ಅಫಾನ್ ಚಂಡಮಾರುತದ ಸುಳಿಯಲ್ಲಿ ಪೂರ್ವ ಕರಾವಳಿ; ಸ್ಮಶಾನವಾದ ದೀದಿ ನಾಡು

ಕೋಲ್ಕತಾ: ಅಫಾನ್ ಚಂಡಮಾರುತದ ಹೊಡೆತಕ್ಕೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳು ತತ್ತರಿಸಿವೆ. ಗಂಟೆಗೆ 190 ಕಿಮೀ ವೇಗದ ಚಂಡಮಾರುತದ ತೀವ್ರತೆಯಿಂದಾಗಿ ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿದೆ.

ಪಶ್ಚಿಮ ಬಂಗಾಲವಂತೂ ಈ ಚಂಡಮಾರುತದ ಹೊಡೆತದಿಂದಾಗಿ ಸಂಪೂರ್ಣವಾಗಿ ನಲುಗಿಹೋಗಿದ್ದು ಮತ್ತೆ ಚೇತರಿಸಿಕೊಳ್ಳಲು ಸುದೀರ್ಘ ಸಮಯವೇ ಬೇಕಾಗಬಹುದು. ಪಶ್ಚಿಮ ಬಂಗಾಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 72 ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 15 ಮಂದಿ ಕೋಲ್ಕತ್ತಾದಲ್ಲಿಯೇ ಮೃತಪಟ್ಟಿದ್ದಾರೆ.
ಅಫಾನ್ ನಿಂದ ಸುಂದರಬನ್ ಪ್ರದೇಶ ಮತ್ತು ದಕ್ಷಿಣ ಬಂಗಾಳದ ಆರು ಜಿಲ್ಲೆಗಳು ತತ್ತರಿಸಿವೆ. ಹಲವು ಜಿಲ್ಲೆಗಳು ಜಲಾವೃತವಾಗಿದ್ದು ಕೋಲ್ಕತಾ ವಿಮಾನ ನಿಲ್ದಾಣ ಕೆರೆಯಂತಾಗಿದೆ. ಈ ಕಾರಣದಿಂದಾಗಿ ನಿಲ್ದಾಣದಲ್ಲಿನ ಚಟುವಟಿಕೆ ಸ್ತಬ್ಧವಾಗಿದೆ.

ಒಡಿಶಾದಲ್ಲಿ ರಾಜ್ಯವೂ ಅಫಾನ್ ಚಂಡಮಾರುತದ ಹೊಡೆತದಿಂದ ತತ್ತರಿಸಿದೆ. ಚಂಡಮಾರುತದ ಮುನ್ಸೂಚನೆ ಲಭ್ಯವಾದ ಸಂದರ್ಭದಲ್ಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಸುಮಾರು 6.58 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು.

ಈ ನಡುವೆ, ಅಂಪನ್ ಚಂಡಮಾರುತದ ಸುಳಿಯಲ್ಲಿ ಸಿಲುಕಿರುವ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಕೊಲ್ಕತ್ತಾಕ್ಕೆ ತೆರಳಿ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ನಂತರ ಧಾನಿ ಮೋದಿ ಒರಿಸ್ಸಾಗೆ ತೆರಳಿ ಅಲ್ಲಿನ ಸಿಎಂ ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಜೊತೆ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಇದನ್ನೂ ಓದಿ.. ಕೊರೋನಾ ಅಬ್ಬರಕ್ಕೆ ಮಹಾರಾಷ್ಟ್ರ ತತ್ತರ; ಸೋಂಕಿತರ ಸಂಖ್ಯೆ 40,000 ಕ್ಕೂ ಹೆಚ್ಚು

 

Related posts