ಕರಾವಳಿಯಲ್ಲಿ ಕೊರೋನಾ ರುದ್ರ ನರ್ತನ; ಒಂದೇ ದಿನ 21 ಮಂದಿಯಲ್ಲಿ ಸೋಂಕು

ಮಂಗಳೂರು-ಉಡುಪಿ: : ಕರ್ನಾಟಕದಲ್ಲಿ ಕೊರೋನಾ ವೈರಾಣು ಅಟ್ಟಹಾಸ ಮೆರೆದಿದೆ. ಯಮಧೂತ ವೈರಸ್ ಕರುನಾಡಲ್ಲಿ ಕ್ಷಣಕ್ಷಣಕ್ಕೂ ಆತಂಕದ ಸನ್ನಿವೇಶವನ್ನು ಹುಟ್ಟುಹಾಕುತ್ತಿದ್ದು ಈಗಾಗಲೇ ಸೋಂಕಿತರ ಸಂಖ್ಯೆ 1000 ದಾಟಿದೆ. ಈ ಪೈಕಿ ಕಡಲತಡಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲೇ 21 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ.

ರಾಜ್ಯದ ಬಂದರು ನಗರಿ ಮಂಗಳೂರಿಗೆ ಆತಂಕದ ಸುನಾಮಿಯಂತೆ ಅಪ್ಪಳಿಸಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 16 ಮಂದಿಯಲ್ಲಿ ಕೋವಿಡ್-19 ವೈರಾಣು ಸೋಂಕು ಕಾಣಿಸಿಕೊಂಡಿದ್ದು ಇದರಿಂದಾಗಿ ಕಡಲ ತಡಿಯ ಜನರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ.. ‘ಮೋದಿ ಮನಿ’.. ಮತ್ತಷ್ಟು ಕೋಡುಗೆ.. ಯಾರಿಗೆಲ್ಲಾ ಏನೇನಿದೆ?

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಕೇಸ್ ಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಉಡುಪಿಯಲ್ಲೂ ಐವರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಕರಾವಳಿಯಲ್ಲಿ ಒಂದೇ ದಿನದಲ್ಲಿ 21 ಹೊಸ ಪ್ರಕರಣಗಳು ಪತ್ತೆಯಾಗಿವೆ.

  • ಮಂಗಳೂರಲ್ಲಿ ಇಂದು 12 ಪುರುಷರು ಮತ್ತು 4 ಮಹಿಳೆಯರಿಗೆ ಸೋಂಕು
  • ಇವರಲ್ಲಿ 15 ಮಂದಿ ಮೇ.12ರಂದು ದುಬೈನಿಂದ ಏರ್ ಲಿಫ್ಟ್ ಆಗಿದ್ದ ಮಂಗಳೂರಿಗರು
  • ಏರ್ ಲಿಫ್ಟ್ ಅಗಿದ್ದ 179 ಪ್ರಯಾಣಿಕರ ಪೈಕಿ 123 ಜನ ಮಂಗಳೂರಿಗರು.
  • ಈ ಪೈಕಿ 15 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆ 
  • ಉಡುಪಿಯಲ್ಲೂ ಐವರಲ್ಲಿ ಸೋಂಕು

ಇದನ್ನೂ ಓದಿ.. ಡಾನ್ ಮುತ್ತಪ್ಪ ರೈ ತಲೆ ತಗ್ಗಿಸಿದ್ದು ಈ ಖಡಕ್ ಅಧಿಕಾರಿಯ ಮಾತಿಗೆ ಮಾತ್ರ 

 

Uncategorized

Related posts