ವಿಧಿಯಾಟದ ಮುಂದೆ ನಡೆಯದ ಪವಾಡ; ಅಭಿಮಾನಿಗಳ ಆಕ್ರಂದನ

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರ ನಿಧನದ ಸುದ್ದಿ ಕನ್ನಡ ಸಿನಿ ಅಭಿಮಾನಿಗಳ ಪಾಲಿಗೆ ಸಿಡಿಲಿನಂತೆ ಅಪ್ಪಳಿಸಿದೆ. ಎರಡು ವರ್ಷಗಳ ಹಿಂದಷ್ಟೇ ಅವರು ನಟಿ ಮೇಘನಾ ರಾಜ್ ಅವರನ್ನು ವಿವಾಹವಾಗಿದ್ದರು. ಸಿನಿ ಲೋಕದಲ್ಲಿ ಸ್ನೇಹಜೀವಿ ಎನಿಸಿದ್ದ ಚಿರಂಜೀವಿ ಸರ್ಜಾ ನಿಧನದಿಂದಾಗಿ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ದುಃಖ ಮಡುಗಟ್ಟಿದೆ.

39 ವರ್ಷ ಹರೆಯದ ಚಿರಂಜೀವಿ ಸರ್ಜಾ ಅವರು ಮನೆಯಲ್ಲಿದ್ದಾಗಲೇ ಎದೆನೋವು ಕಾಣಿಸಿಕೊಂಡಿತು. ಮಧ್ಯಾಹ್ನ 2.30ರ ಸುಮಾರಿಗೆ ಊಟಕ್ಕೆ ಸಿದ್ಧವಾಗುತ್ತಿದ್ದಾಗಲೇ ಅವರಿಗೆ ಎದೆ ನೋವು ಉಂಟಾಯಿತು. ಕೂಡಲೇ ಅವರನ್ನು ಜಯನಗರ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲೇ ಅವರಿಗೆ ಉಸಿರಾಟದ ತೊಂದೆರೆ ಕಂಡುಬಂತು. ವೈದ್ಯರು ತೀವ್ರ ತಪಾಸಣೆಗೆ ಗುರಿಪಡಿಸಿದಾಗ ಹೃದಯಾಘಾತ ಸಂಭವಿಸಿರುವುದು ಗೊತ್ತಾಯಿತು ಎಂದು ನಟ ಚಿರಂಜೀವಿ ಸರ್ಜಾ ಅವರ ಆಪ್ತರು ತಿಳಿಸಿದ್ದಾರೆ.

ಈ ನಡುವೆ ಮೂರು ದಿನಗಳ ಹಿಂದೆ ಕೂಡಾ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ವೈದ್ಯರಿಂದ ಚಿಕಿತ್ಸೆ ಪಡೆದಿದ್ದರಾದರೂ ಇಂದು ಅವರು ವಿಧಿಯಾಟಕ್ಕೆ ಬಲಿಯಾದರು ಎಂದು ಅವರ ಸ್ನೇಹಿತರು ಬೇಸರ ವ್ಯಕ್ತಪಡಿಸಿದ್ದಾರೆ.
ಚಿರಂಜೀವಿ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ.. ಚಿರಂಜೀವಿ ಸರ್ಜಾ ವಿಧಿವಶ; ನಟನಿಗೆ ಆಗಿದ್ದೇನು ಗೊತ್ತಾ? 

 

Related posts