ರಾಜ್ಯದಲ್ಲಿ ಕೊರೋನಾಗೆ ಮತ್ತೊಬ್ಬ ಬಲಿ ; ಈತ ತಬ್ಲಿಘಿ ಜೊತೆ ಸಂಪರ್ಕ ಹೊಂದಿದ್ದ

ರಾಜ್ಯದಲ್ಲಿ ಮತ್ತೊಬ್ಬ ವ್ಯಕ್ತಿ ಕೊರೋನಾ ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ. ತಬ್ಲಿಘಿ ಜಮಾತ್’ನ ಸಭೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿ ಜೊತೆ ಈ ವ್ಯಕ್ತಿ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಬೆಂಗಳೂರು: ಕೊರೋನಾ ಸಾವಿನ ಧರಣಿ ಮುಂದುವರಿದಿದೆ. ಕಲುಬುರ್ಗಿಯಲ್ಲಿ ಸೋಮವಾರ ಮತ್ತೊಬ್ಬರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದು ಈ ಮಾರಣಾಂತಿಕ ವೈರಾಣು ಬಗ್ಗೆ ಭೀತಿ ಮತ್ತಷ್ಟು ಹೆಚ್ಚಾಗಿದೆ.

ಚೀನಾದಲ್ಲಿ ಸೃಷ್ಟಿಯಾಗಿದ್ದ ಕೊರೋನಾ ವೈರಸ್ ರಾಜ್ಯಕ್ಕೆ ಕಾಲಿಟ್ಟ ನಂತರ ಮೊದಲ ಬಳಿ ಪಡೆದದ್ದು ಕೂಡಾ ಕಲಬುರ್ಗಿಯಲ್ಲೆ. ಇದೀಗ 55 ವರ್ಷದ ವ್ಯಕ್ತಿಯೊಬ್ಬರು ಅದೇ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದು, ಈ ಮೂಲಕ ಕಲಬುರ್ಗಿ ಜಿಲ್ಲೆಯೊಂದರಲ್ಲೇ ಕೊರೋನಾ ಸೋಂಕಿನಿಂದ ಬಲಿಯಾದವರ ಸಂಖ್ಯೆ 3ಕ್ಕೆ ಏರಿದೆ. ಅಷ್ಟೇ ಅಲ್ಲ ರಾಜ್ಯದಲ್ಲಿ ಈ ಸಂಖ್ಯೆ 7 ಕ್ಕೆ ಏರಿದಂತಾಗಿದೆ. .

ಏಪ್ರಿಲ್ 10ರಂದು ಈ ವ್ಯಕ್ತಿ ಕೊರೋನಾ ಶಂಕಿತರಾಗಿ ಕಲಬುರ್ಗಿಯ ಇಎಸ್’ಐಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ಸೋಂಕು ದೃಢಪಟ್ಟ ನಂತರ ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.  ದೆಹಲಿಯ ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿ ಜೊತೆ ಈ ವ್ಯಕ್ತಿ ಸಂಪರ್ಕ ಹೊಂದಿದ್ದರೆನ್ನಲಾಗಿದೆ.

ಇದನ್ನೂ ಓದಿ.. ಕೊರೋನಾ ಕೇಸ್ ಹೆಚ್ಚಳದ ಹಿಂದಿನ ನಿಗೂಢತೆ ಗೊತ್ತಾ..? 

Related posts