆಹಲಿ: ದೇಶದಲ್ಲಿ ಸಹೋದರತ್ವ, ಸಾಮರಸ್ಯ ಮತ್ತು ಹಂಚಿಕೆಯ ಪರಂಪರೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಆರ್‌ಎಸ್‌ಎಸ್‌ಗೆ ಸಂಯೋಜಿತವಾಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ಭಾನುವಾರ ರಾಜ್‌ಘಾಟ್‌ನಿಂದ ‘ಆವೋ ಜದೋನ್ ಸೆ ಜುದೇಯಿನ್’ (ಬೇರುಗಳೊಂದಿಗೆ ಸಂಪರ್ಕ ಸಾಧಿಸಿ) ಅಭಿಯಾನಕ್ಕೆ ಚಾಲನೆ ನೀಡಿದೆ. ‘ವಿಭಿನ್ನ ನಂಬಿಕೆಗಳು, ಒಂದು ತಾಯ್ನಾಡು, ಒಂದು ಭಾರತೀಯ ಗುರುತು’ ಎಂಬ ಘೋಷವಾಕ್ಯದೊಂದಿಗೆ ಆರಂಭವಾದ ಅಭಿಯಾನವನ್ನು ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿಯ ಹಿರಿಯ ಸದಸ್ಯ ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಮುಖ್ಯ ಪೋಷಕ ಇಂದ್ರೇಶ್ ಕುಮಾರ್ ಮುನ್ನಡೆಸಿದರು. ದೇಶವನ್ನು ‘ದ್ವೇಷ ಮುಕ್ತ ಭಾರತ’ವನ್ನಾಗಿಸುವ ಗುರಿಯೊಂದಿಗೆ ಮುಂದಿನ ದಿನಗಳಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ತಿಳಿಸಿದೆ. ರಾಜ್‌ಘಾಟ್‌ನ ಗಾಂಧಿ ಸ್ಮೃತಿ ದರ್ಶನದಲ್ಲಿ ನಡೆದ ಸಮ್ಮೇಳನದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಾಮಾಜಿಕ ಅಂತರ, ಪರಸ್ಪರ ಅಪನಂಬಿಕೆ ಹಾಗೂ ದ್ವೇಷದ ಘಟನೆಗಳನ್ನು ಕಡಿಮೆ ಮಾಡಲು ರಾಜಕೀಯ ಚರ್ಚೆಯ…

ಕರ್ನಾಟಕದಲ್ಲಿ ಮುಂಗಾರು ಚುರುಕು; ಕರಾವಳಿ, ಒಳನಾಡಿನ ಹಲವೆಡೆ ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ತಡವಾಗಿ ಚುರುಕುಗೊಂಡಿರುವ ಮುಂಗಾರು ಮಳೆ ಮುಂದುವರಿದಿದ್ದು, ರಾಜ್ಯದ ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸೋಮವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ಭಾಗದಲ್ಲಿ ಮಳೆಯ ವಾತಾವರಣ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ,…

ಯಕ್ಷಗಾನ ರೂಪಕದಲ್ಲಿ ‘ಶ್ರೀ ರಾಘವೇಂದ್ರ ಮಹಿಮೆ’; ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಸಾಧಕರಿಗೆ ಪುರಸ್ಕಾರ

