ದೆಹಲಿ: ಕೊರೋನಾ ಅಟ್ಟಹಾಸ ಜಗತ್ತನ್ನೇ ತತ್ತರಿಸುವಂತೆ ಮಾಡಿದೆ. ಸೋಕಿನ ವೇಗ ಮತ್ತಷ್ಟು ಹೆಚ್ಚಿದ್ದು, ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 63 ಲಕ್ಷ ದಾಟಿದೆ. ಸೋಂಕಿನಿಂದಾಗಿ ಸಾವನ್ನಪ್ಪುತ್ತಿರುವವವರ ಸಂಖ್ಯೆಯೂ ಹೆಚ್ಚುತ್ತಲಿದ್ದು ಈವರೆಗೆ ಸುಮಾರು 3.76 ಲಕ್ಷ ಜನರು ಸಾವನ್ನಪ್ಪಿದ್ದಾರೆ.
- ವಿಶ್ವಾದ್ಯಂತ 63,30,069 ಜನರಿಗೆ ಕೊರೊನಾ ಸೋಂಕು
- 3,76,005 ಜನರು ಸೋಂಕಿಗೆ ಬಲಿ
- 28.83 ಲಕ್ಷ ಮಂದಿ ಗುಣಮುಖ
ಪಾಶ್ಚಾತ್ಯ ರಾಷ್ಟ್ರಗಳಲ್ಲಷ್ಟೇ ಅಲ್ಲ ಪ್ರಸಕ್ತ ಬಹುತೇಕ ರಾಷ್ಟ್ರಗಳು ಕೋವಿಡ್-೧೯ ವೈರಾಣುವಿನ ಬಿಗಿ ಮುಷ್ಟಿಯಲ್ಲಿವೆ. ಅದರಲ್ಲೂ ಅಮೆರಿಕಾದಲ್ಲಿ ಸೋಂಕಿನ ವೇಗ ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಿವೆ. ಭಾರತದಲ್ಲಿಯೂ ಕರೋನಾ ವ್ಯಾಪಕವಾಗಿ ಹರಡಿದ್ದು, ವಿಶ್ವದ ಅತಿ ಹೆಚ್ಚು ಸೋಂಕಿತರಿರುವ ದೇಶಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
- ಅಮೆರಿಕದಲ್ಲಿ 18,46,123 ಸೋಂಕಿತರು
- ಬ್ರೆಜಿಲ್ ನಲ್ಲಿ ಐದು ಲಕ್ಷ ಸೋಂಕಿತರು
- ರಷ್ಯಾದಲ್ಲಿ 4,14,878 ಸೋಂಕಿತರು
- ಇಂಗ್ಲೆಂಡ್ ನಲ್ಲಿ 2,76,332 ಸೋಂಕಿತರು
- ಇಟಲಿಯಲ್ಲಿ 2,33,197 ಸೋಂಕಿತರು
- ಭಾರತದಲ್ಲಿ 1,98,317 ಸೋಂಕಿತರು
ಇದನ್ನೂ ಓದಿ.. ಲಡಾಖ್ ಎಲ್‌ಎಸಿ ಬಳಿ ಶಸ್ತಾಸ್ರ ಜಮಾವಣೆ; ಚೀನಾ-ಭಾರತ ಸಮರ ಸನ್ನದ್ಧ?