ಅಮಾನತು ಶಿಕ್ಷೆ ಇಲ್ಲ ಎಂದ KSRTC; ನೌಕರ ವೃಂದ ನಿರಾಳ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ ಜಾರಿಯಾದ ನಂತರ KSRTC ಸಿಬ್ಬಂದಿ ವರ್ಗಕ್ಕೆ ಅಮಾನತು ಗುಮ್ಮ ಕಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ವಿಚಾರ ಎಂದಿದೆ ಕೆಎಸ್ಸಾರ್ಟಿಸಿ..

ಈ ಕುರಿತಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ KSRTC, ಕೆಲವೊಂದು‌ ಮಾಧ್ಯಮಗಳಲ್ಲಿ – ಶಕ್ತಿ ಎಫೆಕ್ಟ್ – 300 ಕ್ಕೂ ಅಧಿಕ‌ ನಿರ್ವಾಹಕರ ಅಮಾನತು ಎಂಬುದಾಗಿ ಸುದ್ದಿ‌ ಪ್ರಸಾರವಾಗುತ್ತಿರುವುದು ಸತ್ಯಕ್ಕೆ ದೂರವಾದುದು ಎಂದು ಸ್ಪಷ್ಟಪಡಿಸಿದೆ.

ಇಷ್ಟು ಪ್ರಮಾಣದಲ್ಲಿ ಅಮಾನತು ಮಾಡಿರುವ ಸುದ್ದಿ ನಿಜಕ್ಕೂ ಊಹಾಪೋಹದಿಂದ ಕೂಡಿದೆ , ನಿರ್ದಿಷ್ಟ ನಿಗಮ/ ವಿಭಾಗ/ ಘಟಕ ನಮೂದಿಸದೇ ಅಸ್ಪಷ್ಟತೆಯಿಂದ ಕೂಡಿರುವ ವರದಿಯಾಗಿದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸ್ಪಷ್ಟಪಡಿಸಿದೆ.

Related posts