ಕೊರೋನಾ ನಿಯಂತ್ರಣಕ್ಕೆ ಆರ್ಥಿಕ ಶಕ್ತಿ; ಶಾಸಕ ರಾಮದಾಸ್ ವಿಶಿಷ್ಟ ಅಭಿಯಾನ

ಕೋವಿಡ್-19 ವೈರಾಣು ಪ್ರಸ್ತುತ ದೇಶವ್ಯಾಪಿ ಮರಣ ಮೃದಂಗ ಭಾರಿಸುತ್ತಿದೆ. ಈ ವೈರಾಣು ತಡೆಗೆ ಶಕ್ತಿಮೀರಿ ಶ್ರಮ ವಹಿಸಲಾಗುತ್ತಿದ್ದು, ಈ ವಿಚಾರದಲ್ಲಿ ಮೈಸೂರು ಶಾಸಕರ ಸಮಾಜಮುಖಿ ಕೆಲಸ ನಿಜಕ್ಕೂ ಮಾದರಿಯಾಗಿದೆ.

ಮೈಸೂರು: ಕೊರೋನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಅಮೆರಿಕಾ, ಇಟಲಿ, ಫ್ರಾನ್ಸ್, ಸ್ಪೇನ್ ರಾಷ್ಟ್ರಗಳು ಸ್ಮಾಶಾನದಂತಾಗಿದ್ದು ಬಹುತೇಕ ದೇಶಗಳಲ್ಲೂ ಲಾಕ್ ಡೌನ್ ಜಾರಿಯಲ್ಲಿದೆ. ಭಾರತದಲ್ಲೂ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಬಗೆಬಗೆಯ ಕಸರತ್ತು ಸಾಗಿದ್ದು, ಇತ್ತ ಮೈಸೂರಿನಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್ ಅವರು ತಮ್ಮದೇ ರೀತಿಯಲ್ಲಿ ಕಾರ್ಯೋನ್ಮುಖರಾಗಿ ನಾಡಿನ ಗಮನ ಕೇಂದ್ರೀಕರಿಸಿದ್ದಾರೆ.

ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಎಸ್.ಎ.ರಾಮದಾಸ್, ತನ್ನ ಕ್ಷೇತ್ರದ ಜನತೆ ಲಾಕ್ ಡೌನ್ ಪರಿಸ್ಥಿತಿಯಿಂದಾಗಿ ಸಂಕಷ್ಟದಲ್ಲಿ ಸಿಲುಕಬಾರದೆಂದು ಬಗೆಬಗೆಯ ಕಸರತ್ತು ಮಾಡುತ್ತಿದ್ದಾರೆ.

ಕ್ಷೇತ್ರದಲ್ಲಿ ಅಸಾಹಾಯಕರಾಗಿರುವ ಮಂದಿಗೆ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳಲು ಯುವಕರ ಹಲವಾರು ತಂಡಗಳನ್ನು ರಚಿಸಲಾಗಿದೆ. ಪಡಿತರ ವಿತರಣೆಗೂ ಶಾಸಕರ ಮಾರ್ಗದರ್ಶನದಲ್ಲಿ ಯುವ ಸೇನಾನಿಗಳು ಶ್ರಮಿಸುತ್ತಿದ್ದಾರೆ.

ಅಷ್ಟೇ ಅಲ್ಲ ಸಕ್ಕರೆ ಕಾಯಿಲೆ, ಕ್ಯಾನ್ಸರ್, ರಕ್ತದೊತ್ತಡ, ಕಿಡ್ನಿ ಸಮಸ್ಯೆ, ವಯೋಸಹಜ ಇತ್ಯಾದಿ ಕಾಯಿಲೆಗಳಿಗೆ ನಿರ್ದಿಷ್ಟ ಔಷಧಿ ಬೇಕಾಗಿದ್ದು, ಪ್ರಸ್ತುತ ಲಾಕ್’ಡೌನ್ ಹಿನ್ನೆಲೆಯಲ್ಲಿ ಸುಲಭವಾಗಿ ಸಿಗುತ್ತಿಲ್ಲ. ಆದರೆ ಶಾಸಕರ ಬೆಂಬಲಿಗರು ಈ  ಈ ಸಮಸ್ಯೆ ಬಗೆಹರಿಸುವಲ್ಲೂ ಯಶಸ್ವಿಯಾಗಿದ್ದಾರೆ.  ಈ ನಡುವೆ ಶಾಸಕರು ಆಗಾಗ್ಗೆ ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮ ಮೈಸೂರಿನ ನಾಗರಿಕರಿಗೆ ವರದಾನವೆನಿಸಿದೆ.

ದೇಣಿಗೆ ಅಭಿಯಾನಕ್ಕೆ ಮುನ್ನುಡಿ

ಇದೀಗ ಮತ್ತೊಂದು ಮಾದರಿ ಕಾರ್ಯಕ್ಕೆ ಮುಂದಾಗಿರುವ ಶಾಸಕ ರಾಮದಾಸ್, ಕೊರೋನಾ ನಿಯಂತ್ರಣ ಸಂಬಂಧ ಸರ್ಕಾರದ ಕೆಲಸಕ್ಕೆ ಆರ್ಥಿಕ ಶಕ್ತಿ ತುಂಬುವ ಅಭಿಯಾನ ಆರಂಭಿಸಿದ್ದಾರೆ. ಸರ್ಕಾರಕ್ಕೆ ಪ್ರತಿಯೊಬ್ಬರೂ ಕನಿಷ್ಠ 100 ರೂಪಾಯಿ ದೇಣಿಗೆ ನೀಡಿ ಒಗ್ಗಟ್ಟು ಪ್ರದರ್ಶಿಸೋಣ, ಸರ್ಕಾರದ ಕೆಲಸಕ್ಕೆ ಗಟ್ಟಿತನ ತಂದು ಕೊಡೋಣ ಎಂದು ಅಭಿಯಾನ ಕೈಗೊಂಡಿದ್ದಾರೆ. ಏಪ್ರಿಲ್ 10,  ಶುಕ್ರವಾರದಂದು  ಪ್ರಧಾನಿಯವರ ನಿಧಿಗೆ 100 ರೂಪಾಯಿ ಸಂದಾಯ ಮಾಡಬೇಕೆನ್ನುವ ರಾಮದಾಸ್ ಅವರ ಕರೆಯನ್ನು ಫಲಪ್ರದವಾಗಿಸಲು, ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಕ್ಷೇತ್ರದ ಯುವಜನರು ಪಕ್ಷ ಬೇಧ ಮರೆತು ಪ್ರಚಾರದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ.. ಮೋದಿ ಹಾದಿಯಲ್ಲಿ ಸಿದ್ದು ಆಪ್ತ ಕೈ ನಾಯಕ ಎಂ.ಬಿ.ಪಾಟೀಲ್; ಸಾಮೂಹಿಕ ಕೈಂಕರ್ಯಕ್ಕೆ ಕರೆ. 

 

Related posts