ಬೆಂಗಳೂರಿಗೂ ಬಂತು ಕೊರೋನಾ ಸೋಂಕು ನಿವಾರಕ ಸುರಂಗ

ಅಗೋಚರ ಕೊರೋನಾ ವೈರಸ್ ಬಗ್ಗೆಯೇ ಈಗ ಜನರಿಗೆ ಚಿಂತೆ. ಈ ಭೀತಿಯ ಅಲೆಯಿಂದ ಪಾರಾಗಲು ಬಗೆಬಗೆಯ ಕಸರತ್ತು ಸಾಗಿದೆ. ಬೆಂಗಳೂರಿನಲ್ಲಿರುವ ಸೋಂಕು ನಿವಾರಕ ಸುರಂಗವೂ ಇವುಗಳಲ್ಲೊಂದು.

ಬೆಂಗಳೂರು: ಜಗತ್ತಿನಾದ್ಯಂತ ಭೀತಿ ಸೃಷ್ಟಿಸಿರುವ ಕೊರೋನಾ ಸೋಂಕು ಕರ್ನಾಟಕದಲ್ಲೂ ಮರಣ ಮೃದಂಗ ಭಾರಿಸುತ್ತಿದೆ. ಈ ವೈರಾಣು ಹರಡುವುದನ್ನು ತಡೆಯಲು ವ್ಯಾಪಕ ಕ್ರಮಗಳನ್ನು ಕೈಗಿಳ್ಳಲಾಗಿದೆ. ಪ್ರಸ್ತುತ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೆಲವೊಂದು ಅಗತ್ಯ ಕೇಂದ್ರಗಳು ಕ್ರಿಯಾಶೀಲವಾಗಿರಬೇಕಾಗುತ್ತದೆ. ಅಂತಹಾ ಕೇಂದ್ರಗಳಲ್ಲಿ ಸೋಂಕು ತಡೆಗೆ ಆಧುನಿಕ ಕ್ರಮ ಅನುಸರಿಸಲೇಬೇಕು.

ಈ ಪೈಕಿ ಬೆಂಗಳೂರಿನ ಯಶವಂತಪುರದ ಎಪಿಎಂಸಿ ಯಾರ್ಡ್ ಬಳಿ ನಿರ್ಮಿಸಲಾಗಿರುವ ಸೋಂಕು ನಿವಾರಕ ಸುರಂಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಮಾರುಕಟ್ಟೆ ಪ್ರವೇಶಿಸುವ ಮಂದಿಗೆ ವೈರಾಣು ಹರಡದಂತೆ ತಡೆಯುವ ವ್ಯವಸ್ಥೆ ಇದಾಗಿದೆ. ಈ ಔಷಧಿಯುಕ್ತ ಸುರಂಗ ಮೂಲಕ ತೆರಳುವ ಮಂದಿ ಪರಿಪೂರ್ಣವಾಗಿ ರಕ್ಷಣೆಗೊಳಪಡುತ್ತಾರಂತೆ.

ಯಶವಂತಪುರದ ಎಪಿಎಂಸಿ ಯಾರ್ಡ್ ಬಳಿ ಸರ್ಕಾರೇತರ ಸಂಸ್ಥೆ ಸದಾಸ್ಮಿತ ಫೌಂಡೇಷನ್ ನಿರ್ಮಿಸಿಕೊಟ್ಟಿರುವ ಈ ಸೋಂಕು ನಿವಾರಕ ಸುರಂಗವನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶ್ರೀ ಕೆ ಗೋಪಾಲಯ್ಯ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಚಿವ ಗೋಪಾಲಯ್ಯ, ವಿವಿಧ ರಾಜ್ಯಗಳಿಂದ ರೈತರು, ಲಾರಿ ಚಾಲಕರು ಸೇರಿದಂತೆ ಅನೇಕರು ಯಾರ್ಡ್‌ನಲ್ಲಿ ಓಡಾಡುತ್ತಿರುತ್ತಾರೆ. ಹಾಗಾಗಿ ಇಲ್ಲಿ ಕೊರೋನ ವೈರಸ್ ಹರಡುವುದನ್ನು ತಡೆಯಲು ಸೋಂಕುನಿವಾರಕ ಸುರಂಗವನ್ನ ಸ್ಥಾಪಿಸಲಾಗಿದೆ ಎಂದರು.
ಕೆಲ ದಿನಗಳ ಹಿಂದೆ ಹುಬ್ಬಳ್ಳಿ ಧಾರವಾಡ ಎಪಿಎಂಸಿ ಕೇಂದ್ರದಲ್ಲಿ ಈ ಸೋಂಕು ನಿವಾರಣಾ ಸುರಂಗವನ್ನು ಸ್ಥಾಪಿಸಲಾಗಿತ್ತು. ಇದೀಗ ಬೆಂಗಳೂರಿನಲ್ಲೂ ಈ ಸುರಂಗ ನಿರ್ಮಿಸಲಾಗಿದ್ದು ಸೋಂಕು ತಡೆ ಕಾರ್ಯದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಇದನ್ನೂ ಓದಿ..  ಬಂತು ಕೊರೋನಾ ಸೋಂಕು ನಿವಾರಕ ಸುರಂಗ

Related posts