ಚಿರಂಜೀವಿ ಸರ್ಜಾ ವಿಧಿವಶ; ನಟನಿಗೆ ಆಗಿದ್ದೇನು ಗೊತ್ತಾ?

ಬೆಂಗಳೂರು:  ಕನ್ನಡ ಸಿನಿಲೋಕದ ಖ್ಯಾತಿಯ ಶಿಖರ ಏರುತ್ತಿರುವಾಗಲೇ ನಟ ಚಿರಂಜೀವಿ ಸರ್ಜಾ ವಿಧಿವಶರಾಗಿದ್ದಾರೆ. ಹೃದಯಾಘಾತಕ್ಕೊಳಗಾದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಂದು ವಿಧಿವಶರಾಗಿದ್ದಾರೆ.

39 ವರ್ಷ ಹರೆಯದ ಚಿರಂಜೀವಿ ಸರ್ಜಾ ಅವರು ಕನ್ನಡ ಚಿತ್ರರಂಗದ ಮೇರು ನಟ ಅರ್ಜುನ್ ಸರ್ಜಾ ಅವರ ಅಳಿಯ. ಸುಮಾರು 22 ಸಿನಿಮಾಗಳಲ್ಲಿ ಅಭಿನಯಿಸಿರುವ ಚಿರಂಜೀವಿ ಸರ್ಜಾ ನಟನಾಗಿ ಅಷ್ಟೇ ಅಲ್ಲ ನಿರ್ದೇಶಕರಾಗಿಯೂ ಕನ್ನಡ ಸಿನಿಲೋಕದ ಅದ್ಭುತ ಪ್ರತಿಭೆ ಎನಿಸಿದ್ದರು.

ಎರಡು ವರ್ಷಗಳ ಹಿಂದಷ್ಟೇ ಮೇಘನಾರಾಜ್ ಅವರನ್ನು ವಿವಾಹವಾಗಿದ್ದರು. ಇವರ ಕೈ ಹಿಡಿದಿದ್ದ ಮೇಘನಾರಾಜ್ ಕೂಡಾ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಅಭಿನಯದ ಮೂಲಕ ಚಿರಪರಿಚಿತರಾದವರು. ಅಪರೂಪದ ತಾರಾ ಜೋಡಿ ಎಂದೇ ಸಾಮಾಜಿಕ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ.

ಇಂದು ಅವರು ಆರೋಗ್ಯ ಏರುಪೇರಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾದರು. ಅನಂತರ ಉಸಿರಾಟದ ತೊಂದೆರೆಯೂ ಅವರನ್ನು ಕಾಡಿತು. ಅಷ್ಟರಲ್ಲೇ ಅವರಿಗೆ ಹೃದಯಾಘಾತವಾಗಿರುವುದು ವೈದ್ಯರ ಗಮನಕ್ಕೆ ಬಂತು. ಯಾವುದೇ ಚಿಕಿತ್ಸೆಗೂ ಸ್ಪಂಧಿಸದ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದರು ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ.. ಚಿರಂಜೀವಿ ಸರ್ಜಾಗೆ ಮೂರು ದಿನಗಳ ಹಿಂದೆಯೂ ಆಗಿತ್ತು ಆಘಾತ 

 

Related posts