ವಾಷಿಂಗ್ಟನ್: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಜಗತ್ತಿನ ಹಿರಿಯಣ್ಣ ಅಮೆರಿಕಾದಲ್ಲೂ ಕಂಪನ ಸೃಷ್ಟಿಸಿದೆ. ಈಗಾಗಲೇ 4,500ಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಸುಮಾರು 85 ಮಂದಿ ಅಮೆರಿಕಾದಲ್ಲಿ ಕೊರೋನಾ ಹಾವಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕಾ ಆಡಳಿತ ಕಟ್ಟು ನಿಟ್ಟಿನ ನಿಯಮ ಪಾಲನೆಗೆ ಕಟ್ಟಪ್ಪಣೆ ಮಾಡಿದೆ. ಸಾಮೂಹಿಕ ಸಮಾರಂಭಗಳು, 10ಕ್ಕೂ ಹೆಚ್ಚು ಜನರು ಗುಂಪು ಸೇರುವುದನ್ನು ಶ್ವೇತಭವನ ನಿಷೇಧಿಸಿದೆ. ಶಾಲಾ, ಕಾಲೇಜುಗಳು, ಹೋಟೆಲ್, ರೆಸ್ಟೋರೆಂಟ್’ಳನ್ನು ಮುಚ್ಚಲಾಗಿದೆ. ಕ್ರೀಡಾಕೂಟಗಳಿಗೂ ಅವಕಾಶ ಇಲ್ಲ.
ಈ ನಡುವೆ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವುದು ಎಲ್ಲರ ಕರ್ತವ್ಯ ಎಂದಿರುವ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್, ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಲ್ಲಿಯೇ ಇರುವಂತೆ ಜನತೆಗೆ ಕರೆ ನೀಡಿದ್ದಾರೆ. ಆತ್ಮೀಯರೊಂದಿಗೆ ಸಮಾಲೋಚಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಿ ಎಂದು ಅವರು ಸಲಹೆ ಮಾಡಿದ್ದಾರೆ.
ಅಮೆರಿಕಾದಲ್ಲಿಯೂ