ಭಾರತ-ಚೀನಾ ಗಡಿ ವಿವಾದ; ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದ ಟ್ರಂಪ್

ದೆಹಲಿ: ಲಡಾಖ್ ಗಡಿಯಲ್ಲಿನ ಚೀನಾದ ಮೊಂಡಾಟ ವಿಚಾರ ಅಮೆರಿಕಾದಲ್ಲಿ ಪ್ರತಿಧ್ವನಿಸಿದೆ. ಲಡಾಖ್’ನಲ್ಲಿರುವ ಭಾರತದ ಭೂಭಾಗ ಪ್ರವೇಶಿಸುವ ಚೀನಾದ ಯತ್ನಕ್ಕೆ ಭಾರತ ತಿರುಗೇಟು ನೀಡಿದ್ದು, ಚೀನಾದ ಪ್ರಯತ್ನವೂ ವಿಫಲವಾಗುತ್ತಿದೆ.

ಈ ನಡುವೆ ಭಾರತ ಮತ್ತು ಚೀನಾ ಗಡಿ ವಿವಾದ ಬಗೆಹರಿಸುವ ಸಂಬಂಧ ತಾವು ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಭಾರತ-ಚೀನಾ ನಡುವಿನ ಗಡಿ ವಿವಾದ ಇತ್ಯರ್ಥ ಸಂಬಂಧ ಮಧ್ಯಸ್ಥಿಕೆ ವಹಿಸಲು ಅಮೇರಿಕ ಸಿದ್ಧವಿದೆ ಎಂದು ಭಾರತ ಮತ್ತು ಚೀನಾ ರಾಷ್ಟ್ರಗಳಿಗೆ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ.. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ದ ವಿಧಾನಸೌಧ ಠಾಣೆಯಲ್ಲಿ ದೂರು

 

Related posts