ಆಕ್ಷೇಪಾರ್ಹ ಗೋಡೆ ಬರಹ; ಕಿಡಿಗೇಡಿಗಳಿಗಾಗಿ ಪೊಲೀಸ್ ಬೇಟೆ

ಬೆಂಗಳೂರು: ಪಾಕ್ ಪಘೋಷಣೆ ವಿವಾದದ ಬೆನ್ನಲ್ಲೇ ಇದೀಗ ಫ್ರೀ ಕಾಶ್ಮೀರ ಬರಹಗಳ ಮೂಲಕ ಕೃತ್ಯಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಕಲಬುರ್ಗಿಯಲ್ಲಿ ಫ್ರೀ ಕಾಶ್ಮೀರ ಎಂಬ ಗೋಡೆ ಬರಹ ಪತ್ತೆಯಾಯಿತು. ಪೊಲೀಸರು ದುಷ್ಕರ್ಮಿಗಳ ಹೆಜ್ಜೆ ಜಾಡು ಬೆನ್ನತ್ತುರುವಾಗಲೇ ಇತ್ತ ಬೆಂಗಳೂರಿನಲ್ಲೂ ಅಂತಹಾ ಪ್ರಕರಣ ನಡೆದಿದೆ.

ಡಿಕೆನ್ಸನ್‌ ರಸ್ತೆಯಲ್ಲಿರುವ ಸಂದೀಪ್‌ ಉನ್ನಿಕೃಷ್ಣನ್‌ ಏನ್‌ಕ್ಲೇವ್‌ ವಸತಿ ಸಮುಚ್ಚಯದ ಗೋಡೆಯ ಮೇಲೆ ಕಿಡಿಗೇಡಿಗಳು ವಿಕೃತಿ ಪ್ರದರ್ಶಿಸಿದ್ದಾರೆ.
“ಫ್ರೀ ಕಾಶ್ಮೀರ’ ಎಂಬ ಬರಹ ಮೂಲಕ ಸಾರ್ವಜನಿಕರನ್ನು ಕೆಣಕುವ ಪ್ರಯಾಂತ ನಡೆದಿದೆ. ಸಿಎಎ ವಿರೋಧಿ ಬರಹಗಳು ಹಾಗೂ ಪ್ರಧಾನಿ ಮೋದಿ ಬಗ್ಗೆ ಆಕ್ಷೇಪಾರ್ಹ ಪದಗಳನ್ನೂ ಬರೆಯಲಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Related posts