ರಾಜ್ಯದಲ್ಲಿ 1267 ಹೊಸ ಕೊರೋನಾ ಕೇಸ್; ಬೆಂಗಳೂರಿನಲ್ಲಿ ಒಂದೇ ದಿನ 783 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತನ್ನ ಪಾರುಪತ್ಯವನ್ನು ಮುಂದುವರಿಸಿದೆ. ಬಹಳಷ್ಟು ಮಂದಿಯನ್ನು ಈ ಅಗೋಚರ ವೈರಾಣು ಆವರಿಸಿಕೊಂಡಿದ್ದು ಇಂದಿನ ಹೆಲ್ತ್ ಬುಲೆಟಿನ್ ಬೆಚ್ಚಿಬೀಳಿಸುವ ಸಂಗತಿಯನ್ನು ಬಹಿರಂಗಪಡಿಸಿದೆ.

ಇಂದು ಸಂಜೆಯಹೊತ್ತಿಗೆ ಅನಾವರಣಗೊಂಡ ಮಾಹಿತಿಯಂತೆ ರಾಜ್ಯದಲ್ಲಿ 1267 ಹೊಸ ಕೊರೋನಾ ಸೋಂಕಿನ ಕೇಸ್’ಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ 16 ಮಂದಿ ಸೋಂಕಿತರು ಶನಿವಾರ ಸಂಜೆಯಿಂದೀಚೆಗೆ ಸಾವನ್ನಪ್ಪಿದ್ದಾರೆಂದು ಬುಲೆಟಿನ್ ಹೇಳಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಇಂದು 783 ಹೊಸ ಪಾಸಿಟಿವ್ ಕೇಸ್’ಗಳು ಪತ್ತೆಯಾಗಿವೆ. ದಕ್ಷಿಣಕನ್ನಡ ಉಡುಪಿ ಜಿಲ್ಲೆಗಳಲ್ಲೂ ಕೊರೋನಾ ತಲ್ಲಣ ಉಂಟಾಗಿದ್ದು ದಕ್ಷಿಣಕನ್ನಡದಲ್ಲಿ 97 ಹಾಗೂ ಉಡುಪಿಯಲ್ಲಿ 40 ಹೊಸ ಪ್ರಕರಣಗಳು ವರದಿಯಾಗಿವೆ. ಬಳ್ಳಾರಿಯಲ್ಲಿ 71 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಗದಗ್’ನಲ್ಲಿ 30, ಬೆಂಗಳೂರು ಗ್ರಾಮಾಂತರದಲ್ಲಿ 27, ಧಾರವಾಡ ಮತ್ತು ಮೈಸೂರಿನಲ್ಲಿ ತಲಾ 18, ಬಾಗಲಕೋಟೆ 17, ಉತ್ತರಕನ್ನಡದಲ್ಲಿ 14 ಪ್ರಕರಣಗಳು ಬೆಳಕಿಗೆ ಬಂದಿವೆ. ಹಾವೇರಿಯಲ್ಲಿ 12, ಕೋಲಾರದಲ್ಲಿ 11 ಕೇಸ್ ವರದಿಯಾಗಿವೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

Related posts