ದೆಹಲಿ: ನಾನಿನ್ನೂ ಬದುಕಿದ್ದೇನೆ, ಸಾಧ್ಯವೇ ಭಾರತಕ್ಕೆ ಬರುತ್ತೇನೆ ಎಂದು ಹಿರಿಯ ರಾಜಕಾರಣಿ, ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಹೇಳಿದ್ದಾರೆ.
ಅಮರ್ ಸಿಂಗ್ ಮೃತಪಟ್ಟಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಇದರಿಂದಾಗಿ ಅವರ ಬೆಂಬಲಿಗರು ಗಲಿಬಿಲಿಗೊಂಡಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಮರ್ ಸಿಂಗ್ ತಾನಿನ್ನೂ ಬದುಕಿದ್ದೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
‘ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸಿಂಗಾಪುರದಲ್ಲಿದ್ದೇನೆ. ಚಿಕಿತ್ಸೆ ಮುಗಿಸಿ ಭಾರತಕ್ಕೆ ವಾಪಸ್ ಆಗುತ್ತೇನೆ’ ಎಂದು ಅಮರ್ ಸಿಂಗ್ ವಿಡಿಯೋ ಮಾಡಿ ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ. ‘ಟೈಗರ್ ಜಿಂದಾ ಹೈ’ ಎಂಬ ಶೀರ್ಷಿಕೆ ನೀಡಿ ಅವರು ಈ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.