ಬೆಂಗಳೂರು; ಕೊರೋನಾ ರೌದ್ರಾವತಾರಕ್ಕೆ ಬ್ರೇಕ್ ಬೀಳುತ್ತಿಲ್ಲ. ರಾಜ್ಯದಲ್ಲಿ ಮಹಾಮಾರಿ ಕೊರೋನಾ ಮತ್ತೆ ಮೂವರನ್ನು ಬಲಿತೆಗೆದುಕೊಂಡಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಮಧ್ಯಾಹ್ನ ಹೊರಡಿಸಿದ ಹೆಲ್ತ್ ಬುಲೆಟಿನ್ ಕರ್ನಾಟಕದಲ್ಲಿ ಮತ್ತೆ ಮೂವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಮೂಲಕ ರಾಜ್ಯದಲ್ಲಿ ಈ ವೈರಾಣು ಹಾವಳಿಗೆ ಬಲಿಯಾದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ.. ಸಿಲಿಕಾನ್ ಸಿಟಿ ರೆಡ್ ಝೋನ್’ಗಳಲ್ಲಿ ಲಾಕ್’ಡೌನ್ ಮತ್ತಷ್ಟು ಬಿಗಿ
ಶುಕ್ರವಾರ ಸಂಜೆ ನಂತರ ಶನಿವಾರ ಮಧ್ಯಾಹ್ನದವರೆಗಿನ ಬೆಳವಣಿಗೆಯನ್ನಾಧರಿಸಿ ಮಾಹಿತಿ ಒದಗಿಸಿರುವ ಆರೋಗ್ಯ ಇಲಾಖೆ, ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿರುವ ಸಂಗತಿಯತ್ತ ಬೊಟ್ಟು ಮಾಡಿದೆ. ಮತ್ತೆ 9 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 598ಕ್ಕೆ ತಲುಪಿದೆ ಎಂದು ಹೆಲ್ತ್ ಬುಲೆಟಿನ್’ನಲ್ಲಿ ಹೇಳಲಾಗಿದೆ.
ಸೋಂಕಿಗೆ ಬಲಿಯಾದವರು:
- ದಾವಣಗೆರೆಯ 69 ವರ್ಷದ ವ್ಯಕ್ತಿ,
- ಬೀದರ್ ನ 82 ವರ್ಷದ ವ್ಯಕ್ತಿ
- ಬೆಂಗಳೂರು ಗ್ರಾಮಂತರದ 63 ವರ್ಷದ ವ್ಯಕ್ತಿ
ಹೊಸದಾಗಿ ಸೋಂಕಿಗೊಳಗಾದವರು:
- ವಿಜಯಪುರದಲ್ಲಿ ಇಬ್ಬರಿಗೆ ಸೋಂಕು
- ತುಮಕೂರಿನಲ್ಲಿ ಇಬ್ಬರಿಗೆ ಸೋಂಕು
- ಬೀದರ್’ನಲ್ಲಿ ಒಬ್ಬರಿಗೆ ಸೋಂಕು
- ಚಿಕ್ಕಬಳ್ಳಾಪುರದಲ್ಲಿ ಒಬ್ಬರಿಗೆ ಸೋಂಕು
- ಬೆಂಗಳೂರು ನಗರದಲ್ಲಿ ಒಬ್ಬರಿಗೆ ಸೋಂಕು
- ಬೆಳಗಾವಿ ಯಲ್ಲಿ ಒಬ್ಬರಿಗೆ ಸೋಂಕು
- ಜಮಖಂಡಿಯಲ್ಲಿ (ಬಾಗಲಕೋಟೆ) ಒಬ್ಬರಿಗೆ ಸೋಂಕು
ಈ ನಡುವೆ, ರಾಜ್ಯದಲ್ಲಿ ಒಟ್ಟು 598 ಮಂದಿ ಸೋಂಕಿತರ ಪೈಕಿ 255 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ.