ತಮಿಳುನಾಡಿನ ತಿರುಚಿಯಲ್ಲಿ ನಾಳೆ ರಾಷ್ಟ್ರೀಯ ರೈತ ಸಮಾವೇಶ; ಸಿಖ್ ಧರ್ಮದ ಲಾಂಛನ ಬಳಸಿದ ರೈತ ನಾಯಕರಿಗೆ ಅಡ್ಡಿ; ಕುರುಬೂರು ಶಾಂತಕುಮಾರ್ ಆಕ್ರೋಶ

ಮೈಸೂರು: ತಮಿಳುನಾಡಿನ ತಿರುಚಿಯಲ್ಲಿ ಮಂಗಳವಾರ ರಾಷ್ಟ್ರೀಯ ರೈತ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಭಾಗವಹಿಸಲು ಕರ್ನಾಟಕದಿಂದ ನೂರಾರು ರೈತರು ರೈಲು ಮೂಲಕ ತೆರಳಿದ್ದಾರೆ.

ತಮಿಳುನಾಡಿನ ತಿರುಚಿಯಲ್ಲಿ ನಡೆಯುವ ರಾಷ್ಟ್ರೀಯ ರೈತ ಸಮಾವೇಶಕ್ಕೆ ಕರ್ನಾಟಕದಿಂದ ನೂರಾರು ಸಂಖ್ಯೆಯ ರೈತರು ರೈತ ನಾಯಕ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಭಾಗಿಯಾಗುತ್ತಿಧದು, ಈ ಅನ್ನದಾತರು ಮೈಸೂರಿನಿಂದ ರೈಲು ಮೂಲಕ ತೆರಳಿದ್ದಾರೆ.

ದೇಶಾದ್ಯಂತ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿ. ರೈತರ ಸಂಪೂರ್ಣ ಸಾಲಮನ್ನಾ. ಡಾ ಸ್ವಾಮಿನಾಥನ್ ವರದಿ ಜಾರಿ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಪ್ರಬಲಗೊಳಿಸಲು. ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ರಾಷ್ಟ್ರದ ಎಲ್ಲಾ ರಾಜ್ಯಗಳ ರೈತ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ಸಂಘಟನೆಯ ದಕ್ಷಿಣ ಭಾರತ ಸಂಚಾಲಕರೂ ಆದ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆಯ ಮುಖಂಡ ಜಗಜಿತ್ ಸಿಂಗ್ ದಲೆವಾಲಾ. ಮತ್ತಿತರ ಮುಖಂಡರನ ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆದ ಪೊಲೀಸರು, ಸಿಖ್ ಧರ್ಮದ ಲಾಂಛನವನ್ನು ಬಳಸದೆ ವಿಮಾನ ಪ್ರವೇಶಿಸಬೇಕೆಂಬ ಖ್ಯಾತೆ ತೆಗೆದಿದ್ದಾರೆ. ಬಳಿಕ ನಂತರ ಕಾಯ್ದಿರಿಸಿರುವ ವಿಮಾನ ಟಿಕೆಟ್ ರದ್ದುಗೊಳಿಸಿದ್ದಾರೆ. ಈ ಮೂಲಕ ವಾಮಮಾರ್ಗದ ಮೂಲಕ ಚಳುವಳಿಯನ್ನ ಹತ್ತಿಕುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದ್ದೆ ಎಂದು ಕುರುಬೂರು ಶಾಂತಕುಮಾರ್ ಆರೋಪಿಸಿದರು.

ದಕ್ಷಿಣ ಭಾರತದಲ್ಲಿ ರೈತ ಚಳುವಳಿಯ ಪ್ರಾಬಲ್ಯವನ್ನು ತಡೆಯಲು ಯತ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮುಖಂಡರಿಗೆ ತಮಿಳುನಾಡಿನ ರಾಷ್ಟ್ರೀಯ ರೈತ ಸಮಾವೇಶಕ್ಕೆ ಬರಲು ಅವಕಾಶ ಕಲ್ಪಿಸದಿದ್ದರೆ ದೇಶಾದ್ಯಂತ ಹೋರಾಟಕ್ಕೆ ಕರೆ ಕೊಡಬೇಕಾಗುತ್ತದೆ ಎಂದರು.

ಮೇಕೆದಾಟು ಅಣೆಕಟ್ಟೆ ನಿರ್ಮಿಸಿ ಸಂಕಷ್ಟಕಾಲದಲ್ಲಿ ಕಾವೇರಿ ನೀರನ್ನ ಬಳಸಿಕೊಳ್ಳುವ ಬಗ್ಗೆ ತಮಿಳುನಾಡಿನ ರೈತ ಮುಖಂಡರ ಜೊತೆ ಚರ್ಚಿಸಲು ತಂಜಾವೂರಿಯಲ್ಲಿ ಎರಡು ರಾಜ್ಯಗಳ ರೈತ ಮುಖಂಡರ ಸಭೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

Related posts