ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತುಳುನಾಡ ವೈಭವ ಗರಿಗೆದರಿದೆ.
ಇತಿಹಾಸದಲ್ಲೇ ಮೊದಲೆಂಬಂತೆ ಬೆಂಗಳೂರಿನಲ್ಲಿ ಕಂಬಳ ಆಯೋಜಿತವಾಗಿದ್ದು, ಅರಮನೆ ಮೈದಾನದಲ್ಲಿ ಈ ಮಹಾ ವೈಭವಕ್ಕೆ ಚಾಲನೆ ಸಿಕ್ಕಿದೆ.
ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ‘ನಮ್ಮ ಕಂಬಳ, ಬೆಂಗಳೂರು ಕಂಬಳ’ ಎಂಬ ಹೆಸರಿನಲ್ಲಿ ಕಂಬಳ ಆಯೋಜಿತವಾಗಿದೆ.
‘ನಮ್ಮ ಕಂಬಳ, ಬೆಂಗಳೂರು ಕಂಬಳ’ದ ವೈಶಿಷ್ಟ್ಯ ಹೀಗಿದೆ..
-
ಕಂಬಳದ ವೇದಿಕೆಗೆ ದಿವಂಗತ ನಟ ಪುನಿತ್ ರಾಜಕುಮಾರ್ ಹೆಸರಿಡಲಾಗಿದೆ.
-
ಕಂಬಳದ ಕರೆಗೆ ರಾಜ ಮಹಾರಾಜ ಎಂದು ಹೆಸರು ಇಡಲಾಗಿದೆ.
-
ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ.
-
ಸಾಮಾನ್ಯವಾಗಿ ಕಂಬಳ ಕೋಣಗಳು ಓಡುವ ಟ್ರ್ಯಾಕ್ 147 ಮೀಟರ್ ಉದ್ದ ಇರುತ್ತದೆ, ಆದರೆ ಬೆಂಗಳೂರು ಕಂಬಳದ ಟ್ರ್ಯಾಕ್ 155 ಮೀಟರ್ ಉದ್ದವಿದೆ.
-
ಸುಮಾರು 200 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ.
-
ಬೆಂಗಳೂರು ಕಂಬಳವನ್ನು ಲಕ್ಷಾಂತರ ಜನರು ವೀಕ್ಷಿಸಲಿದ್ದು, ಸೂಕ್ತ ವ್ಯವಸ್ಥೆ ಮಾಡಲಾಗಿದೆ.
-
ಸುಮಾರು 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದಾಗಿದೆ.
-
ಕಂಬಳ ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
-
ಕರಾವಳಿಯ ಹುಲಿ ವೇಶ ಕುಣಿತ ಈ ಕಂಬಳೋತ್ಸವಕ್ಕೆ ಆಕೆರ್ಷಣೆ ತುಂಬಲಿದೆ.