ಏಕಾಏಕಿ ಕಿಸ್ಸಿಂಗ್ ನಿರ್ಬಂಧ ; ಮಮಕಾರಕ್ಕೆ ಅಂಕುಶ

ಬೀಜಿಂಗ್: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್‍ಗೆ ಈ ವರೆಗೂ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆನ್ನಲಾಗಿದೆ. 30 ಸಾವಿರಕ್ಕೂ ಹೆಚ್ಚು ಮಂದಿಗೆ ಈ ಸೋಂಕು ತಗುಲಿದ್ದು ಮಾರುಕಟ್ಟೆ ವ್ಯವಸ್ಥೆ ಕೂಡಾ ಏರುಪೇರಾಗಿದೆ.

ಚೀನಾದ ವುಹಾನ್‍ನಿಂದ ವ್ಯಾಪಿಸಿರುವ ಕೊರೊನಾ ವೈರಸ್ ಇಡೀ ಜಗತ್ತನ್ನೇ ವ್ಯಾಪಿಸುತ್ತಿದೆ. ಚೀನಾದಲ್ಲಿ ಕರೋನ ವೈರಸ್ ಮರಣ ಮೃದಂಗ ಬಾರಿಸುತ್ತಲೇ ಇದ್ದು ಜನರನ್ನು ಮನೆಯಿಂದ ಹೊರಬಾರದಂತೆ ದಿಗ್ಬಂಧನ ವಿಧಿಸಿದ ಸ್ಥಿತಿ ನಿರ್ಮಾಣವಾಗಿದೆ.

ಇದೀಗ ಕೊರೊನಾ ವೈರಸ್ ಕಿಸ್ ಪ್ರಕ್ರಿಯೆಗೂ ಲಗಾಮು ಹಾಕಿದೆ.  ವೈರಸ್ ಭೀತಿ ಹಿನ್ನೆಲೆಯಲ್ಲಿ ಯಾರೂ ಕೂಡಾ ಕಿಸ್ ಕೊಟ್ಟು ಪರಸ್ಪರ ಮುದ್ದಿಸೋಲ್ಲ. ಮಮತೆಗೂ ಈ ವೈರಸ್ ಅಂಕುಶ ಹಾಕಿದೆ. ಅಷ್ಟೇ ಅಲ್ಲ ಇದು ಸಿನಿಮಾ ಹಾಗೂ ಕಿರುತೆರೆ ಧಾರಾವಾಹಿಗಳ ಪಾಲಿಗೂ ಸಂದಿಗ್ಧತೆ ಎದುರಾಗುವಂತೆ ಮಾಡಿದೆ.

ತೈವಾನ್ ಹಾಗೂ ಚೀನಾದ ಬಹುತೇಕ ಕಡೆ ಸಿನಿಮಾ, ಸೀರಿಯಲ್ ಚಿತ್ರೀಕರಣವನ್ನು ಸ್ಥಗಿತಗೊಳಿಸಿದೆ. ಇದೆ ವೇಳೆ ತೈವಾನ್‍ನಲ್ಲಿ ಸರ್ಕಾರ ಒಂದು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದೆ. ಧಾರಾವಾಹಿ ಹಾಗೂ ಸಿನಿಮಾ ನಿರ್ಮಾಣ ಸಂದರ್ಭಗಳಲ್ಲಿ ಕಿಸ್ಸಿಂಗ್ ದೃಶ್ಯಗಳನ್ನು ಮಾಡದಂತೆ ನಿರ್ದೇಶಕ, ನಿರ್ಮಾಪಕರಿಗೆ ಸೂಚನೆಗಳನ್ನು ಅಲ್ಲಿನ ಸರ್ಕಾರ ನೀಡಿದೆ.

Related posts