ಏಷ್ಯನ್ ಕ್ರೀಡಾಕೂಟ: ಮಹಿಳೆಯರ ಹೈ ಜಂಪ್‌ನಲ್ಲಿ ಪೂಜಾಗೆ ಕಂಚು

ನವದೆಹಲಿ: 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದ್ದು, ಮಹಿಳೆಯರ ಹೈ ಜಂಪ್ ಸ್ಪರ್ಧೆಯಲ್ಲಿ ಪೂಜಾ ಕಂಚಿನ ಪದಕ ಗೆದ್ದಿದ್ದಾರೆ. ಮಂಗಳವಾರ ನಡೆದ ಫೈನಲ್‌ನಲ್ಲಿ ಪೂಜಾ 1.84 ಮೀಟರ್ ಎತ್ತರವನ್ನು ಯಶಸ್ವಿಯಾಗಿ ಕ್ರಮಿಸಿ ಮೂರನೇ ಸ್ಥಾನ ಪಡೆದರು. 1.84 ಮೀಟರ್‌ವರೆಗಿನ ಎಲ್ಲ ಎತ್ತರಗಳನ್ನು ಅವರು ಮೊದಲ ಪ್ರಯತ್ನದಲ್ಲೇ ಕ್ರಮಿಸಿದ್ದರು. ಚೀನಾ ಹಾಗೂ ಕಜಕಿಸ್ತಾನದ ಸ್ಪರ್ಧಿಗಳೂ 1.84 ಮೀಟರ್ ಎತ್ತರವನ್ನು ಕ್ರಮಿಸಿದ್ದರು. ಆದರೆ ಕಡಿಮೆ ಪ್ರಯತ್ನಗಳಲ್ಲಿ ಯಶಸ್ವಿಯಾದವರನ್ನು ಮೇಲಿನ ಸ್ಥಾನಕ್ಕೆ ಪರಿಗಣಿಸುವ ‘ಕೌಂಟ್‌ಬ್ಯಾಕ್’ ನಿಯಮದ ಆಧಾರದ ಮೇಲೆ ಪೂಜಾ ಕಂಚಿನ ಪದಕಕ್ಕೆ ಪಾತ್ರರಾದರು. ಉಜ್ಬೇಕಿಸ್ತಾನದ ಬಾರ್ನೋಖೋನ್ ಸೈಫುಲ್ಲೇವ್ 1.90 ಮೀಟರ್ ಎತ್ತರ ಕ್ರಮಿಸಿ ಚಿನ್ನದ ಪದಕ ಗೆದ್ದರೆ, ಕಜಕಿಸ್ತಾನದ ಕ್ರಿಸ್ಟಿನಾ ಓವ್ಚಿನ್ನಿಕೋವಾ 1.87 ಮೀಟರ್‌ಗಳೊಂದಿಗೆ ಬೆಳ್ಳಿ ಪದಕ ಪಡೆದರು. ಎರಡು ದಶಕಗಳ ಬಳಿಕ ಪದಕ ಮಹಿಳೆಯರ ಹೈ ಜಂಪ್ ವಿಭಾಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಅವಧಿಯ ಬಳಿಕ…

ಏಷ್ಯನ್ ಗೇಮ್ಸ್: ಮಹಿಳೆಯರ 4×400 ಮೀ. ರಿಲೇಯಲ್ಲಿ ಭಾರತಕ್ಕೆ ಚಿನ್ನ

ನವದೆಹಲಿ: 2026ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಕಿರಣ್ ಪಹಲ್, ಮಚೆಟ್ಟಿರ ಪೂವಮ್ಮ, ಪ್ರಾಚಿ ಮತ್ತು ವಿತ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತೀಯ ತಂಡ 3 ನಿಮಿಷ 29.69 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಅಗ್ರಸ್ಥಾನ ಪಡೆಯಿತು. ಇದರೊಂದಿಗೆ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಲಭಿಸಿದೆ. ರಿಲೇ ಫೈನಲ್‌ನಲ್ಲಿ ನಾಲ್ವರು ಓಟಗಾರ್ತಿಯರು ಉತ್ತಮ ಸಮನ್ವಯದೊಂದಿಗೆ ಓಡಿ ತಂಡವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ದರು. ಅಂತಿಮ ಹಂತದಲ್ಲೂ ವೇಗ ಹಾಗೂ ಸಂಯಮ ಕಾಯ್ದುಕೊಂಡ ಭಾರತ, 3:29.69 ಸಮಯದೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿತು. ಪ್ರಧಾನಿ ನರೇಂದ್ರ ಮೋದಿ ಅವರು ಕಿರಣ್ ಪಹಲ್, ಪೂವಮ್ಮ ಎಂ.ಆರ್., ಪ್ರಾಚಿ ಮತ್ತು ವಿತ್ಯಾ ರಾಮರಾಜ್ ಅವರನ್ನು ಅಭಿನಂದಿಸಿದ್ದಾರೆ. ಕ್ರೀಡಾಪಟುಗಳ ವೇಗ, ದೃಢನಿಶ್ಚಯ ಮತ್ತು ತಂಡದ ಒಗ್ಗಟ್ಟು ಭಾರತವನ್ನು ಅಗ್ರಸ್ಥಾನಕ್ಕೇರಿಸಿದೆ ಎಂದು ಅವರು ಮೆಚ್ಚುಗೆ…