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಸ್ಪಂದನಾ ಸೇವಾ ಸಮಿತಿ ವತಿಯಿಂದ ನಂದ್ರೊಳ್ಳಿ ಸೀತಾರಾಮಶೆಟ್ಟಿ ವಿರಚಿತ ಶ್ರೀ ರಾಘವೇಂದ್ರ ಮಹಿಮೆ ಯಕ್ಷಗಾನ ಕಾರ್ಯಕ್ರಮ ಗಮನಸೆಳೆಯಿತು. ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀಶಾನಂದ, ರಾಜೇಶ್ ರೈ, ಮಂತ್ರಾಲಯ ಮಠ ಪ್ರತಿನಿಧಿ ಎಸ್.ಎನ್.ವೆಂಕಟೇಶಾಚಾರ್ಯ, ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಉದ್ಯಮಿ ರಾಜೇಶ್ ಶೆಟ್ಟಿ, ಹೋಟೆಲ್ ಮತ್ತು ಬೇಕರಿ, ಕಾಂಡಿಮೆಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರತಾಪ್ ಶೆಟ್ಟಿ, ಪ್ರಭು, ಕರುಣಕರ್ ಶೆಟ್ಟಿ ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ಪೈ ರವರು ದೀಪ ಬೆಳಗಿಸಿ ಉದ್ಘಾಟಸಿ, ಯಕ್ಷಗಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನ್ಯಾಯಮೂರ್ತಿ ಶ್ರೀಶಾನಂದರವರು ಮಾತನಾಡಿ, ಅಂದಿನ ಕಾಲದಲ್ಲಿ ಭಾಗವತರ ಕಥೆಯಲ್ಲಿ ರೋಗ ವಾಸಿ ಮಾಡುವ ತಂತ್ರಗಳು ಇರುತ್ತಿತು. ಒಳ್ಳೆಯವರನ್ನ ರಕ್ಷಣೆಬೇಕಾದದ್ದು ದೇವರ ಕೆಲಸ, ಭಕ್ತರ ಮಾತನ್ನ ಸುಳ್ಳು ಮಾಡಬಾರದು ಎಂಬ ನಂಬಿಕೆ. ಪ್ರಹ್ಲಾದ ಮಾತು ಮೀರಬಾರದು ಎಂದು ಹಿರಣ್ಯಕಶಿಪು ಸಂಹಾರ ಮಾಡಿದರು ನರಸಿಂಹ ದೇವರು. ಎಷ್ಟೆ ಕಷ್ಟ ಬಂದರು…

ರಿಯೊ ಡಿ ಜನೈರೊದಲ್ಲಿ ಹೆಲಿಕಾಪ್ಟರ್ ಪತನ; ನಾಲ್ವರು ಸಾವು

ರಿಯೊ ಡಿ ಜನೈರೊ: ಬ್ರೆಜಿಲ್‌ನ ರಿಯೊ ಡಿ ಜನೈರೊ ನಗರದ ಅರಣ್ಯ ಪ್ರದೇಶದಲ್ಲಿ ಶನಿವಾರ ಹೆಲಿಕಾಪ್ಟರ್ ಪತನಗೊಂಡು ನಾಲ್ವರು ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ರಿಯೊದಲ್ಲಿ ಇತ್ತೀಚೆಗೆ ನಡೆದ ಮತ್ತೊಂದು ಹೆಲಿಕಾಪ್ಟರ್ ದುರಂತದ ಬಳಿಕ ಈ ಘಟನೆ ನಡೆದಿದೆ. ಜೂನ್‌ನಲ್ಲಿ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದು ಆರು ಮಂದಿ ಮೃತಪಟ್ಟಿದ್ದರು. ಸರಣಿ ಅಪಘಾತಗಳು ನಗರದ ಹೆಲಿಕಾಪ್ಟರ್ ಹಾರಾಟಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಕಳವಳ ಮೂಡಿಸಿವೆ. ಆಲ್ಟೊ ಡ ಬೋವಾ ವಿಸ್ಟಾದ ವಿಸ್ಟಾ ಚೈನೆಸಾ ಪ್ರದೇಶದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 11.11ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ದಟ್ಟ ಅರಣ್ಯದ ನಡುವೆ ಹೆಲಿಕಾಪ್ಟರ್‌ನ ಅವಶೇಷಗಳನ್ನು ಪತ್ತೆಹಚ್ಚಿವೆ. ಅಪಘಾತದ ಬಳಿಕ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮೃತರಲ್ಲಿ ಪೈಲಟ್ ಹಾಗೂ ಒಂದೇ…

