ಇಂಡಿಯಾ ಅಲ್ಲ’ಭಾರತ’ ಅಥವಾ ‘ಹಿಂದೂಸ್ಥಾನ’; ಬದಲಾಗುತ್ತಾ ಹೆಸರು?

ದೆಹಲಿ: ದಿಲ್ಲಿ ಬದಲಿಗೆ ‘ದೆಹಲಿ’ ಎಂದು ಖಾಯಂ ಆಗಿ ಅನೇಕ ವರ್ಷಗಳೇ ಸಂದಿವೆ. ಒರಿಸ್ಸಾ ಬದಲಿಗೆ ‘ಒಡಿಶಾ’ ಮರುನಾಮಕರಣವಾಗಿದ್ದರೆ, ಬಾಂಬೆ ಬದಲಿಗೆ ‘ಮುಂಬೈ’ ಹೆಸರು ಇದೀಗ ಜಗಜ್ಜಾಹೀರಾಗಿದೆ. ಇತ್ತ ಕರ್ನಾಟಕದಲ್ಲೂ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ಮೈಸೂರು ಸಹಿತ ಹಲವು ನಗರಗಳ ಹೆಸರುಗಳೂ ಮರುನಾಮಕರಣಗೊಂಡು ನಾಡಿನ ಸೊಗಡಿನ ಮೂಲ ಅರ್ಥವನ್ನೇ ಪ್ರತಿಬಿಂಸಿವೆ. ಇದೆ ರೀತಿ ದೇಶದ ಹೆಸರನ್ನೂ ಮರುನಾಮಕರಣ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಇಂಡಿಯಾ ಬದಲಿಗೆ ‘ಭಾರತ’

ಇಂಡಿಯಾ ಬದಲಿಗೆ ‘ಭಾರತ’ ಅಥವಾ ‘ಹಿಂದೂಸ್ಥಾನ’ ಎಂದು ಹೆಸರು ಬದಲಾಗಬೇಕು ಎಂಬ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ದೆಹಲಿ ಮೂಲದ ‘ನಮಃ’ ಎಂಬ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಅರ್ಜಿಯ ವಿಚಾರಣೆ ಮುಂದೂಡಲ್ಪಟ್ಟಿದೆ

ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ತಂದು ‘ಇಂಡಿಯಾ’ ಎಂಬ ಹೆಸರನ್ನು ‘ಭಾರತ’ ಅಥವಾ ‘ಹಿಂದೂಸ್ಥಾನ’ ಎಂದು ಬದಲಾಯಿಸುವಂತೆ ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಹಿಂದೂಸ್ಥಾನವಾಗಿದ್ದ ನಮ್ಮ ದೇಶದ ಹೆಸರು, ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ‘ಇಂಡಿಯಾ’ ಆಗಿ ಬದಲಾಗಿದೆ. ಈ ಹೆಸರನ್ನು ಭಾರತ ಅಥವಾ ಹಿಂದೂಸ್ಥಾನವಾಗಿ ಮರುನಾಮಕರಣ ಮಾಡಬೇಕಿದೆ ಎಂದು ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದ ಗಮನಸೆಳೆದಿದ್ದಾರೆ.

ವಿನೂತನ ಅಭಿಯಾನ

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ #ByeByeIndiaOnlyBharat ಎಂಬ ಅಭಿಯಾನ ಆರಂಭವಾಗಿದ್ದು, ಸಾವಿರಾರು ಜನ ಈ ಅಭಿಯಾನವನ್ನು ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ.. ಸಂಶೋಧಕರ ಯಶೋಗಾಥೆ; ಕಿಲ್ಲರ್ ಕೊರೋನಾಗೆ ಔಷಧಿ ಸಿದ್ದ

 

 

Related posts