ಹಾವೇರಿ: ಹಿರಿಯ ಪತ್ರಕರ್ತನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆ ಹಾವೇರಿ ಜಿಲ್ಲೆಯ ಹಲಗೇರಿಯಲ್ಲಿ ಮಂಗಳವಾರ ಸಂಜೆ ನೆರವೇರಿತು.
ವಯೋಸಹಜ ಕಾಯಿಲ್ರಯಿಂದ ಬಳಲುತ್ತಿದ್ದ ಪಾಪು ಸೋಮವಾರ ವಿಧಿವಶರಾಗಿದ್ದರು. ಅವರ ಸ್ವಗ್ರಾಮ ಹಲಗೇರಿಯಲ್ಲಿ ಶತಾಯುಷಿಯ ಪಾರ್ಹೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಅಂತ್ಯಕ್ರಿಯೆಯನ್ನುಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
ಲಿಂಗಾಯತ ವಿಧಿವಿಧಾನದ ಪ್ರಕಾರ ಬಸವಣ್ಣರ ವಚನ ಪಠಣ ಮೂಲಕ ಅಂತಿಮ ಕ್ರಿಯಾವಿಧಿ ನೆರವೇರಿಸಲಾಯಿತು. ಪಾಪು ಅವರ ಮಗ ಅಶೋಕ ಪಾಟೀಲ ವಿಧಿವಿಧಾನ ನೆರವೇರಿಸಿದರು.
ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ಸಚಿವರಾದ ಜಗದೀಶ ಶೆಟ್ಟರ್ , ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ, ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಅಂತಿಮ ಕ್ರಿಯೆ ವೇಳೆ ಉಪಸ್ಥಿತರಿದ್ದರು.