ಮುಂಬೈ: ದೇಶಾದ್ಯಂತ ಕೊರೋನಾ ಮರಣ ಮೃದಂಗ ಭಾರಿಸುತ್ತಿದ್ದು ಈ ಅಗೋಚರ ವೈರಾಣು ವಿನಿಂದಾಗಿ ವಿವಿಧ ರಾಜ್ಯಗಳು ತತ್ತರಿಸಿವೆ. ಅದರಲ್ಲೂ ಮಹಾರಾಷ್ಟ್ರ ರಾಜ್ಯವಂತೂ ಸ್ಮಶಾನ ಮೌನ ಆವರಿಸಿದಂತಿದೆ.
ಗುರುವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 1,382 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಜೊತೆಗೆ ಸೋಂಕು ಕಾಣಿಸಿಕೊಂಡು ಮಹಾರಾಷ್ಟ್ರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4೦ಕ್ಕೂ ಒಂದೇ ದಿನ ಬಲಿಯಾಗಿದ್ದಾರೆ.
ಆರೋಗ್ಯ ಇಲಾಖೆ ಪ್ರಕಾರ ಮಹಾರಾಷ್ಟ್ರದಲ್ಲಿ 41,000 ಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ. ಅದರಲ್ಲೂ ಮುಂಬೈ ನಗರರಲ್ಲಿಯೇ ಬರೋಬ್ಬರಿ 25,000 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.