‘ನೀರಕಡ್ಡಿ ತಂಬುಳಿ’ ಆಹ್ಲಾದವೂ ಹೌದು.. ಆರೋಗ್ಯಕರವೂ ಹೌದು..

ಬೇಸಿಗೆಯ ಬೇಗೆಯ ನಡುವೆ ದಾಹ ತಣಿಸಲು ಮಜ್ಜಿಗೆ ಸೂಕ್ತ.. ಅದಷ್ಟೇ ಅಲ್ಲ ಅದರ ಜೊತೆ ‘ನೀರಕಡ್ಡಿ ತಂಬುಳಿ’ ಕೂಡಾ ಒಳ್ಳೆಯದು.  ‘ನೀರಕಡ್ಡಿ ತಂಬುಳಿ’ ಸೇವಿಸಿದರೆ.. ಆ ಆಹ್ಲಾದಕ್ಕೆ ಇನ್ನಾವುದೂ ಸಾಟಿ ಇಲ್ಲ. ಊಟದ ಜೊತೆಗೂ ಇದು ಸ್ವಾದಿಷ್ಟ. ಹಾಗಾಗಿ  ‘ನೀರಕಡ್ಡಿ ತಂಬುಳಿ’ ಇಷ್ಟಪಡುವವರೇ ಹೆಚ್ಚು.

https://kitchen.trendyangel.in/recipes/peperomia-pellucida-thambuli/

ಬೇಕಾದ ಸಾಮಾಗ್ರಿ:

  • ತೆಂಗಿನತುರಿ 1 ಕಪ್
  • ಜೀರ 1 s
  • ಹಸಿಮೆಣಸು 1
  • ನೀರಕಡ್ಡಿ ಅರ್ಧ ಕಪ್
  • ಮಜ್ಜಿಗೆ ಅಥವಾ ಮೊಸರು 1 ಕಪ್
  • ಎಣ್ಣೆ 2 ಚಮಚ
  • ಬೆಳ್ಳುಳ್ಳಿ 4
  • ಕೆಂಪು ಮೆಣಸು 1
  • ಸಾಸಿವೆ 1 s
  • ಕರಿಬೇವು
  • ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: 

  • ಮೊದಲಿಗೆ ನೀರಕಡ್ಡಿಯನ್ನು ಚೆನ್ನಾಗಿ ತೊಳೆದು, ಅದನ್ನು ಕಟ್ ಮಾಡಬೇಕು. ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ. ಬೆಂದ ನಂತರ ನೀರನ್ನು ಸೋಸಿ ಅಥವಾ ತಣ್ಣಗಾಗಲು ಬಿಡಿ.
  • ಒಂದು ಮಿಕ್ಸಿ ಜಾರಿನಲ್ಲಿ ಕಾಯಿತುರಿ, ಜೀರಿಗೆ, ಹಸಿಮೆಣಸು, ಬೇಯಿಸಿದ ನೀರಕಡ್ಡಿ , ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಒಂದು ಪಾತ್ರೆಗೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಮಜ್ಜಿಗೆ ಅಥವ ಮೊಸರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
  • ಒಂದು ಚಿಕ್ಕ ಬಾಣಲೆಯಲ್ಲಿ ಎಣ್ಣೆ, ಬೆಳ್ಳುಳ್ಳಿ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ತಂಬುಳಿಗೆ ಸೇರಿಸಿದರೆ ರುಚಿಯಾದ ನೀರಕಡ್ಡಿ ತಂಬುಳಿ ಸಿದ್ಧವಾಗುತ್ತದೆ. ಇದನ್ನು ಹಾಗೆಯೇ ಕುಡಿಯಬಹುದು ಅಥವಾ ಊಟದ ಜೊತೆ ಸವಿಯಬಹುದು.

ಇದನ್ನೂ ನೋಡಿ.. ಅಪರೂಪದಲ್ಲಿ ಅಪರೂಪವಾಗುತ್ತಿದೆ ಸ್ವಾದಿಷ್ಟದ ಸ್ವೀಟು ‘ಕಾಯಿ ಸುಕ್ಕಿನ ಉಂಡೆ’

 

Related posts