ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ಗಿಫ್ಟ್

ಸ್ಯಾಂಡಲ್ ವುಡ್ ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಎಂದಿಗೂ ಮರೆಯಲಾಗದಂತಹ ಗಿಫ್ಟ್ ಚಾಲೆಂಜಿಂಗ್ ಸ್ಟಾರ್ ಕಡೆಯಿಂದ ಸಿಕ್ಕಿದೆ. ದಮಯಂತಿ ಚಿತ್ರದ ಮೂಲಕ ಕಮ್ ಬ್ಯಾಕ್ ಆಗಿರುವ ರಾಧಿಕಾ ಮೇಡಂಗೆ, ದರ್ಶನ್ ಅದ್ದೂರಿ ಸ್ವಾಗತ ನೀಡಿದ್ದಾರೆ.

ದಮಯಂತಿ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಲಾಂಚ್ ಮಾಡಿದ ದರ್ಶನ್,  ರಾಧಿಕಾರನ್ನು ಹಾಡಿ ಹೊಗಳಿದರು. ರಾಧಿಕಾ ತಮಗಿಂತ ಇಂಡಸ್ಟ್ರೀಯಲ್ಲಿ ಸೀನಿಯರ್ ಎಂದು ಉನ್ನತ ಗೌರವ ಪದಗಳಿಂದ ಕೊಂಡಾಡಿದರು. ರಾಧಿಕಾ ಮೊದಲಿಗೆ ಅಭಿನಯ ಮಾಡಿದ್ದು ನೀಲ ಮೆಘ ಶ್ಯಾಮ ಸಿನಿಮಾ ಮೂಲಕ. ಆ ಚಿತ್ರ ರಿಲೀಸ್ ಆದಾಗ ನಾನಿನ್ನೂ ಇಂಡಷ್ಟ್ರಿಗೆ ಬಂದಿರಲಿಲ್ಲ. ಹಾಗಾಗಿ ನಾನಿನ್ನು ಜ್ಯೂನಿಯರ್ ಎಂದು ದರ್ಶನ್ ಹೇಳಿದಾಗ ಅಲ್ಲಿದ್ದ ಸಿನಿರಸಿಕರೆಲ್ಲರೂ ಮೂಕವೊಸ್ಮಿತರಾಗಿ ಈ ಪದಪುಂಜಗಳನ್ನು ಆಲಿಸುತ್ತಿದ್ದರು.

ರಾಧಿಕಾರ ಮೊದಲ ಸಿನಿಮಾ ಬಗೆಗಿನ ನೆನಪುಗಳನ್ನು ಬಿಚ್ಚಿಟ್ಟ ದರ್ಶನ್,  ರಾಧಿಕಾ ಮತ್ತು ನನ್ನ ಇಬ್ಬರ ಮೊದಲ ಸಿನಿಮಾದಲ್ಲಿ ಒಂದು ಸಿಮಿಲ್ಯಾರಿಟಿ ಇದೆ ಅನ್ನೋ ಸಿಕ್ರೇಟ್ ಬಿಚ್ಚಿಟ್ಟರು.  ನನ್ನ ಮೆಜೆಸ್ಟಿಕ್ ಚಿತ್ರದಲ್ಲಿ ನನ್ನನ್ನ ಕೊನೆಯಲ್ಲಿ ನಾಲ್ಕು ಜನ ಹೊತ್ತುಕೊಂಡು ಹೋಗುತ್ತಾರೆ… ರಾಧಿಕಾ ಅಭಿನಯದ ನೀಲ ಮೇಘ ಶ್ಯಾಮ ಚಿತ್ರದಲ್ಲಿ ಇವ್ರನ್ನ ನಾಲ್ಕು ಜನ ಹೊತ್ತುಕೊಂಡು ಬರ್ತಾರೆ ಎಂದು ತಮ್ನದೇ ಶೈಲಿಯಲ್ಲಿ ಸಮೀಕರಣ ಮಾಡಿದರು ದರ್ಶನ್.

ದಮಯಂತಿ ಟ್ರೇಲರ್ ಬಗ್ಗೆ ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸಿದ ದರ್ಶನ್, ಈ ರೀತಿ ಪಾತ್ರ ಮಾಡೋದಕ್ಕೆ ಗಟ್ಸ್ ಬೇಕು… ಅದಷ್ಟೇ ಅಲ್ಲದೆ ಡೆಡಿಕೇಷನ್ ಬೇಕು. ಅದು ಎಷ್ಟರ ಮಟ್ಟಿಗೆ ಇದೆ ಅನ್ನೋದು ಸ್ಕ್ರೀನ್ ಮೇಲೆ ಕಾಣುತ್ತಿದೆ ಎನ್ನುತ್ತಾ ರಾಧಿಕಾ ಅಭಿನಯವನ್ನು ದರ್ಶನ್ ಕೊಂಡಾಡಿದರು.

ಈಗಾಗಲೇ ದರ್ಶನ್ ಸಿನಿಮಾ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದ ರಾಧಿಕಾ, ಸದ್ಯ ಈ  ಬಗ್ಗೆ ಮಾತುಕತೆ ನಡೆಯುತ್ತಿದೆ. ಆದಷ್ಟುಬೇಗ ಆ ಬಗ್ಗೆ ಸಿಹಿ ಸುದ್ದಿ ನೀಡುವೆ ಎಂದಿದ್ದಾರೆ. ದರ್ಶನ್ ಜೊತೆಗೆ ಈ ಬಗ್ಗೆಯೂ ಮಾತನಾಡಿದ್ದಾರಂತೆ ಸ್ವೀಟಿ…

Uncategorized

Related posts