ಮಹಿಳಾ ಟಿ20 ವಿಶ್ವಕಪ್‍; ಭಾರತೀಯ ವನಿತೆಯರ ದಿಗ್ವಿಜಯ

ಮೆಲ್ಬರ್ನ್: ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಭಾರತ ತಂಡ ಜಯಭೇರಿ ಭಾರಿಸಿದೆ. ಈ ಮೂಲಕ ಭಾರತೀಯ ವಾಣಿಯೇಯರು ಸತತ ನಾಲ್ಕನೇ ಜಯ ದಾಖಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಮೆಲ್ಬರ್ನ್ ನ ಜಂಕ್ಷನ್ ಓವಲ್‍ನಲ್ಲಿ ನಡೆದ ಎ ಗುಂಪಿನ ತನ್ನ ಅಂತಿಮ ಪಂದ್ಯವನ್ನು ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 7 ವಿಕೆಟ್‍ಗಳಿಂದ ಗೆದ್ದುಕೊಂಡಿದೆ. ಇನ್ನೂ 32 ಎಸೆತಗಳು ಬಾಕಿ ಇರುವಾಗಲೇ ಶ್ರೀಲಂಕಾ ಭಾರತದ ವನಿತೆಯರಿಗೆ ಶರಣಾಗಿದೆ. ಶ್ರೀಲಂಕಾ ಒಡ್ಡಿದ 114 ರನ್‍ಗಳ ಗುರಿ ಬೆನ್ನತ್ತಿದ ಭಾರತ 14.4 ಓವರ್‌ಗಳಲ್ಲಿ 3 ವಿಕೆಟ್‍ಗಳನ್ನು ಕಳೆದುಕೊಂಡು ವಿಜಯದ ನಗೆ ಬೀರಿತು.

ಭಾರತದ ಪಾಲಿಗೆ ಶೆಫಾಲಿ ವರ್ಮಾ (47 ರನ್), ಹರ್ಮನ್‍ಪ್ರೀತ್ ಕೌರ್ (15ರನ್), ಸ್ಮೃತಿ ಮಂದನಾ (17 ರನ್) ಗಳಿಸಿ ತಂಡಕ್ಕೆ ವಿಶ್ವ ಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

Related posts