ಹೈದರಾಬಾದ್ ಎನ್ಕೌಂಟರ್ ನಡೆಸಿದ್ದು ಹುಬ್ಬಳ್ಳಿಯ ಹುಲಿ

ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಹೈದ್ರಾಬಾದ್ ವೈದ್ಯೆಯ ರೇಪ್ ಆಂಡ್ ಮರ್ಡರ್ ಪ್ರಕರಣದ ಆರೋಪಿಗಳಿಗೆ ಸರಿಯಾದ ಶಾಸ್ತ್ರಿಯಾಗಿದೆ. ಪ್ರಕರಣ ಸಂಬಂಧ ತನಿಖೆ ಹಿನ್ನೆಲೆಯಲ್ಲಿ ಅತ್ಯಾಚಾರ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆದುಕೊಂಡು ಪೊಲೀಸರು ತೆರಳಿದ್ದರು.. ಚಟಾನ್ ಪಲ್ಲಿ ಬ್ರಿಡ್ಜ್ ಬಳಿ ಮುಂಜಾನೆ ತೆರಳಿದ್ದ ಸಂದರ್ಭದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಹೀಗಾಗಿ  ಆತ್ಮರಕ್ಷಣೆಗಾಗಿ ಪೊಲೀಸರು ಎಲ್ಲಾ ಆರೋಪಿಗಳನ್ನು ಎನ್’ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.

ಈ ಎನ್ ಕೌಂಟರ್ ಮಾಡಿದ್ದು ಯಾರೂ ಎಂದು ನೋಡಲು ಹೋದರೆ, ಆ ಅಧಿಕಾರಿ ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ. ಈ ಎನ್‌ಕೌಂಟರ್ ಹುಬ್ಬಳ್ಳಿ ಮೂಲಕ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡ ನಡೆಸಿದೆ. ವಿಶ್ವನಾಥ್ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಇವರು ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದವರು, ಇವರು ಈ ಹಿಂದೆ  ವಾರಂಗಲ್ ಆ್ಯಸಿಡ್ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ್ದರು.

ಯಾರು ಈ ವಿಶ್ವನಾಥ್

ಎನಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ ಸಜ್ಜನರ್ ಮೂಲತಃ ಕರ್ನಾಟಕದ ಹುಬ್ಬಳ್ಳಿಯ ಪಗಣಿ ಓಣಿಯವರು. ತಂದೆ ಚನ್ನಬಸಪ್ಪ ಬಿ ಸಜ್ಜನ್, ಟ್ಯಾಕ್ಸ್‌ ಕನ್ಸಲ್ಟಂಟ್ ಆಗಿ ಕೆಲಸ‌ ಮಾಡುತ್ತಿದ್ದರು. ಮೂರು ಜನ ಮಕ್ಕಳ‌ ಪೈಕಿ ವಿಶ್ವನಾಥ ಸಜ್ಜನರ್ ಕಿರಿಯರು. ಹಿರಿಯ ಸಹೋದರ ಡಾ. ಮಲ್ಲಿಕಾರ್ಜುನ ಸಜ್ಜನರ್ ಮಕ್ಕಳ ತಜ್ಞರು‌.

ವಿಶ್ವನಾಥ ಸಜ್ಜನರ್, ಹುಬ್ಬಳ್ಳಿಯ ಲಾಯ್ಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದರು. ಬಳಿಕ ಜೆಜಿ ಕಾಮರ್ಸ್ ಕಾಲೇಜಿನಲ್ಲಿ  ಬಿಕಾಂ ವ್ಯಾಸಂಗ ಪೂರೈಸಿ, ಕರ್ನಾಟಕದ ವಿಶ್ವವಿದ್ಯಾಲಯದಲ್ಲಿ ಕೌಶಾಳಿಯಲ್ಲಿ ಎಂಬಿಎ ವ್ಯಾಸಂಗ ನಡೆಸಿದ್ದಾರೆ. 1989 MBA ಪದವಿ ಗಳಿಸಿದ ಸಜ್ಜನರ್, 1996 ಯುಪಿಎಸ್ಇ ಪರೀಕ್ಷೆ ತೇರ್ಗಡೆ ಹೊಂದಿದ್ದರು. ಬಳಿಕ ಆಂದ್ರ ಪ್ರದೇಶದ ಕೇಡರ್ ಅಧಿಕಾರಿಯಾಗಿ ಸೇವೆಗೆ ನಿಯುಕ್ತಿಗೊಂಡಿದ್ದರು.

 

Related posts