ಬೆಂಗಳೂರು: ನಿಮಗೆ ಕೊರೋನಾ ವೈರಸ್ ಬಗ್ಗೆ ಆತಂಕ ಇದೆಯೇ? ಕೊರೋನಾ ವೈರಸ್ ಸೋಂಕು ತಗುಲಿರಬಹುದೇ ಎಂಬ ಭೀತಿ ಕಾಡುತ್ತಿದೆಯೇ? ಇದೀಗ ನೀವೇ ಪರೀಕ್ಷೆ ಮಾಡಿಕೊಳ್ಳಬಹುದು.
ಮಾಲ್, ಮಾರ್ಕೆಟ್, ಫೆಸ್ಟಿವಲ್, ಮೀಟಿಂಗ್ ಹೀಗೆ ಎಲ್ಲೆಂದರಲ್ಲಿ ಓಡಾಡುತ್ತಿರುವಾಗ ವೈರಸ್ ಸೋಂಕು ತಗಲುವುದು ಸಾಮಾನ್ಯ. ಅದರಲ್ಲೂ ಕೊರೋನಾ ವೈರಸ್ ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ.
ಇದೇ ಸಂದರ್ಭದಲ್ಲಿ ಜನರಲ್ಲಿನ ಸಂಶಯ ನಿವಾರಣೆಗಾಗಿ ಗೂಗಲ್ ಸಂಸ್ಥೆಯ ವರ್ಲಿ ವಿಭಾಗದ ತಜ್ಞರು ವೆಬ್ ಸೈಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವೆಬ್ ಸೈಟ್ ಗೆ ಭೇಟಿ ನೀಡಿ ಯಾರು ಬೇಕಾದರೂ ಕೊರೋನಾ ವೈರಸ್ ಟೆಸ್ಟ್ ಕುರಿತು ಮಾಹಿತಿ ಪಡೆಯಬಹುದು.
- ಮೊದಲು ಗೂಗಲ್ ಆ್ಯಪ್ ಮೂಲಕ ವೆಬ್’ಸೈಟ್’ ಗೆ ಭೇಟಿ ನೀಡಿ ಸೈನ್ ಅಪ್ ಆಗಬೇಕು. ಸುಮಾರು ನಾಲ್ಕು ಹಂತಗಳ ಸ್ಕ್ರೀನಿಂಗ್ ಪ್ರಕ್ರಿಯೆ ಬಳಿಕ ನೀವೇ ಕೊರೋನಾ ವೈರಸ್ ಸೋಂಕಿನ ಬಗೇಜಿನ ಸಂಶಯಗಳಿಂದ ದೂರ ಇರಬಹುದು.
- ಅನಂತರ Covid-19 ಕುರಿತ ವಿವರಗಳನ್ನು ಹಾಗೂ ಕೆಲ ವಯ್ಯಕ್ತಿಕ ವಿವರಗಳನ್ನು ನಮೂದಿಸಬೇಕು.
- ವೆಬ್ಸೈಟ್ ಮೂಲಕವೇ ಸ್ಕ್ರೀನಿಂಗ್ ಪ್ರಕ್ರಿಯೆ ನಡೆಯುತ್ತದೆ. ಆಗಲೂ ಅಗತ್ಯ ಮಾಹಿತಿ ನಮೂದಿಸಬೇಕು. ಈ ಮಾಹಿತಿ ಮೂಲಕವೇ ಆರೋಗ್ಯ ಸ್ಥಿತಿ ಹಾಗೂ ಕೊರೋನಾ ಬೈರಾಸ್ ಸೋಂಕಿನ ಲಕ್ಷಣಗಳು ಗೊತ್ತಾಗುತ್ತವೆ.
- ಒಂದು ವೇಳೆ ಸೋಂಕು ಲಕ್ಷಣಗಳು ಗೋಚರಿಸಿದರೆ ಕೊರೊನಾ ಟೆಸ್ಟ್’ನ ಅಗತ್ಯದ ಬಗ್ಗೆ ಮಾಹಿತಿಯನ್ನು ಈ ವೆಬ್’ಸೈಟ್ ಒದಗಿಸುತ್ತದೆ.
- ಈ ನಾಲ್ಕೂ ಹಂತಗಳು ಮುಗಿದ ಬಳಿಕ ಕೊರೊನಾ ವೈರಸ್ ಪಾಸಿಟಿವ್ ಅಥವಾ ನೆಗೆಟಿವ್ ಎಂಬುದು ತಿಳಿಯಲಿದೆ.