ಲಡಾಖ್ ಗಡಿಯಲ್ಲಿ ಸಂಘರ್ಷ; 20 ಭಾರತೀಯ ಯೋಧರು, 43 ಚೀನಾ ಪಡೆ ಸೈನಿಕರ ಸಾವು

ದೆಹಲಿ: ಲಡಾಖ್ ಗಡಿಯಲ್ಲಿ ಭಾರತ ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿದೆ. ಉಭಯ ರಾಷ್ಟ್ರಗಳ ಯೋಧರ ಮಾರಣಹೋಮ ನಡೆಯುತ್ತಿದ್ದು, ಗಾಲ್ವಾನ್ ಕಣಿವೆಯಲ್ಲಿನ ಮಲ್ಲಯುದ್ಧದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ.

ಸೋಮವಾರ ರಾತ್ರಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ ಎಂದು ಲಡಾಕ್ ಗಡಿಭಾಗದ ವಿದ್ಯಮಾನಗಳ ಕುರಿತು ಭಾರತೀಯ ಸೇನೆ ಮಾಹಿತಿ ಬಹಿರಂಗಪಡಿಸಿದೆ.

ಇನ್ನೊಂದೆಡೆ ಭಾರತೀಯ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಚೀನಾ ಸೇನೆಯ 43 ಸೈನಿಕರು ಸಾವನ್ನಪ್ಪಿದ್ದಾರೆಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

Related posts