ಜಾರಕಿಹೊಳಿ ಟೀಮ್’ಗಿಲ್ಲ ಉಸ್ತುವಾರಿ; ಬಿ.ಎಸ್.ವೈ ನಡೆ ಬಗ್ಗೆ ಅಚ್ಚರಿ..

ಜಿಲ್ಲಾ ಉಸ್ತುವಾರಿಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣರಾದವರ ಹೆಸರೇ ಈ ಹೊಸ ಪಟ್ಟಿಯಲ್ಲಿ ಇಲ್ಲದೆ ಇರುವುದೇ ಅಚ್ಚರಿಯ ಸಂಗತಿ.

ಬೆಂಗಳೂರು: ರಾಜ್ಯದಲ್ಲಿ ಆವರಿಸಿಕೊಂಡಿರುವ ಕೊರೋನಾ ಭೀತಿ ನಿವಾರಿಸಲು ಒಂದೆಡೆ ಪ್ರಯತ್ನದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪುಟ ಸರ್ಕಸ್ ನಡೆಸಬೇಕಾದ ಅನಿವಾರ್ಯತೆ ಇನ್ನೊಂದೆಡೆ. ಈ ನಡುವೆಯೂ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಸಿಎಂ ಪರಿಷ್ಕರಿಸಿದ್ದಾರೆ.

ಕಳೆದ 2019ರ ಸೆಪ್ಟಂಬರ್‌ 16ರಂದು ಹೊರಡಿಸಿದ್ದ ಆದೇಶವನ್ನು ಪರಿಷ್ಕರಿಸಿರುವ ಮುಖ್ಯಮಂತ್ರಿ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ನೇಮಿಸಿ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಮತ್ತು ಅವರ ಆಪ್ತ ಸಚಿವರಿಗೆ ಉಸ್ತುವಾರಿ ವಹಿಸದೆ ಇರುವ ಬಿ.ಎಸ್.ವೈ ನಿರ್ಧಾರ ಅಚ್ಚರಿಗೊ ಕಾರಣಾವಾಗಿದೆ. ಅಷ್ಟೇ ಅಲ್ಲ ಬೆಳಗಾವಿಯನ್ನು ಅಷ್ಟೊಂದು ಸಚಿವರು ಪ್ರತಿನಿಧಿಸುತ್ತಿದ್ದರೂ ಹೊರ ಜಿಲ್ಲೆಯವರಿಗೆ ಕುಂದಾ ನಗರಿಯ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿ ತೀರ್ಮಾನವೂ ಕುತೂಹಲಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ.. ರಾಜ್ಯದ ದೊರೆಯ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ.. 

ಜಿಲ್ಲಾ ಉಸ್ತುವಾರಿ ಸಚಿವರ ಹೊಸ ಪಟ್ಟಿ:

