ಪಾಕಿಸ್ತಾನ ಸರ್ಕಾರದ ಹೀನ ನಡೆ; ಕೊರೋನಾ ಸಂಕಷ್ಟ ಕಾಲದಲ್ಲೂ ಹಿಂದೂ, ಕ್ರಿಶ್ಚಿಯನ್’ರಿಗೆ ಆಹಾರ ನೀಡದೆ ತಾರತಮ್ಯ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲೂ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ಇದೀಗ ಸೋಂಕಿತರ ಸಂಖ್ಯೆ ೨೦೦೦ ಆಸುಪಾಸಿನಲ್ಲಿದೆ. ಅಲ್ಲಿನ ಸರ್ಕಾರ ಲಾಕ್ ಡೌನ್ ಕಡ್ಡಾಯ ಮಾಡಿಲ್ಲವಾದರೂ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಹಾಗಾಗಿ ಜನ ಸಾಮಾನ್ಯರಿಗೆ ಆಹಾರ ಸಾಮಾಗ್ರಿ ಸರಿಯಾಗಿ ಸಿಗುತ್ತಿಲ್ಲ. ಸರ್ಕಾರವೇ ಬಹುತೇಕ ಕಡೆ ಪಡಿತರ ನೀಡುತ್ತಿದೆಯಾದರೂ ಮುಸ್ಲಿಂ ಸಮುದಾಯದವರಿಗೆ ಮೊದಲ ಆದ್ಯತೆ. ಸರತಿಯ ಸಾಲಿನಲ್ಲಿ ಮುಸ್ಲಿಮರಿಗೆ ನೀಡಿದ ನಂತರ ಅಳಿದುಳಿದ ಮಾತ್ರ ತಮಗೆ ಸಿಗುತ್ತದೆ. ಒಂದು ವೇಳೆ ತಮಗೆ ಸಿಗದಿದ್ದಾಗ ಅಧಿಕಾರಿಗಳೆದುರು ಅಳಲು ತೋಡಿಕೊಂಡರೆ ಆಮೇಲೆ ಟ್ರಕ್’ನಲ್ಲಿ ಬರುತ್ತದೆ ಎಂದು ಹೇಳಿ ಯಾಮಾರಿಸ್ತಾರಂತೆ.

ಈ ರೀತಿಯ ಗೋಳು ರೆಹ್ರಿ ಘೋತ್‌ ಎಂಬಲ್ಲಿ ಆಗಾಗ್ಗೆ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಇದೇ ಮೊದಲಲ್ಲ. ಆದ್ರೆ ಕೊರೋನಾದಂತಹಾ ಸಂಕಷ್ಟ ಕಾಲದಲ್ಲೂ ಈ ರೀತಿಯ ಕಿರುಕುಳ ಸರಿಯಲ್ಲ ಎಂದು ಅತಂತ್ರ ಸ್ಥಿತಿಯಲ್ಲಿರುವ ಮಂದಿ ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ನೆನಪಾದ ಪೌರತ್ವ ವಿಚಾರ:

ಕೆಲವು ವಾರಗಳ ಹಿಂದಷ್ಟೇ ಭಾರತ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಾಗ ಪಾಕಿಸ್ತಾನದಲ್ಲಿನ ಜಾತಿ ರಾಜಕಾರಣ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರಾಗಿರುವ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮೀಯರ ಮೇಲೆ ಅಲ್ಲಿನ ಸರ್ಕಾರವೂ ದೌರ್ಜನ್ಯ ನಡೆಸುತ್ತಿದ್ದು ಅಂಥವರಿಗೆ ಆಸರೆಯಾಗಿ ನಿಲ್ಲುವ ಉದ್ದೇಶ ಮೋದಿ ಸರ್ಕಾರದ್ದಾಗಿದೆ. ಇದೀಗ ಪಾಕಿಸ್ತಾನದಲ್ಲಿ ಮತ್ತೆ ದುರ್ಜನ್ಯ ಮುಂದುವರಿದಿದ್ದು, ಕೊರೋನಾ ಸಾಂಕ್ರಾಮಿಕ ರೋಗ ಭೀತಿಯ ಸಂದರ್ಭದಲ್ಲೂ ತನ್ನ ನೆಲದಲ್ಲಿರುವ ಹಿಂದೂಗಳು ಹಾಗೂ ಕ್ರಿಶ್ಚಿಯನ್ನರಿಗೆ ಆಹಾರ ಸಾಮಾಗ್ರಿ ನೀಡದೆ ಧಾರ್ಮಿಕ ತಾರತಮ್ಯ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Related posts