ರಾಜ್ಯದಲ್ಲಿ ಮತ್ತೆ 8 ಮಂದಿಯಲ್ಲಿ ಸೋಂಕು; ಕರಾವಳಿ ಈಗ ಡೇಂಜರ್ ಝೋನ್?

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಸವಾರಿ ಮುಂದುವರಿದಿದ್ದು ಮತ್ತೆ 8 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ ಮಂಗಳೂರಿನಲ್ಲಿ ಮತ್ತೆ ಇಬ್ಬರಲ್ಲಿ ಸೋಂಕು ಕಂಡು ಬಂದಿದ್ದು ಮಂಗಳೂರು ಕೂಡಾ ಇದೀಗ ಡೇಂಜರ್ ಝೋನ್ ಎಂಬಂತಾಗಿದೆ.

ಭಾನುವಾರ ಸಂಜೆ ನಂತರ ಸೋಮವಾರ ಮದ್ಯಾಹ್ನದವರೆಗಿನ ಕೊರೋನಾ ವಿದ್ಯಮಾನಗಳ ಕುರಿತಾಗಿ ಅಧಿಕೃತ ಮಾಹಿತಿ ನೀಡುವ ಹೆಲ್ತ್ ಬುಲೆಟಿನ್ ಇಂಥದ್ದೊಂದು ಕಳವಳಕಾರಿ ಸಂಗತಿಯತ್ತ ಬೆಳಕು ಚೆಲ್ಲಿದೆ.  ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 511ಕ್ಕೆ ಏರಿದೆ.

ಬೆಂಗಳೂರು ನಗರದಲ್ಲಿ 13 ವರ್ಷದ ಬಾಲಕನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಬಾಗಲಕೋಟೆಯ ಜಮಖಂಡಿಯಲ್ಲಿ ಇಬ್ಬರಿಗೆ ಹಾಗೂ ವಿಜಯಪುರದಲ್ಲಿ ಮತ್ತಿಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಂಡ್ಯ ಜಿಲ್ಲೆಯಲ್ಲೂ ಒಂದು ಪಾಸಿಟಿವ್ ಪ್ರಕರಣ ಗೊತ್ತಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ.. ಕೊರೋನಾ ಸೋಂಕಿನಿಂದ ಹತಾಶೆ; ಆಸ್ಪತ್ರೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ದಕ್ಷಿಣ ಕನ್ನಡದಲ್ಲಿ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. 80 ವರ್ಷದ ಮಹಿಳೆ ಮತ್ತು 45 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ದಕ್ಷಿಣ ಕನ್ನಡದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ.. 13 ರಾಜ್ಯಗಳಲ್ಲಿ ಲಾಕ್ ಡೌನ್ ವಿಸ್ತರಣೆ? ಮೋದಿ ತೀರ್ಮಾನದತ್ತ ಎಲ್ಲರ ಚಿತ್ತ 

 

 

 

Related posts