ಸಿನಿಮಾ ಪ್ರಕ್ರಿಯೆಗಳಿಗೆ ರಾಜ್ ಪರಿವಾರ ಮುನ್ನುಡಿ; ‘ಫ್ಯಾಮಿಲಿ ಪ್ಯಾಕ್’ ಕೌತುಕ

ಬೆಂಗಳೂರು: ಲಾಕ್’ಡೌನ್ ನಿಯಮಾವಳಿಗಳು ಬಹುತೇಕ ಸಡಿಲವಾಗಿದೆ ಎಂದೇ ಹೇಳಬಹುದು. ಜೊತೆಗೆ ಸಿನಿಮಾ ಚಿತ್ರೀಕರಣಕ್ಕೂ ಅವಕಾಶ ದೊರೆತಿದ್ದು ಅದಾಗಲೇ ಸಿನಿಮಾ ನಿರ್ಮಾಣ ಪ್ರಕ್ರಿಯೆಗಳಿಗೆ ರಾಜ್ ಪರಿವಾರ ಮುನ್ನುಡಿ ಬರೆದಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

ಪಿ.ಆರ್.ಕೆ.ಪ್ರೊಡಕ್ಷನ್ಸ್‌ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವ ‘ಫ್ಯಾಮಿಲಿ ಪ್ಯಾಕ್’ ಚಿತ್ರದ ಮೊದಲ ಮೋಷನ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಿನಿ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.

https://www.youtube.com/watch?v=LAXYNn1hhgU&feature=emb_title

ಅರ್ಜುನ್ ಕುಮಾರ್ ಎಸ್ ಈ ‘ಫ್ಯಾಮಿಲಿ ಪ್ಯಾಕ್’ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಲಿಖಿತ್ ಶೆಟ್ಟಿ ನಾಯಕನಾಗಿ ಹಾಗೂ ಅಮೃತ ಅಯ್ಯಂಗಾರ್ ನಾಯಕಿಯಾಗಿ ನಟಿಸಲಿದ್ದು, ರಂಗಾಯಣ ರಘು, ದತ್ತಣ್ಣ, ಅಚ್ಯುತಕುಮಾರ್ ಮೊದಲಾದವರು ತೆರೆಹಂಚಿಕೊಳ್ಳಲಿದ್ದಾರೆ.

Related posts