ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ವೈರಾಣು ಅಟ್ಟಹಾಸ ಮೆರೆದಿದೆ. ಯಮಧೂತ ವೈರಸ್ ಕರುನಾಡಲ್ಲಿ ಕ್ಷಣಕ್ಷಣಕ್ಕೂ ಆತಂಕದ ಸನ್ನಿವೇಶವನ್ನು ಹುಟ್ಟುಹಾಕುತ್ತಿದ್ದು ಈಗಾಗಲೇ ಸೋಂಕಿತರ ಸಂಖ್ಯೆ 1000 ದಾಟಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೊಸ ಹೆಲ್ತ್ ಬುಲೆಟಿ ರಾಜ್ಯದಲ್ಲಿ ಹೊಸದಾಗಿ 45 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ.. ಕಡಲತಡಿಯಲ್ಲಿ ಕೊರೋನಾ ಅವಾಂತರ; 21 ಹೊಸ ಕೇಸ್
ಬಾಗಲಕೋಟೆಯ ಯುವತಿಯೊಬ್ಬಳಲ್ಲಿ ಕಾಣಿಸಿಕೊಂಡ ಸೋಂಕು ಈ ಸಂಖ್ಯೆಯನ್ನು 1000ದ ಗಾಡಿಯನ್ನುತಲುಪುವಂತೆ ಮಾಡಿದೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 1032ಕ್ಕೆ ಏರಿಕೆಯಾಗಿದೆ.
- ದಕ್ಷಿಣಕನ್ನಡ – 16 ಹೊಸ ಕೇಸ್
- ಬೆಂಗಳೂರು – 13 ಹೊಸ ಕೇಸ್
- ಉಡುಪಿ – 5 ಹೊಸ ಕೇಸ್
- ಬೀದರ್ – 3 ಹೊಸ ಕೇಸ್
- ಹಾಸನ – 3 ಹೊಸ ಕೇಸ್
- ಚಿತ್ರದುರ್ಗ – 2 ಹೊಸ ಕೇಸ್
- ಶಿವಮೊಗ್ಗ- 1 ಹೊಸ ಕೇಸ್
- ಕೋಲಾರ್ – 1 ಹೊಸ ಕೇಸ್
- ಬಾಗಲಕೋಟೆ – 1 ಹೊಸ ಕೇಸ್