ಬೆಂಗಳೂರು: ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಆರೋಪಿಸಿ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿವೆ. ಕಳೆದ ವಾರಾಂತ್ಯದಲ್ಲಿ ಮಂಡ್ಯ ಬಂದ್ ಆಚರಿಸಿರುವ ರೈತ ಕನ್ನಡಪರ ಸಂಘಟನೆಗಳು, ನಾಳೆ ಬೆಂಗಳೂರು ಬಂದ್‌ಗೆ ಕರೆ ನೀಡಿವೆ.
ರೈತ ಸಂಘಟನೆಗಳ ಒಕ್ಕೂಟದ ಮುಂದಾಳುತ್ವದಲ್ಲಿ ರಚನೆಯಾಗಿರುವ ಜಲಸಂರಕ್ಷಣಾ ಸಮಿತಿ ನಾಳಿನ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ಹಲವು ಸಂಘಟನೆಗಳು ಈ ಹೋರಾಟಕ್ಕೆ ಘೋಷಿಸಿವೆ ಎಂದು ರೈತ ನಾಯಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಬಂದ್‌ಗೆ ಬೆಂಬಲ ಘೋಷಿಸಿರುವ ಸಂಘ ಸಂಸ್ಥೆಗಳ ಪಟ್ಟಿ:
-
ಬೆಂಗಳೂರು ಎಪಿಎಂಸಿ ವರ್ತಕರ ಸಂಘ
-
ಸಮತಾ ಸೈನಿಕ ದಳ
-
ಎಪ್ ಕೆ ಸಿ ಸಿ ಐ
-
ಕಾಶಿಯ ಸಣ್ಣ ಕೈಗಾರಿಕೆಗಳ ಒಕ್ಕೂಟ
-
ಕರ್ನಾಟಕ ಸಾಂಸ್ಕೃತಿಕ ವೇದಿಕೆ
-
ಬಿಡಬ್ಲ್ಯೂಎಸ್‌ಎಸ್‌ಬಿ ನೌಕರರ ಸಂಘ
-
ಬಿಡಿಎ ನೌಕರರ ಸಂಘ
-
ಬಿಡಿಎ ವಾಹನ ಚಾಲಕರ ಸಂಘ
-
ಕರ್ನಾಟಕ ರಾಜ್ಯ ರೈತ ಸಂಘ
-
ಎಐಟಿಯುಸಿ ಕೆಎಸ್ಆರ್ಟಿಸಿ ನೌಕರರ ಸಂಘ
-
ಬೆಂಗಳೂರು ಜುವೆಲರ್ಸ್ ಅಸೋಸಿಯೇಷನ್
-
ಕರ್ನಾಟಕ ವಕೀಲರ ಸಂಘ
-
ಬೆಂಗಳೂರು ವಕೀಲರ ಸಂಘ
-
ಮಂಡ್ಯ ಕಾವೇರಿ ರೈತ ಹಿತರಕ್ಷಣ ಸಮಿತಿ