ಸಿಲಿಕಾನ್ ಸಿಟಿಯಲ್ಲಿ ತುಳುನಾಡ ಐಸಿರಿ.. ಹೊಸ ಚರಿತ್ರೆ ಬರೆದ ‘ಬೆಂಗಳೂರು ಕಂಬಳ’

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತುಳುನಾಡ ವೈಭವ ಗರಿಗೆದರಿದೆ.

ಇತಿಹಾಸದಲ್ಲೇ ಮೊದಲೆಂಬಂತೆ ಬೆಂಗಳೂರಿನಲ್ಲಿ ಕಂಬಳ ಆಯೋಜಿತವಾಗಿದ್ದು, ಅರಮನೆ ಮೈದಾನದಲ್ಲಿ ಈ ಮಹಾ ವೈಭವಕ್ಕೆ ಚಾಲನೆ ಸಿಕ್ಕಿದೆ.
ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ‘ನಮ್ಮ ಕಂಬಳ, ಬೆಂಗಳೂರು ಕಂಬಳ’ ಎಂಬ ಹೆಸರಿನಲ್ಲಿ ಕಂಬಳ ಆಯೋಜಿತವಾಗಿದೆ.

‘ನಮ್ಮ ಕಂಬಳ, ಬೆಂಗಳೂರು ಕಂಬಳ’ದ ವೈಶಿಷ್ಟ್ಯ ಹೀಗಿದೆ..

  • ಕಂಬಳದ ವೇದಿಕೆಗೆ ದಿವಂಗತ ನಟ ಪುನಿತ್ ರಾಜಕುಮಾರ್ ಹೆಸರಿಡಲಾಗಿದೆ.

  • ಕಂಬಳದ ಕರೆಗೆ ರಾಜ ಮಹಾರಾಜ ಎಂದು ಹೆಸರು ಇಡಲಾಗಿದೆ.

  • ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ.

  • ಸಾಮಾನ್ಯವಾಗಿ ಕಂಬಳ ಕೋಣಗಳು ಓಡುವ ಟ್ರ್ಯಾಕ್ 147 ಮೀಟರ್ ಉದ್ದ ಇರುತ್ತದೆ, ಆದರೆ ಬೆಂಗಳೂರು ಕಂಬಳದ ಟ್ರ್ಯಾಕ್ 155 ಮೀಟರ್ ಉದ್ದವಿದೆ.

  • ಸುಮಾರು 200 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ.

  • ಬೆಂಗಳೂರು ಕಂಬಳವನ್ನು ಲಕ್ಷಾಂತರ ಜನರು ವೀಕ್ಷಿಸಲಿದ್ದು, ಸೂಕ್ತ ವ್ಯವಸ್ಥೆ ಮಾಡಲಾಗಿದೆ.

  • ಸುಮಾರು 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದಾಗಿದೆ.

  • ಕಂಬಳ ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

  • ಕರಾವಳಿಯ ಹುಲಿ ವೇಶ ಕುಣಿತ ಈ ಕಂಬಳೋತ್ಸವಕ್ಕೆ ಆಕೆರ್ಷಣೆ ತುಂಬಲಿದೆ.

Related posts