ಕೊರೋನಾ ಕಾರಳತೆ; ರಾಜ್ಯದಲ್ಲಿ ಮತ್ತೆ 38 ಕೇಸ್

ಬೆಂಗಳೂರು: ದೇಶಾದ್ಯಂತ ಕೊರೋನಾ ಕರಾಳ ಯಾತ್ರೆ ಮುಂದುವರಿದಿದ್ದು ಮತ್ತಷ್ಟು ಸೋಂಕಿನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಅದರಲ್ಲೂ ಕರ್ನಾಟಕದಲ್ಲಿ ಒಂದೇ ದಿನ 38 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ಕಳವಳಕಾರಿ ಸಂಖ್ಯೆಯೊಂದಿಗೆ ಆ ಮೂಲಕ ರಾಜ್ಯದಲ್ಲಿ ವೈರಸ್ ಸೋಂಕಿತರ ಸಂಖ್ಯೆ 353ಕ್ಕೆ ಏರಿಕೆಯಾಗಿದೆ.

ರಾಜ್ಯದ ಆರೋಗ್ಯ ಇಲಾಖೆ ಶುಕ್ರವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ ಮತ್ತೆ ೩೮ ಕೊರೋನಾ ಸೋಂಕಿತರ ಬಗ್ಗೆ ಬೊಟ್ಟು ಮಾಡಿದೆ.

  • ಮೈಸೂರಿನಲ್ಲಿ 12 ಕೇಸ್
  • ಬೆಂಗಳೂರಿನಲ್ಲಿ 9 ಕೇಸ್
  • ಹೊಸಪೇಟೆಯಲ್ಲಿ 7 ಕೇಸ್
  • ಮಂಡ್ಯದಲ್ಲಿ 3 ಕೇಸ್
  • ಚಿಕ್ಕಬಳ್ಳಾಪುರದಲ್ಲಿ 3 ಕೇಸ್
  • ವಿಜಯಪುರದಲ್ಲಿ 2 ಕೇಸ್
  • ಬೀದರ್’ನಲ್ಲಿ 1 ಕೇಸ್
  • ದಕ್ಷಿಣಕನ್ನಡದಲ್ಲಿ 1 ಕೇಸ್

ಗುರುವಾರ ಸಂಜೆ 5ರಿಂದ ಶುಕ್ರವಾರ ಮಧ್ಯಾಹ್ನದವರೆಗೆ 38 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಹೆಲ್ತ್ ಬುಲೆಟಿನ್’ನಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ ರಾಜ್ಯದಲ್ಲಿ ಈ ವರೆಗೆ ಕೊರೋನಾ ಸೋಂಕಿನಿಂದಾಗಿ 13 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 82 ಜನರು ಚೇತರಿಕೆ ಕಂಡಿದ್ದಾರೆ.

Related posts