ಕೊರೋನಾ ಸೋಂಕಿತರ ಪಾಡು ಹೇಳತೀರದು. ಕೋವಿಡ್-19 ವೈರಾಣು ಸೋಂಕಿತನೊಬ್ಬ ಖಿನ್ನತೆಗೊಳಗಾಗಿ ಆತ್ಮಹತ್ಯಗೆ ಶರಣಾಗಿರುವ ಘಟನೆ ಬೆಚ್ಚಿ ಬೀಳುವಂತೆ ಮಾಡಿದೆ.
ಬೆಂಗಳೂರು: ಜಗತ್ತಿನಾದ್ಯಂತ ಆವರಿಸಿಕೊಂಡಿದ್ದು ಅವೆಷ್ಟೋ ಜೀವಗಳು ಬಲಿಯಾಗಿವೆ. ಇತ್ತ ಕರುನಾಡಿನಲ್ಲೂ ಸಂಕಟದ ಜೊತೆಗೆ ಆಘಾತಕಾರಿ ಘಟನೆಯೊಂದು ಎದೆ ಝಲ್ಲೆನಿಸುವಂತೆ ಮಾಡಿದೆ. ಕೊರೋನಾ ಸೋಂಕಿತನೊಬ್ಬ ಆಸ್ಪತ್ರೆ ಕಟ್ಟಡದಿಂದಲೇ ಜಿಗಿದು ಆತ್ಮಹತ್ಯೆ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊರೋನಾ ಸೋಂಕಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬ ತೀವ್ರ ಖಿನ್ನತೆಗೊಳಗಾಗಿದ್ದ. ಇದ್ದಕ್ಕಿದ್ದಂತೆಯೇ ಈತ ಆಸ್ಪತ್ರೆ ಕಟ್ಟಡದಿಂದ ಜಿಗಿದಿದ್ದಾನೆ. ವಿಕ್ಟೋರಿಯಾ ಟ್ರಾಮಾ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ. ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿರುವುದರಿಂದಾಗಿ ಆತ ಬದುಕುಳಿಯಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.
ಇದನ್ನೂ ಓದಿ.. 13 ರಾಜ್ಯಗಳಲ್ಲಿ ಲಾಕ್ ಡೌನ್ ವಿಸ್ತರಣೆ? ಮೋದಿ ತೀರ್ಮಾನದತ್ತ ಎಲ್ಲರ ಚಿತ್ತ
ಸುಮ್ಮರು 50 ವರ್ಷ ಪ್ರಾಯದ ಈತ ಬೆಂಗಳೂರಿನ ತಿಲಕ್ ನಗರ ನಿವಾಸಿಯಾಗಿದ್ದು ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಪೈಕಿ ಈತ 466 ನೇ ವ್ಯಕ್ತಿಯಾಗಿದ್ದ ಈತನಿಗೆ ಕಿಡ್ನಿ ವೈಫಲ್ಯವಿದ್ದು ನಿನ್ನೆಯಷ್ಟೇ ಡಯಾಲಿಸಿಸ್ ನಡೆದಿತ್ತು ಎಂದು ಹೇಳಲಾಗುತ್ತಿದೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವಿವಿ ಪುರಂ ಠಾಣೆ ಪೋಲೀಸರು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ.. ಮನೆ ಮಂದಿಗೆಲ್ಲಾ ಕೊರೋನಾ ಸೋಂಕು; ಸಂಸದರು ಕಂಗಾಲು