ಬೆಂಗಳೂರು: ಜಗತ್ತಿನಾದ್ಯಂತ ಕೊರೋನಾ ತಲ್ಲಣದ ತರಂಗ ಎಬ್ಬಿಸಿದೆ. ಇತ್ತ ಭಾತದಲ್ಲಿ ಕೋವಿಡ್ -19 ಮರಣ ಮೃದಂಗ ಭಾರಿಸುತ್ತಲಿದ್ದು ಭಯದ ವಾತಾವರಣ ಮೂಡಿಸಿದೆ. ಅದರಲ್ಲೂ ದೆಹಲಿಯ ನಿಜಾಮುದ್ದೀನ್’ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದವರು ಯಾರೆಲ್ಲಾ ಎಂಬ ಬಗ್ಗೆ ಮಾಹಿತಿ ಪಡೆಯುವುದೇ ಈಗ ಪ್ರಯಾಸದ ಸಂಗತಿಯಾಗಿದೆ.
ದೆಹಲಿಯ ಆ ಸಭೆಯಲ್ಲಿ ದೇಶ ವಿದೇಶಗಳ ಸುಮಾರು 2000 ಮಂದಿ ಪಾಲ್ಗೊಂಡಿದ್ದರೆಂಬುದು ಪ್ರಾಥಮಿಕ ಮಾಹಿತಿ. ಆ ಸಭೆಯಲ್ಲಿ ಪಾಲ್ಗೊಂಡವರ ಪೈಕಿ ನೂರಾರು ಮಂದಿ ಕೊರೋನಾ ಸೋಂಕಿತರಾಗಿದ್ದು ಹಲವಾರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಸೋಂಕಿತರಿರುವವರ ಪೈಕಿ ಹಾಗೂ ಸಾವನ್ನಪ್ಪಿದವರಲ್ಲಿ ದೆಹಲಿ ಕಾರ್ಯಕ್ರಮದಲ್ಲಿ ಭಾಗಿಯಾದವರು ಅನೇಕರು ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಈ ಭೀತಿಯ ಸನ್ನಿವೇಶ ಸೃಷ್ಟಿಯಾಗಿದೆ.
ಈ ನಡುವೆ ಸಾವಿರಕ್ಕೂ ಹೆಚ್ಚುಮಂದಿಯನ್ನು ಗುರುತಿಸಿ ಕ್ವಾರಂಟೈನ್’ನಲ್ಲಿಡಲಾಗಿದೆ. ಆ ಸಭೆಯಲ್ಲಿ ಪಾಲ್ಗೊಂಡ ಅನೇಕರು ಇನ್ನೂ ಭೂಗತರಾಗಿದ್ದು, ಅವರು ಒಂದು ವೇಳೆ ಶೋಣಿತರಾಗಿದ್ದರೆ ಅವರ ಮೂಲಕ ಮತ್ತಷ್ಟು ಸೋಂಕು ಹರಡಬಹುದೇ ಎಂಬ ಆತಂಕ ಕಾಡಿದೆ. ಹಾಗಾಗಿ ಅಂಥವರಿಗಾಗಿ ಹುಡುಕಾಟ ಸಾಗಿದೆ. ದೆಹಲಿಯ ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗಿದ್ದವರು ನಮ್ಮ ರಾಜ್ಯದಲ್ಲಿದ್ದರೆ ಸ್ವಯಂ ಪ್ರೇರಿತರಾಗಿ ಆಗಮಿಸಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ.
ಈ ಸಂಬಂಧ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಹೇಳಿಕೆಯೊಂದನ್ನು ನೀಡಿದ್ದು, ಮಾರ್ಚ್ 8ರಿಂದ 28ರವರೆಗಿನ ಸಮಾವೇಶದಲ್ಲಿ ಭಾಗವಿಸಿದ್ದವರು ಎನ್ನಲಾದ 78 ಮಂದಿಯನ್ನು ಈಗಾಗಲೇ ಗುರುತಿಸಲಾಗಿದೆ. ಜೊತೆಗೆ ಇವರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಿ ಎಲ್ಲರಿಗೂ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುವುದು. ಇಂಥವರ ಬಗ್ಗೆ ಮಾಹಿತಿ ಇದ್ದಾರೆ ಇಂತಹವರು ಕೂಡಲೇ 080-29711171 ಸಹಾಯವಾಣಿಗೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.