ಮಳವಳ್ಳಿ ತಾಲೂಕಿನಲ್ಲಿ ರೈತರ ಬೆಳೆ ಪರಿಶೀಲಿಸಿದ ಸಚಿವರು

ಮಂಡ್ಯ: ಮಳವಳ್ಳಿ ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರಾದ ಎನ್. ಚಲುವರಾಯಸ್ವಾಮಿ ಹಾಗೂ ಪಿ.ಎಂ. ನರೇಂದ್ರಸ್ವಾಮಿ ಅವರು ರೈತರ ಜಮೀನಿನಲ್ಲಿ ಸೊರಗಿರುವ ಹಲಸಂದೆ ಬೆಳೆಯನ್ನು ಪರಿಶೀಲಿಸಿದರು. ಮಳೆ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆ ಮೇಲೆ ಉಂಟಾಗಿರುವ ಪರಿಣಾಮದ ಕುರಿತು ಸಚಿವರು ರೈತರಿಂದ ಮಾಹಿತಿ ಪಡೆದುಕೊಂಡರು. ಬೆಳೆ ಹಾನಿಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ ಅವರು, ಸ್ಥಳದಲ್ಲಿದ್ದ ಕೃಷಿ ಇಲಾಖೆಯ ಅಧಿಕಾರಿಗಳಿಂದ ಬೆಳೆ ಪರಿಸ್ಥಿತಿ ಹಾಗೂ ಹಾನಿಯ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು. ರೈತರಿಗೆ ಅಗತ್ಯ ಮಾರ್ಗದರ್ಶನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಬೆಳೆ ಹಾನಿಯ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಕುರಿತು ಚರ್ಚಿಸಿದರು. ಜಮೀನಿನಲ್ಲಿ ಉಂಟಾಗಿರುವ ಬೆಳೆ ಪರಿಸ್ಥಿತಿಯ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಅಗತ್ಯ ಕ್ರಮ ಕೈಗೊಳ್ಳುವುದಾಗಿ…

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಚಿವರಿಂದ ಸಾಂತ್ವನ; ₹5 ಲಕ್ಷ ಪರಿಹಾರ ವಿತರಣೆ

ಮಂಡ್ಯ: ಮಂಡ್ಯ ತಾಲ್ಲೂಕಿನ ಬಿ.ಹಟ್ನ ಗ್ರಾಮಕ್ಕೆ ಭೇಟಿ ನೀಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ರೈತನ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ ಸಚಿವರು, ಕುಟುಂಬದ ಆರ್ಥಿಕ ಪರಿಸ್ಥಿತಿ ಹಾಗೂ ರೈತ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣಗಳ ಕುರಿತು ಮಾಹಿತಿ ಪಡೆದರು. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಕುಟುಂಬದ ನೆರವಿಗೆ ನಿಲ್ಲಲಿದೆ ಎಂದು ಧೈರ್ಯ ತುಂಬಿದರು. ಸರ್ಕಾರದ ನಿಯಮಾನುಸಾರ ರೈತ ಕುಟುಂಬಕ್ಕೆ ದೊರೆಯಬೇಕಾದ ₹5 ಲಕ್ಷ ಪರಿಹಾರವನ್ನು ಮೃತ ರೈತನ ಪುತ್ರ ಸ್ವಾಮಿ ಅವರಿಗೆ ಸಚಿವರು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಳ್ಳಬಾರದು ಎಂದು ಮನವಿ ಮಾಡಿದರು. ಸಂಕಷ್ಟ ಎದುರಾದಾಗ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ನೆರವು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ರೈತರ ಸಮಸ್ಯೆಗಳಿಗೆ…

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಪಾದಯಾತ್ರೆ; ಸಿಎಂ ಡಿಕೆಶಿ ತಿರುಗೇಟು

ರಾಮನಗರ: ಕಾಂಗ್ರೆಸ್ ಸರ್ಕಾರದ ಉದ್ದೇಶಿತ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಾಗೂ ಬಿಜೆಪಿ ವತಿಯಿಂದ ಮೂರು ದಿನಗಳ ಪಾದಯಾತ್ರೆಗೆ ಭಾನುವಾರ ಚಾಲನೆ ನೀಡಲಾಯಿತು. ರಾಮನಗರ ತಾಲ್ಲೂಕಿನ ಬೈರಮಂಗಲ ಗ್ರಾಮದಿಂದ ಆರಂಭವಾದ ಪಾದಯಾತ್ರೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕ ಆರ್.ಅಶೋಕ್ ಚಾಲನೆ ನೀಡಿದರು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ‘ನಮ್ಮ ಭೂಮಿ, ನಮ್ಮ ಹಕ್ಕು’ ಘೋಷಣೆಯೊಂದಿಗೆ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಸುಮಾರು 38 ಕಿ.ಮೀ. ಸಾಗಲಿದೆ. ಮೈತ್ರಿ ಪಕ್ಷವಾದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆ ರದ್ದುಗೊಳಿಸಿ ರೈತರ ಭೂಮಿಯನ್ನು ಉಳಿಸಬೇಕು ಎಂಬುದು ಜೆಡಿಎಸ್‌ನ ಪ್ರಮುಖ ಆಗ್ರಹವಾಗಿದೆ. ಪಾದಯಾತ್ರೆ ಆರಂಭಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ…