ರಾತ್ರಿ ಬೆಳಗಾಗುವಷ್ಟರಲ್ಲಿ ಕಹಿ ಸುದ್ದಿ; ಬೆಂಗಳೂರಲ್ಲಿ ಸಾವಿನ ಸರಣಿ

ಮಹಾಮಾರಿ ವೈರಾಣು ರಾಜ್ಯದಲ್ಲಿ ಮತ್ತಷ್ಟು ಜನರನ್ನು ಬಲಿತೆಗೆದುಕೊಂಡಿದೆ. ಇದೀಗ ಕೊರೋನಾ ಸೋಂಕಿನಿಂದ ವಿಧಿವಶರಾದವರ ಸಂಖ್ಯೆ 8ಕ್ಕೆ ಏರಿದೆ. ಕೊರೋನಾ ವಿಚಾರದಲ್ಲಿ ನಾವೆಷ್ಟು ಸೇಫ್ ಎಂಬ ಪ್ರಶ್ನೆ ಮೂಡಿದೆ.

ಬೆಂಗಳೂರು: ಕೊರೋನಾ ಮಹಾಮಾರಿ ವೈರಾಣು ಮರಣ ಮೃದಂಗ ಭಾರಿಸುತ್ತಲೇ ಇವೆ. ಜಗತ್ತಿನಾದ್ಯಂತ ಸಾವಿನ ಸರಣಿಯನ್ನು ಮುಂದುವರಿಸಿರುವ ಯಮಧೂತ ಕೋವಿಡ್-19 ಕರ್ನಾಟಕದಲ್ಲೂ ಭೀತಿಯ ಅಲೆ ಸೃಷ್ಟಿಸಿದೆ. ರಾತ್ರಿ ಬೆಳಗಾಗುವಷ್ಟರಲ್ಲೇ ಮರಣ ವಾರ್ತೆಯನ್ನು ನೀಡುತ್ತಿದೆ.

ಸೋಮವಾರ ಸಂಜೆಯ ಹೊತ್ತಿಗೆ ಕಲಬುರ್ಗಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಸುದ್ದಿ ಆಘಾತವನ್ನೇ ಉಂಟು ಮಾಡಿತ್ತು. ಅದಾದ ಬಳಿಕ ರಾಜಧಾನಿಯ ಸೆರಗಿನಲ್ಲೇ ಮತ್ತೊಬ್ಬ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ರಾಜೀವಗಾಂಧಿ ಆಸ್ಪತ್ರೆಯಲ್ಲಿ 65 ವರ್ಷ ಪ್ರಾಯದ ವೃದ್ಧರೊಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿದೆ.

ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿನ ಕಾರಣಕ್ಕಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಎದೆರೋಗದಿಂದಲೂ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಈ ಕುರಿತಂತೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಸೋಮವಾರ ಒಂದೇ ದಿನ ಇಬ್ಬರು ಈ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಸಂಜೆ ಕಲಬುರ್ಗಿಯ 55 ವರ್ಷ ಹರೆಯದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಇದು ಕಲಬುರ್ಗಿ ಜಿಲ್ಲೆಯೊಂದರಲ್ಲೇ 3ನೇ ಸಾವು ಪ್ರಕರಣ.

ಇದನ್ನೂ ಓದಿ.. ರಾಜ್ಯದಲ್ಲಿ ಕೊರೋನಾಗೆ ಮತ್ತೊಬ್ಬ ಬಲಿ; ಈತ ತಬ್ಲಿಘಿ ಜೊತೆ ಸಂಪರ್ಕ ಹೊಂದಿದ್ದ

 

Related posts