ಚೀನಾವನ್ನು ಓಲೈಸಲು ಮೋದಿ ಸರ್ಕಾರವನ್ನು ತೆಗಳಿದ ಪಾಕ್ ಪಿಎಂ ಇಮ್ರಾನ್

ದೆಹಲಿ: ಲಡಾಖ್ ಗಡಿ ವಿಚಾರದಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮೂಗು ತೋರಿಸುವ ಪ್ರಯತ್ನಕ್ಕಿಳಿದಿದೆ. ಭಾರತ ತನ್ನ ನೆರೆರಾಷ್ಟ್ರಗಳಿಗೆ ಬೆದರಿಕೆ ಹಾಕಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಲಡಾಖ್‌ನಲ್ಲಿನ ಭಾರತ-ಚೀನಾ ಗಡಿರೇಖೆ ವಿಚಾರ ಮುಂದಿಟ್ಟು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ಭಾರತವನ್ನು ಕೆಣಕುವ ಪ್ರಯತ್ನಕ್ಕಿಳಿದಿದ್ದಾರೆ. ಹಿಂದುತ್ವ ಅಧಿಪತ್ಯದ ಮೋದಿ ಸರ್ಕಾರವು ನಾಜಿಯ ಲೆಬೆನ್ಸ್‌ರಾಮ್ -ಲಿವಿಂಗ್ ಸ್ಪೇಸ್ ಗೆ ಹೋಲುವ ರೀತಿ ಸೊಕ್ಕಿನ ನೀತಿ ಮೂಲಕ ನೆರೆ ರಾಷ್ಟ್ರಗಳಿಗೆ ಬೆದರಿಕೆ ಹಾಕುತ್ತಿದೆ ಎಂದು ಈ ಟ್ವೀಟ್’ನಲ್ಲಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಲಡಾಕ್‌ನ ಸರೋವರವಾದ ಪಂಗೊಂಗ್ ತ್ಸೊ ಗಡಿಭಾಗದಲ್ಲಿ ಚೀನಾ ಸೇನೆ ಜಮಾಯಿಸಿದ ಬಳಿಕ ಅಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಈ ಸಂದರ್ಭದಲ್ಲಿ ಭಾರತವನ್ನು ತೆಗಳಿ ಚೀನಾವನ್ನು ಓಲೈಸುವ ಪ್ರಯತ್ನದ ಭಾಗವಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಟ್ವೀಟ್ ಮಾಡಿದಂತಿದೆ.

ಇದನ್ನೂ ಓದಿ.. ಗಡಿ ವಿವಾದ; ಭಾರತ ಜೊತೆ ಮಾತುಕತೆಗೆ ಸಿದ್ದ ಎಂದ ಚೀನಾ

 

Related posts