ಆಗ್ರಾ ಸಮೀಪ ಭೀಕರ ಅಪಘಾತ; 14 ಮಂದಿ ಸಾವು

ಫಿರೋಜಾಬಾದ್ : ಉತ್ತರ ಪ್ರದೇಶದ ಆಗ್ರಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಆಗ್ರಾ -ಲಕ್ನೋ ಹೆದ್ದಾರಿಯಲ್ಲಿ ಬಸ್’ಗೆ ಟ್ರಕ್ ಡಿಕ್ಕಿಯಾಗಿ ಈ ಭೀಕರ ಅಪಘಾತ ಸಂಭವಿಸಿದೆ.

ಟ್ರಕ್ ಕಂಟೈನರ್ ಡಿಕ್ಕಿಯಾದ ರಭಸಕ್ಕೆ ಬಸ್ ನಜ್ಜುಗುಜ್ಜಾಗಿದ್ದು ಅದರಲ್ಲಿದ್ದ 14  ಜನರು ದಾರುಣವಾಗಿ ಸಾವನ್ನಪ್ಪಿ, 31 ಜನರು ಗಂಭೀರ ಗಾಯಗೊಂಡಿದ್ದಾರೆ.

ಫಿರೋಜಾಬಾದ್ ಸಮೀಪ ಬುಧವಾರ ರಾತ್ರಿ 10 ಈ ದುರಂತ ಘಟಿಸಿದ್ದು, ನತದೃಷ್ಟ ಸಲೀಪರ್ ಬಸ್ ದೆಹಲಿಯಿಂದ ಮೊತಿರಿಗೆ ಹೋಗುತ್ತಿತ್ತೆನ್ನಲಾಗಿದೆ. ಗಾಯಾಳುಗಳನ್ನು ಇತವಾಹಹ್ ನಲ್ಲಿರುವ ಸೈಫೈ ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts