ಲಡಾಖ್ ಎಲ್‌ಎ‌ಸಿ ಬಳಿ ಶಸ್ತಾಸ್ರ ಜಮಾವಣೆ; ಚೀನಾ-ಭಾರತ ಸಮರ ಸನ್ನದ್ಧ?

ದೆಹಲಿ: ಭಾರತ ಮತ್ತು ಚೀನಾ ಸಮಾರಾ ಲಡಾಖ್’ನಲ್ಲಿ ಸಮಾರಾ ಛಾಯೆ ಆವರಿಸಿದೆ. ಈವರೆಗೂ ಪದೇಪದೇ ಕಾಲ್ಕೆರೆಯುತ್ತಾ ಜಗಳಕ್ಕೆ ಬರುತ್ತಿದ್ದ ಚೀನಾ ಈಗ ಗಡಿ ಭಾಗದಲ್ಲಿ ಸೇನೆ ನಿಯೋಜಿಸಿದೆ. ಜೊತೆಗೆ ಶಸ್ತ್ರಾಸ್ತ್ರ ಸಜ್ಜುಗೊಳಿಸಿ ಆತಂಕ ಸೃಷ್ಟಿಸಿದೆ. ಕೆಂಪು ರಾಷ್ಟ್ರದ ಯುದ್ಧ ಪಿತೂರಿಯ ಸುಳಿವರಿತಿರುವ ಭಾರತ ಕೂಡಾ ಗಡಿ ಭಾಗದಲ್ಲಿ ಸೇನೆನೆಯನ್ನು ಸಜ್ಜುಗೊಳಿಸಿದೆ.

ಪೂರ್ವ ಲಡಾಖ್‌ನ ಗಡಿ ಭಾಗದಲ್ಲಿ ಸುಮಾರು 25 ದಿನಗಳಿಂದ ಉಪಟಳ ಆರಂಭಿಸಿರುವ ಚೀನಾ ಸೇನೆ, ಭಾರತದ ಸೇನಾ ಯೋಧರಿಗೆ ಕಿರುಕುಳ ನೀಡುತ್ತಿದೆ ಎನ್ನಲಾಗುತ್ತಿದೆ. ಗಡಿಭಾಗದಲ್ಲಿ ಆಗಾಗ್ಗೆ ಅಹಿತಕರ ಘಟನೆಗಳೂ ನಡೆಯುತ್ತಿವೆ. ಈ ಸಂದರ್ಭದಲ್ಲೇ ಚೀನಾ ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿದೆ. ಈ ಮಾಹಿತಿ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಪದೇ ಕೂಡಾ ತನ್ನ ಭಾಗದಲ್ಲಿ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿದೆ.

ಚೀನಾ ಸೈನ್ಯವು ಪೂರ್ವ ಲಡಾಕ್‌ನ ಎಲ್.ಎ.ಸಿ ಬಳಿ ಫಿರಂಗಿ ಬಂದೂಕುಗಳು, ಯುದ್ಧ ವಾಹನಗಳು ಮತ್ತು ಭಾರೀ ಮಿಲಿಟರಿ ಉಪಕರಣಗಳನ್ನು ಜಮೆ ಮಾಡುವುದನ್ನು ಹೆಚ್ಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಆತಂಕಕಾರಿ ಸನ್ನಿವೇಶಕ್ಕೆ ಕಾರಣವಾಗಿದ್ದು ಎರಡು ದೇಶಗಳ ನಡುವೆ ಯುದ್ಧ ಸನ್ನಿಹಿತವೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ.. ಬಿಡುಗಡೆಗೆ ಮುನ್ನವೇ ‘ರಾಬರ್ಟ್’ ಹವಾ; ದರ್ಶನ್ ಅಭಿಮಾನಿಗಳು ಫುಲ್ ಖುಷ್

 

Related posts