  • ಬಿ.ಎಸ್. ಯಡಿಯೂರಪ್ಪ (ಮುಖ್ಯಮಂತ್ರಿ) – ಬೆಂಗಳೂರು ನಗರ
  • ಡಾ.ಸಿ.ಎನ್‌ ಅಶ್ವಥ್‌ ನಾರಯಣ (ಉಪಮುಖ್ಯಮಂತ್ರಿ) – ರಾಮನಗರ
  • ಸಚಿವ ಲಕ್ಷ್ಮಣ ಸವದಿ (ಉಪಮುಖ್ಯಮಂತ್ರಿ) – ರಾಯಚೂರು
  • ಗೋವಿಂದ ಕಾರಜೋಳ (ಉಪಮುಖ್ಯಮಂತ್ರಿ) – ಬಾಗಲಕೋಟೆ ಹಾಗೂ ಕಲಬುರಗಿ
  • ಜಗದೀಶ್‌ ಶೆಟ್ಟರ್ (ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ) – ಬೆಳಗಾವಿ ಮತ್ತು ಧಾರವಾಡ
  • ಕೆ.ಎಸ್‌.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ) – ಶಿವಮೊಗ್ಗ
  • ಬಸವರಾಜ ಬೊಮ್ಮಾಯಿ (ಗೃಹ ಸಚಿವ) – ಹಾವೇರಿ ಮತ್ತು ಉಡುಪಿ
  • ಆರ್‌.ಅಶೋಕ್‌ (ಕಂದಾಯ ಸಚಿವ) ಬೆಂಗಳೂರು ಗ್ರಾಮಾಂತರ
  • ಬಿ. ಶ್ರೀರಾಮುಲು (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ) -ಚಿತ್ರದುರ್ಗ
  • ಎಸ್‌. ಸುರೇಶ್‌ ಕುಮಾರ್ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ) -ಚಾಮರಾಜನಗರ
  • ವಿ. ಸೋಮಣ್ಣ (ವಸತಿ ಸಚಿವ) – ಕೊಡಗು
  • ಸಿ.ಟಿ.ರವಿ (ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡೆ ಸಚಿವ) – ಚಿಕ್ಕಮಗಳೂರು
  • ಕೋಟಾ ಶ್ರೀನಿವಾಸ ಪೂಜಾರಿ (ಮುಜುರಾಯಿ, ಮೀನುಗಾರಿಕೆ, ಬಂದರು ಸಚಿವ)- ದಕ್ಷಿಣಕನ್ನಡ
  • ಜೆ.ಸಿ.ಮಾದುಸ್ವಾಮಿ ( ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ) -ತುಮಕೂರು
  • ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ (ಗಣಿ ಮತ್ತು ಭೂ ವಿಜ್ಞಾನ ಸಚಿವ) – ಗದಗ
  • ಎಚ್‌.ನಾಗೇಶ್‌ (ಅಬಕಾರಿ ಸಚಿವ) – ಕೋಲಾರ
  • ಪ್ರಭು ಚವ್ಹಾಣ್‌ (ಪಶುಸಂಗೋಪನೆ ಸಚಿವ) -ಬೀದರ್‌ ಮತ್ತು ಯಾದಗಿರಿ
  • ಶಶಿಕಲಾ ಜೊಲ್ಲೆ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು) – ವಿಜಯಪುರ
  • ಶಿವರಾಮ್ ಹೆಬ್ಬಾರ್ (ಕಾರ್ಮಿಕ ಮತ್ತು ಸಕ್ಕರೆ ಸಚಿವ)- ಉತ್ತರ ಕನ್ನಡ
  • ಎಸ್‌.ಟಿ.ಸೋಮಶೇಖರ್‌( ಸಹಕಾರ ಸಚಿವ) – ಮೈಸೂರು
  • ಡಾ.ಕೆ.ಸುಧಾಕರ್ (ವೈದ್ಯಕೀಯ ಶಿಕ್ಷಣ ಸಚಿವ) – ಚಿಕ್ಕಬಳ್ಳಾಪುರ
  • ಕೆ.ಸಿ.ನಾರಯಣಗೌಡ (ಪೌರಾಡಳಿ, ತೋಟಗಾರಿಕೆ ಸಚಿವ) – ಮಂಡ್ಯ
  • ಆನಂದ್‌ ಸಿಂಗ್ (ಅರಣ್ಯ ಸಚಿವ) – ಬಳ್ಳಾರಿ  

 

ಇದನ್ನೂ ಓದಿ.. ಭಾರತ ಈಗ ವಿಶ್ವಗುರು..!! ದುಂಬಾಲು ಬಿದ್ದ ಬಲಾಢ್ಯ ರಾಷ್ಟ್ರಗಳು 

 

ಇದನ್ನೂ ಓದಿ.. ಮೋದಿ ಹಾದಿಯಲ್ಲಿ ಸಿದ್ದು ಆಪ್ತ ಕೈ ನಾಯಕ ಎಂ.ಬಿ.ಪಾಟೀಲ್; ಸಾಮೂಹಿಕ ಕೈಂಕರ್ಯಕ್ಕೆ ಕರೆ. 

Related posts