ಚರ್ಮ ಕಾಂತಿ ಹೆಚ್ಚಿಸಬೇಕೆ ; ಫೇಶಿಯಲ್ ಬೇಡ ; ಇದನ್ನು ಅನುಸರಿಸಿ

ವಯಸ್ಸನ್ನು ಮರೆಮಾಚುವುದು ಅನಿವಾರ್ಯ. ಈಗಿನ ಪರಿಸರದಲ್ಲಿ ಎಲ್ಲರೂ ವಯಸ್ಸಿಗಿಂತ ಮಿಗಿಲಾಗಿ ವಯೋ ವಿಭಿನ್ನವಾಗಿ ಕಾಣುತ್ತಾರೆ.  ಅದರಲ್ಲೂ ಸ್ತ್ರೀಯರು ಸೌಂದರ್ಯ ಕಾಪಾಡಲು ಏನೆಲ್ಲಾ ಕಸರತ್ತು ಮಾಡುತ್ತಿರುತ್ತಾರೆ. ಅದಕ್ಕೆ  ಇಲ್ಲಿದೆ  ಸುಲಭ ಸೂತ್ರ.

30 ವರ್ಷ ಸುತ್ತ ಮುತ್ತಲ ವಯಸ್ಸಿನಲ್ಲೇ ನಿಮ್ಮ ಚರ್ಮ ಸುಕ್ಕು ಬೀಳಲು ಪ್ರಾರಂಭಿಸಿದ್ದರೆ ನಿಯಮಿತವಾಗಿ ದಾಳಿಂಬೆ ಹಣ್ಣನ್ನು ತಿನ್ನಿರಿ . ತಾರುಣ್ಯ ಕಾಪಾಡಲು ದಾಳಿಂಬೆ ಉತ್ತಮ ಮದ್ದು ಎಂಬುದು ಇದೀಗ ಸಂಶೋಧನೆಯಿಂದ ಗೊತ್ತಾಗಿದೆ. ಅದರಲ್ಲಿನ ರಾಸಾಯನಿಕ ಅಂಶ  ಮನುಷ್ಯ ರನ್ನು ತಾರುಣ್ಯಭರಿತರನ್ನಾಗಿ ಮಾಡುತ್ತದೆ.

ದೇಹದಲ್ಲಿರುವ ಯುರೋಲಿಥಿನ್ ಎ ಎಂಬ ಅಣು, ಹಾನಿಗೀಡಾದ ಕೋಶಗಳನ್ನು ಹೋಗಲಾಡಿಸಿ ಹೊಸ ಕೋಶಗಳು ಉತ್ಪತ್ತಿಯಾಗಲು ಸಹಕರಿಸುತ್ತವೆ. ಇದು ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲ ಆಯುಷ್ಯ ಹೆಚ್ಚಿಸುವ ಅಮೃತವೂ ಹೌದು ಎನ್ನುವುದು ಸ್ವಿರ್ಜರ್ಲೆಂಡಿನ ಸಂಶೋಧಕರ ಅಭಿಪ್ರಾಯ. ಕೇವಲ ಸ್ತ್ರೀಯರಿಗಷ್ಟೇ ಅಲ್ಲ ಪುರುಷರ ಸೌಂದರ್ಯ ವೃದ್ಧಿಗೂ ದಾಳಿಂಬೆಯಲ್ಲಿದೆ ಸೂತ್ರ.

Uncategorized

Related posts