ಬೆಂಗಳೂರು: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ರಾಜ್ಯದ ಆಡಳಿತಾರೂಢ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ಕಾಂಗ್ರೇಸ್ ಮುಖಂಡ ಐವನ್ ಡಿಸೋಜಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ರಾಷ್ಟ್ರೀಯ ವಿಪತ್ತು ಕಾಯ್ದೆ ಉಲ್ಲಂಘನೆ ಮಾಡಿದ ಆರೋಪ, ಸಾರ್ವಜನಿಕವಾಗಿ ಸುಳ್ಳು ಹೇಳಿಕೆ ಮತ್ತು ದಾರಿ ತಪ್ಪಿಸಿದ ಆರೋಪ ಕುರಿತಂತೆ ಐವನ್ ಡಿಸೋಜಾ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಧಾನ ಮಂತ್ರಿಯಿಂದ ನಾವು ಕೋವಿಡ್ 19 ನಿಂದ ಬದುಕುಳಿದಿದ್ದೆವೆ ಅಂದರೆ ಸಾವಿರಾರು ಮಂದಿ ಸಾವನ್ನಪ್ಪಿರುವುದಕ್ಕೆ ಪಿಎಂ ಜವಾಬ್ದಾರಿಯಲ್ಲವೇ. ಅವರು ಮುಂಜಾಗೃತ ಕ್ರಮ ತೆಗದುಕೊಳ್ಳದಿದ್ದಕ್ಕೆ ಜವಾಬ್ದಾರಿ ಆಗಬೇಕಲ್ಲವೇ? ಎಂದು ಐವನ್ ಡಿಸೋಜಾ ಪ್ರಶ್ನಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಸಮಿತಿ ಅಧ್ಯಕ್ಷರ ಸ್ಥಾನವು ರೋಟೆಷನ್ ಮಾದರಿಯ ಹುದ್ದೆಯಾಗಿದೆ. ಆದರೆ ಸಂಸತ್ ಸದಸ್ಯರು ಇದನ್ನು ಭಾರತ ಕೋವಿಡ್ 19ರಲ್ಲಿ ಸಾಧಿಸಿದ ಸಾಧನೆಗಾಗಿಯೇ ನೀಡಿದ್ದಾಗಿರುತ್ತದೆ ಎಂದು ಬಿಂಬಿಸುವ ಕೆಲಸವನ್ನು ನಳೀನ್ ಮಾಡಿದ್ದಾರೆಂದು ಐವನ್ ಡಿಸೋಜಾ ಆರೋಪ ಮಾಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಕಲಂ 54 ರ ಅಡಿ ತಪ್ಪು ಎಸಗಿರುವ ನಳಿನ್ ಕುಮಾರ್ ಅವರು ಸಾರ್ವಜನಿಕವಾಗಿ ತಪ್ಪು ಹೇಳಿಕೆ ನೀಡುವ ಕೆಲಸ ಮಾಡಿದ್ದಾರೆ. ಇದು ಸಾರ್ವಜನಿಕರನ್ನು ಗೊಂದಲಕ್ಕಿಡುವ ಮಾಡುತ್ತದೆ. ಈ ರೀತಿ ಅಸಂಬದ್ದ ಹೇಳಿಕೆ ನೀಡಿದ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಐವನ್ ಡಿಸೋಜಾ ತನ್ನ ದೂರಿನಲ್ಲಿ ಕೋರಿದ್ದಾರೆ.
ಇದನ್ನೂ ಓದಿ.. ಜೂನ್ 1ರಿಂದ ಕೋರ್ಟ್ ಕಲಾಪ; ವಕೀಲರಿಗೂ ಷರತ್ತು