ಕೊರೋನಾ ವೈರಾಣು ತಲ್ಲಣ ಸೃಷ್ಠಿಸಿದೆ. ಅದರಲ್ಲೂ ಮುಂಬೈ ಮಹಾನಗರದಿಂದ ಆತಂಕಕಾರಿ ಮಾಹಿತಿ ಹೊರಬರುತ್ತಿದೆ. ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಬೇಕಿದೆ.
ಮುಂಬೈ: ಕೊರೋನಾ ವೈರಾಣು ಇದೀಗ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಭೀತಿಯ ಅಲೆಯನ್ನೇ ಸೃಷ್ಟಿಸಿದೆ. ದಿನೇದಿನೇ ಸೋಂಕು ಹೆಚ್ಚುತಲಿದ್ದು ಇದೀಗ ಸಮುದಾಯದಲ್ಲಿ ಹಬ್ಬುವ ಹಂತಕ್ಕೆ ತಲುಪಿರುವುದು ದುರಾದೃಷ್ಟಕರ ಸಂಗತಿ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕೂಡಾ ಮುಂಬೈನಲ್ಲಿ ಕೋವಿಡ್-೧೯ ವೈರಾಣು ಸಮುದಾಯ ಹಂತ ತಲುಪಿದೆ ಎಂದು ಹೇಳಿದ್ದು ಹೈ ಅಲರ್ಟ್ ಘೋಷಿಸಿದೆ.
ಈಗಾಗಲೇ ಸುಮಾರು 34 ಜನರನ್ನು ಬಳಿ ಪಡೆದಿರುವ ಕೊರೋನಾ ಹೆಮ್ಮಾರಿ ವೈರಸ್, ಇನ್ನೂ 525 ಮಂದಿಯನ್ನು ಆಸ್ಪತ್ರೆಪಾಲು ಮಾಡಿದೆ.
ಈ ನಡುವೆ ಮೃತಪಟ್ಟವರಲ್ಲಿ 11 ಮಂದಿ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿರುವುದರಿಂದಾಗಿ ಈ ಸೋಂಕು ಸಮುದಾಯದ ಹಂತ ತಲುಪಿದೆ ಎಂದು ಸ್ಥಳೀಯ ಆಡಳಿತ ತೀರ್ಮಾನಕ್ಕೆ ಬಂದಿದೆ.
- ಪ್ರಸ್ತುತ ಪರಿಸ್ಥಿತಿಯಲ್ಲಿ ಮುಂಬೈ ನಗರಿಯೇ ಆತಂಕದ ಸ್ಥಳ ಎಂಬಂತಾಗಿದೆ.
- ಪ್ರಮುಖವಾಗಿ ಮುಂಬೈನ ಸ್ಲಂ ನಿವಾಸಿಗಳಲ್ಲಿಯೇ ವೈರಸ್ ಹೆಚ್ಚು ಕಾಣಿಸಿಕೊಂಡಿವೆ.
- ವೊರ್ಲಿ, ಪ್ರಭಾದೇವಿ ಮತ್ತು ಪರೇಲ್ ನಲ್ಲಿರುವ ಫಿಶರ್ ಮೆನ್ ಕಾಲೋನಿಯಲ್ಲಿ ಸಾಕಷ್ಟು ಸೋಂಕಿತರಿದ್ದಾರೆ.
- ಬಾಂದ್ರಾ, ಅಂಧೇರಿ, ಕುರ್ಲಾ, ಧರವಿ, ನೆಹರು ನಗರದಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.
- 50ಕ್ಕೂ ಹೆಚ್ಚುವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯರಲ್ಲಿಯೂ ವೈರಸ್ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ.
ಮುಂಬೈ ಮಹಾನಗರದಲಲ್ಲಿ ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಕಂಟಾಮಿನೇಟೆಡ್ ಕ್ಲಸ್ಟರ್ ಪ್ರದೇಶವೆಂದು ಘೋಷಣೆ ಮಾಡಿ ಆ ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಗುರುತಿಸಲಾಗುತ್ತಿದೆ. ಈ ಪ್ರದೇಶಗಳನ್ನು ಸೀಲ್ ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಮುಂಬೈ ಬೆಳವಣಿಗೆ ನಂತರ ಗುಜರಾತ್, ದೆಹಲಿ, ಕರ್ನಾಟಕ ಸಹಿತ ರೆಡ್ ಝೋನ್ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.