ಅಗೋಚರ ವೈರಾಣು ಅವಾಂತರ; ಜಗತ್ತಿನಾದ್ಯಂತ ಒಂದೇ ದಿನ 1.83 ಲಕ್ಷ ಜನರಿಗೆ ಸೋಂಕು

ದೆಹಲಿ: ಚೀನಾದಲ್ಲಿ ಸೃಷ್ಟಿಯಾಗಿರುವ ಅಗೋಚರ ಕೊರೋನಾ ವೈರಾಣು ವಿಶ್ವವನ್ನೇ ಅಲುಗಾಡಿಸಿದೆ. ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲಿದ್ದು ಕೊರೋನಾ ಸಾಧ್ಯವಾಗುತ್ತಲೇ ಇಲ್ಲ.

ವಿಶ್ವದ 213 ರಾಷ್ಟ್ರಗಳನ್ನು ಕಾಡುತ್ತಿರುವ ಈ ವೈರಸ್ ಭಾನುವಾರ ಒಂದೇ ದಿನ ಸುಮಾರು 1 ಲಕ್ಷದ 83 ಸಾವಿರ ಮಂದಿಯಲ್ಲಿ ಪತ್ತೆಯಾಗಿದೆ.

ಪ್ರಸಕ್ತ, ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 9,046,215ಕ್ಕೆ ಏರಿಕೆಯಾಗಿದೆ. ಅಮೆರಿಕದಲ್ಲಿ 36,617 ಪ್ರಕರಣಗಳು ದಾಖಲಾಗಿವೆ. ಬ್ರೆಜಿಲ್’ನಲ್ಲಿ 54,771 ಹೊಸ ಕೇಸ್ ದಾಖಲಾಗಿವೆ. ಭಾರತದಲ್ಲಿ ಒಂದೇ ದಿನ ಸುಮಾರು 15,400 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿವೆ.

ಈ ನಡುವೆ, ವಿವಿಧ ರಾಷ್ಟ್ರಗಳಲ್ಲಿ ಸುಮಾರು 470,700 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

Related posts